ETV Bharat / sports

ಲೆಜೆಂಡ್ಸ್‌ ಕ್ರಿಕೆಟ್‌ ಲೀಗ್: ಗಂಗೂಲಿ ಭಾರತ ತಂಡದ ನಾಯಕ, ಪಂದ್ಯ ಎಲ್ಲಿ? ಯಾವಾಗ?

author img

By

Published : Aug 12, 2022, 3:14 PM IST

ಲೆಜೆಂಡ್​ ಕ್ರಿಕೆಟ್ ಲೀಗ್​ನ 2ನೇ ಆವೃತ್ತಿ ಸೆಪ್ಟೆಂಬರ್​​ 16ರಂದು ಶುರುವಾಗಲಿದೆ. ಸೌರವ್​ ಗಂಗೂಲಿ ಮತ್ತೊಮ್ಮೆ ನಾಯಕನಾಗಿ ಕ್ರಿಕೆಟ್‌ ಕ್ರೀಸ್‌ಗಿಳಿಯುತ್ತಿದ್ದಾರೆ.

Legends League Cricket
Legends League Cricket

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಲೆಜೆಂಡ್ಸ್​​ ಕ್ರಿಕೆಟ್ ಲೀಗ್​ನ ಎರಡನೇ ಆವೃತ್ತಿ ಸೆಪ್ಟೆಂಬರ್​​ 16ರಂದು ಪಶ್ಚಿಮ ಬಂಗಾಳದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ. ಭಾರತದ ಮಹರಾಜಸ್​ ತಂಡಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ನಾಯಕರಾಗಿದ್ದಾರೆ. ಇವರ ನಾಯಕತ್ವದ ತಂಡ ರೆಸ್ಟ್​​ ಆಫ್​ ದಿ ವರ್ಲ್ಡ್​​ ತಂಡದೆದುರು ತಮ್ಮ ಮೊದಲ ಪಂದ್ಯ ಆಡಲಿದೆ. ಈ ತಂಡದ ನಾಯಕತ್ವ ಜವಾಬ್ದಾರಿಯನ್ನು ಇಂಗ್ಲೆಂಡ್​​ನ ಇಯಾನ್ ಮಾರ್ಗನ್​ ವಹಿಸಿಕೊಂಡಿದ್ದಾರೆ.

ಭಾರತ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿಯೇ ಲೆಜೆಂಡ್ಸ್​ ಕ್ರಿಕೆಟ್ ಲೀಗ್​ನ ಎರಡನೇ ಆವೃತ್ತಿ ಆಯೋಜಿಸುತ್ತಿರುವುದು ಹೆಮ್ಮೆ ಉಂಟು ಮಾಡಿದೆ ಎಂದು ಲೀಗ್​​ನ ಆಯುಕ್ತ ರವಿಶಾಸ್ತ್ರಿ ತಿಳಿಸಿದರು. ಟೂರ್ನಿಯಲ್ಲಿ ನಾಲ್ಕು ತಂಡಗಳು ಭಾಗಿಯಾಗಲಿದ್ದು, 10 ದೇಶದ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಎರಡನೇ ಸೀಸನ್​ನಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಇಂಡಿಯಾ ಮಹಾರಾಜಸ್ ತಂಡದಲ್ಲಿ ಭಾರತದ ಸೆಹ್ವಾಗ್​, ಕೈಫ್​, ಎಸ್​ ಶ್ರೀಶಾಂತ್​ ಸೇರಿದಂತೆ ಮಾಜಿ ಆಟಗಾರರಿದ್ದಾರೆ.

ಭಾರತ ಮಹರಾಜಸ್​ ತಂಡ: ಸೌರವ್ ಗಂಗೂಲಿ (ಕ್ಯಾಪ್ಟನ್​​), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಎಸ್ ಬದ್ರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಪ್ರಗ್ಯಾನ್ ಓಜಾ, ಅಜಯ್ ಜಡೇಜಾ, ಶರ್ಮಾ ಸಿಂಗ್ ಹಾಗು ಜೋಗಿಂದರ್

ರೆಸ್ಟ್ ಆಫ್ ದಿ ವರ್ಲ್ಡ್ ತಂಡ: ಇಯಾನ್ ಮಾರ್ಗನ್ (ನಾಯಕ), ಹರ್ಷಲ್ ಗಿಬ್ಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಯರ್, ಲೆಂಡ್ಲ್ ಸಿಮನ್ಸ್, ಜಾಕ್ವೆಸ್ ಕಾಲಿಸ್, ನಾಥನ್ ಮೆಕಲಮ್, ಜಾಂಟಿ ರೋಡ್ಸ್, ಮಶ್ರಫೆ ಮೊರ್ತಜಾ, ಅಸ್ಗರ್ ಅಫ್ಘಾನ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇಯ್ನ್, ಹ್ಯಾಮಿಲ್ಟನ್ ಒ ಬ್ರೆಟ್ಟಾಬ್ಜಾ, ದಿನೇಶ್ ರಾಮ್ದಿನ್ ಮತ್ತು ಮಿಚೆಲ್ ಜಾನ್ಸನ್

ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ ಆಡಲು ಸಜ್ಜಾದ ರಾಹುಲ್: ನಾಯಕತ್ವ ಸ್ಥಾನ ಬಿಟ್ಟುಕೊಟ್ಟ ಶಿಖರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.