ETV Bharat / sports

ಆಸ್ಟ್ರೇಲಿಯಾ-ಶ್ರೀಲಂಕಾ ಪಂದ್ಯಕ್ಕೆ ವರುಣ ಅಡ್ಡಿ.. ಗ್ರೌಂಡ್ಸ್​ಮನ್​ಗೆ​ ಸಹಾಯ ಮಾಡಿದ ವಾರ್ನರ್​ಗೆ ಪ್ರಶಂಸೆಯ ಸುರಿಮಳೆ

author img

By ETV Bharat Karnataka Team

Published : Oct 17, 2023, 7:51 AM IST

ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ಕೊಂಚ ಸಮಯ ಮಳೆ ಅಡ್ಡಿಪಡಿಸಿದ ಕಾರಣ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಗ್ರೌಂಡ್ಸ್​ಮನ್​ ಆಗಿ ಕಂಡರು.

ICC Cricket World Cup  David Warner helps to groundsman  covers the field as rain disrupts the match  ಆಸ್ಟ್ರೇಲಿಯಾ ಶ್ರೀಲಂಕಾ ಪಂದ್ಯಕ್ಕೆ ವರುಣ ಅಡ್ಡಿ  ಗ್ರೌಂಡ್ಸ್​ಮನ್​ಗೆ​ ಸಹಾಯ ಮಾಡಿದ ವಾರ್ನರ್  ವಾರ್ನರ್​ಗೆ ಪ್ರಶಂಸೆಯ ಸುರಿಮಳೆ  ಏಕಾನಾ ಕ್ರಿಕೆಟ್ ಸ್ಟೇಡಿಯಂ  ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಪಂದ್ಯ  ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಗ್ರೌಂಡ್ಸ್​ಮನ್  ಕ್ರಿಕೆಟ್ ವಿಶ್ವಕಪ್ 2023 ಪಂದ್ಯ  ಡೇವಿಡ್ ವಾರ್ನರ್ ಗ್ರೌಂಡ್ಸ್‌ಮನ್​ಗೆ ಸಹಾಯ  ಕೆಲ ಸಮಯ ಮಳೆ ಸುರಿಯಿತು
ಗ್ರೌಂಡ್ಸ್​ಮನ್​ಗೆ​ ಸಹಾಯ ಮಾಡಿದ ವಾರ್ನರ್

ಲಖನೌ(ಉತ್ತರಪ್ರದೇಶ): ಇಲ್ಲಿನ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಕ್ರಿಕೆಟ್ ವಿಶ್ವಕಪ್ 2023 ಪಂದ್ಯವು ಕೊಂಚ ಸಮಯ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ಈ ವೇಳೆ ಡೇವಿಡ್ ವಾರ್ನರ್ ಗ್ರೌಂಡ್ಸ್‌ಮನ್​ಗೆ ಸಹಾಯ ಮಾಡಿದ್ದು, ಎಲ್ಲರ ಮನಗೆದ್ದರು.

36ರ ಹರೆಯದ ವಾರ್ನರ್ ಈ ಹಿಂದೆ ಶ್ರೀಲಂಕಾದ ಪಾಥುಮ್ ನಿಸ್ಸಾಂಕಾ ಮತ್ತು ಕುಸಲ್ ಮೆಂಡಿಸ್ ಅವರ ಸಹ ಕ್ಯಾಚ್​ ಹಿಡಿದಿದ್ದರು. ಶ್ರೀಲಂಕಾ ಸ್ಕೋರ್ 32.1 ಓವರ್‌ಗಳಿಗೆ 4 ವಿಕೆಟ್​ ಕಳೆದುಕೊಂಡು 178 ರನ್​ಗಳನ್ನು ಕಲೆ ಹಾಕಿದ್ದಾಗ ಕೆಲ ಸಮಯ ಮಳೆ ಸುರಿಯಿತು. ಆಗ ಚರಿತ್ ಅಸಲಂಕಾ ಅವರೊಂದಿಗೆ ಧನಂಜಯ್ ಡಿ ಸಿಲ್ವಾ ಕ್ರೀಸ್‌ನಲ್ಲಿದ್ದರು. ಆಗ ಗ್ರೌಂಡ್ಸ್​ಮನ್​ ಆಗಿ ಡೇವಿಡ್​ ವಾರ್ನರ್​ ಕಾಣಿಸಿಕೊಂಡರು.

