ETV Bharat / sports

ಡ್ರೆಸ್ಸಿಂಗ್ ರೂಮ್​ ಉತ್ಸಾಹಭರಿತವಾಗಿದ್ದರಿಂದಲೇ ಉತ್ತಮ ಫಲಿತಾಂಶ: ರೋಹಿತ್ ಶರ್ಮಾ

author img

By ETV Bharat Karnataka Team

Published : Nov 13, 2023, 8:02 AM IST

Rohit Sharma reaction on match winning: ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು 160 ರನ್‌ಗಳಿಂದ ಸೋಲಿಸುವ ಮೂಲಕ ಭಾರತವು ವಿಶ್ವಕಪ್‌ನ ಲೀಗ್ ಹಂತದಲ್ಲಿ ಅಜೇಯವಾಗಿ ಉಳಿದಿದೆ. ಭಾರತ ತಂಡವು ಅಂಕಪಟ್ಟಿಯಲ್ಲಿ ಟಾಪರ್‌ ಆಗಿ ಉಳಿದಿದೆ.

Rohit Sharma
ರೋಹಿತ್ ಶರ್ಮಾ

ಬೆಂಗಳೂರು (ಕರ್ನಾಟಕ): ''ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್‌ನಲ್ಲಿ ಒಂಬತ್ತು ಲೀಗ್ ಪಂದ್ಯಗಳಲ್ಲಿ ತಮ್ಮ ತಂಡವು ಹೇಗೆ ಪ್ರದರ್ಶನ ನೀಡಿತು ಎಂಬುದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ'' ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತವು ನೆದರ್ಲೆಂಡ್ಸ್ ತಂಡವನ್ನು 160 ರನ್‌ಗಳಿಂದ ಮಣಿಸಿತು.

ನೆದರ್ಲೆಂಡ್ಸ್ ತಂಡವನ್ನು ಸೋಲಿಸಲು ಭಾರತ ಆಲ್ ರೌಂಡ್ ಪ್ರದರ್ಶನವನ್ನು ನೀಡಿತು. ಮೊದಲು ಶ್ರೇಯಸ್ ಅಯ್ಯರ್ ಅಜೇಯರಾಗಿ 128 ರನ್​ ಗಳಿಸಿದರು ಹಾಗೂ ಕೆ ಎಲ್ ರಾಹುಲ್ 102 ರನ್‌ಗಳ ಕಲೆ ಹಾಕಿದ್ದರಿಂದ ತಂಡವು 410/4 ಬೃಹತ್ ಮೊತ್ತವನ್ನು ದಾಖಲಿಸಿತು. ನಂತರ ಎದುರಾಳಿಗಳನ್ನು 250 ರನ್‌ಗಳಿಗೆ ಆಲೌಟ್ ಮಾಡಿ ಸುಲಭ ಗೆಲುವು ದಾಖಲಿಸಿತು.

ನಾಯಕ ರೋಹಿತ್ ಶರ್ಮಾ ಮಾತು: "ನಾವು ಪಂದ್ಯಾವಳಿಯನ್ನು ಪ್ರಾರಂಭಿಸಿದಾಗಿನ ಸಮಯದಿಂದಲೂ ಆಟವನ್ನು ಚೆನ್ನಾಗಿ ಆಡಬೇಕು ಎಂದು ಯೋಚಿಸಿದ್ದೇವೆ. ನಾವು ಎಂದಿಗೂ ಹೆಚ್ಚು ಮುಂದೆ ನೋಡಲು ಬಯಸುವುದಿಲ್ಲ, ಏಕೆಂದರೆ ಇದು ಸುದೀರ್ಘ ಪಂದ್ಯಾವಳಿಯಾಗಿದೆ. ಆಟದ ಮೇಲೆ ಕೇಂದ್ರೀಕರಿಸಿ, ಅದನ್ನು ಚೆನ್ನಾಗಿ ಆಡಿದ್ದೇವೆ'' ಎಂದು ನಾಯಕ ರೋಹಿತ್ ಶರ್ಮಾ ಹೇಳಿದರು.