ICC Cricket World Cup  David Warner helps to groundsman  covers the field as rain disrupts the match  ಆಸ್ಟ್ರೇಲಿಯಾ ಶ್ರೀಲಂಕಾ ಪಂದ್ಯಕ್ಕೆ ವರುಣ ಅಡ್ಡಿ  ಗ್ರೌಂಡ್ಸ್​ಮನ್​ಗೆ​ ಸಹಾಯ ಮಾಡಿದ ವಾರ್ನರ್  ವಾರ್ನರ್​ಗೆ ಪ್ರಶಂಸೆಯ ಸುರಿಮಳೆ  ಏಕಾನಾ ಕ್ರಿಕೆಟ್ ಸ್ಟೇಡಿಯಂ  ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಪಂದ್ಯ  ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಗ್ರೌಂಡ್ಸ್​ಮನ್  ಕ್ರಿಕೆಟ್ ವಿಶ್ವಕಪ್ 2023 ಪಂದ್ಯ  ಡೇವಿಡ್ ವಾರ್ನರ್ ಗ್ರೌಂಡ್ಸ್‌ಮನ್​ಗೆ ಸಹಾಯ  ಕೆಲ ಸಮಯ ಮಳೆ ಸುರಿಯಿತು
ಗ್ರೌಂಡ್ಸ್​ಮನ್​ಗೆ​ ಸಹಾಯ ಮಾಡಿದ ವಾರ್ನರ್

ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನ್ನ ಇನ್ಸ್ಟಾಗ್ರಾಮ್​ದಲ್ಲಿ ಡೇವಿಡ್ ವಾರ್ನರ್ ಗ್ರೌಂಡ್ಸ್​ಮನ್​ಗೆ ಸಹಾಯ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇನ್ನು, ಈ ವಿಡಿಯೋ ವೈರಲ್​ ಆಗಿದ್ದು, ಡೇವಿಡ್​ ವಾರ್ನರ್​ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾದ ನಾಯಕ ದಸುನ್ ಶನಕಾ ಅವರು ಗಾಯದ ಕಾರಣ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಕುಸಲ್ ಮೆಂಡಿಸ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಶನಕ ಹಿಂತಿರುಗಲು ಸಮಯ ಹಿಡಿಯಬಹುದಾಗಿದೆ. ಹೀಗಾಗಿ ಮೆಂಡಿಸ್​ಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ.

ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಶ್ರೀಲಂಕಾ ಮೊದಲ ವಿಕೆಟ್‌ಗೆ 125 ರನ್‌ಗಳನ್ನು ಕಲೆ ಹಾಕಿದ್ದರು. ಪಾಥುಮ್ ನಿಸ್ಸಾಂಕಾ 61 ರನ್​ ಮತ್ತು ಕುಸಾಲ್ ಪೆರೆರಾ 78 ರನ್​ ಗಳನ್ನು ಕಲೆ ಹಾಕುವ ಮೂಲಕ ಉತ್ತಮ ಆರಂಭ ನೀಡಿದ್ದರು. ಆದರೆ ಅವರ ವಿಕೆಟ್ ಬಿದ್ದ ಕೂಡಲೇ ಶ್ರೀಲಂಕಾ ತಂಡ ತತ್ತರಿಸಿತ್ತು. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಕುಸಲ್ ಮೆಂಡಿಸ್ ಕೇವಲ 9 ರನ್ ಗಳಿಸಿ ಔಟಾದರು. ಇದಾದ ನಂತರ ಶ್ರೀಲಂಕಾ ತಂಡ ಲಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ಬೃಹತ್​ ಸ್ಕೋರ್ ಗಳಿಸಲು ವಿಫಲವಾಯಿತು. ಆಸ್ಟೇಲಿಯಾ ಪರ ಆಡಮ್​ ಝಂಪಾ ನಾಲ್ಕು ವಿಕೆಟ್​ ಪಡೆದು ಮಿಂಚಿದರು.

ಇನ್ನು ಶ್ರೀಲಂಕಾ ನೀಡಿದ್ದ ಗುರಿಯನ್ನು ಬೆನ್ನತ್ತಿದ್ದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. 24ಕ್ಕೆ ಎರಡು ವಿಕೆಟ್​ ಕಳೆದುಕೊಂಡು ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿತು. ಡೇವಿಡ್​ ವಾರ್ನರ್ ಕೇವಲ 11 ರನ್​ ಗಳಿಸಿದ್ರೆ, ಸ್ವೀವ್ ಸ್ಮಿತ್​ ಖಾತೆ ತೆರೆಯದೇ ಪೆವಿಲಿಯನ್​ ಹಾದಿ ಹಿಡಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಜವಾಬ್ದಾರಿಯುತವಾಗಿ ಆಟವಾಡಿ ತಂಡದ ಗೆಲುವಿಗೆ ಕಾರಣರಾದರು. ಮಾರ್ಷ್​ ಮತ್ತು ಜೋಶ್​ ಇಬ್ಬರು ಅರ್ಧ ಶತಕ ಗಳಿಸಿ ತಂಡದ ಗೆಲುವಿಗೆ ಮುಖ್ಯ ಪಾತ್ರ ವಹಿಸಿದರು. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ ಮೂರು ವಿಕೆಟ್​ ಪಡೆದರು.

ಓದಿ: ಬೆನ್ನು ನೋವಿನ ಮಧ್ಯೆಯೂ ತಂಡದ ಗೆಲುವಿಗಾಗಿ ಆಡಮ್​ ಹೋರಾಟ.. ಝಂಪಾ ಹೇಳಿದ್ದು ಹೀಗೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.