''ಒಂಬತ್ತು ವಿವಿಧ ಸ್ಥಳಗಳಲ್ಲಿ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮ್ಮ ತಂಡದ ಆಟಗಾರರು ಹೊಂದಿಕೊಂಡಿದ್ದಾರೆ, ಜೊತೆಗೆ ಆಡುತ್ತಿದ್ದಾರೆ. ನಾವು ಈ ಒಂಬತ್ತು ಪಂದ್ಯಗಳಲ್ಲಿ ಹೇಗೆ ಆಡಿದ್ದೇವೆ ಎಂಬುದರ ಬಗ್ಗೆ ತುಂಬಾ ಸಂತೋಷವಾಗಿದೆ. ಮೊದಲನೇ ಪಂದ್ಯದಿಂದ ಇಂದಿನವರೆಗೆ ತುಂಬಾ ನಿಖರವಾಗಿ ಆಡಿದ್ದೇವೆ. ತಂಡದ ವಿಭಿನ್ನ ಆಟಗಾರರು ವಿಭಿನ್ನ ಸಮಯಗಳಲ್ಲಿ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದಾರೆ. ಪ್ರತಿಯೊಬ್ಬರೂ ಜವಾಬ್ದಾರಿಯನ್ನು ತೆಗೆದುಕೊಂಡು ಮತ್ತು ತಂಡಕ್ಕಾಗಿ ಶ್ರಮಿಸಿರುವುದು ಉತ್ತಮ ಸಂಕೇತವಾಗಿದೆ'' ಎಂದರು.

''ಡ್ರೆಸ್ಸಿಂಗ್ ರೂಮ್​ನ ವಾತಾವರಣ ಉತ್ಸಾಹಭರಿತವಾಗಿರುವುದರಿಂದ ಉತ್ತಮ ಫಲಿತಾಂಶ ಲಭಿಸಿದೆ'' ಎಂದ ರೋಹಿತ್ ಶರ್ಮಾ ಅವರು, ''ಬಹಳಷ್ಟು ನಿರೀಕ್ಷೆಗಳು ಇರುತ್ತವೆ. ನಾವು ಎಲ್ಲವನ್ನೂ ಬದಿಗಿಟ್ಟು, ಕೈಯಲ್ಲಿರುವ ಕೆಲಸದ ಮೇಲೆ ಕೇಂದ್ರೀಕರಿಸಲು ಬಯಸಿದ್ದೇವೆ. ನಾವು ಮೈದಾನದಲ್ಲಿ ಶಕ್ತಿ ಮೀರಿ ಆಟವಾಡಲು ಬಯಸಿದ್ದೇವೆ. ಇದರ ಪರಿಣಾಮವು ನಮ್ಮ ಪ್ರದರ್ಶನಗಳ ಮೇಲೆ ಪ್ರತಿಫಲಿಸುತ್ತದೆ" ಎಂದು ಅಭಿಪ್ರಾಯಪಟ್ಟರು.

ಅಜೇಯರಾಗಿ 128 ರನ್ ಗಳಿಸಿದ ಪಂದ್ಯದ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಶ್ರೇಯಸ್ ಅಯ್ಯರ್ ಅವರು, ನೆದರ್ಲ್ಯಾಂಡ್ಸ್ ವಿರುದ್ಧದ ಈ ಇನ್ನಿಂಗ್ಸ್‌ನಲ್ಲಿ ತಮ್ಮ ಬ್ಯಾಟಿಂಗ್​ ಪ್ರದರ್ಶನ ಕುರಿತು ಮಾತನಾಡಿದರು.

  • Diwali becomes even more special thanks to our cricket team!

    Congratulations to Team India on their fantastic victory against the Netherlands! Such an impressive display of skill and teamwork.

    Best wishes for the Semis! India is elated.

    — Narendra Modi (@narendramodi) November 12, 2023 " class="align-text-top noRightClick twitterSection" data=" ">

ಪ್ರಧಾನಿ ಮೋದಿ ಅಭಿನಂದನೆ: ಜೊತೆಗೆ, ವಿಶ್ವಕಪ್ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಜಯಗಳಿಸಿದ ಭಾರತ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು. "ನಮ್ಮ ಕ್ರಿಕೆಟ್ ತಂಡಕ್ಕೆ ದೀಪಾವಳಿಯು ಇನ್ನಷ್ಟು ವಿಶೇಷವಾಗಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಅದ್ಭುತ ವಿಜಯ ಸಾಧಿಸಿದ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು. ಪ್ರಭಾವಶಾಲಿ ಕೌಶಲ್ಯ ಮತ್ತು ತಂಡದ ಕೆಲಸ ಮಾಡಿದ್ದು, ಸೆಮಿಸ್‌ಗೆ ಶುಭಾಶಯಗಳು. ಭಾರತವು ಉತ್ಸುಕವಾಗಿದೆ" ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​: 9 ವರ್ಷದ ನಂತರ ವಿರಾಟ್​ಗೆ ವಿಕೆಟ್​; ಅನುಷ್ಕಾ ಸಂಭ್ರಮದ ಕ್ಷಣ ಹೇಗಿತ್ತು ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.