ETV Bharat / sports

ವಿಶ್ವಕಪ್​ ಕ್ರಿಕೆಟ್​: ಬೈರ್‌ಸ್ಟೋವ್, ರೂಟ್, ಸ್ಟೋಕ್ಸ್ ಅರ್ಧಶತಕ.. ಪಾಕ್​ ಸೆಮೀಸ್​ ಕನಸು ಭಗ್ನ

author img

By ETV Bharat Karnataka Team

Published : Nov 11, 2023, 1:42 PM IST

Updated : Nov 11, 2023, 6:59 PM IST

ICC Cricket World Cup 2023: ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಮಧ್ಯೆ ಕದನ ನಡೆಯುತ್ತಿದೆ.

England vs Pakistan 44th Match  won the toss and opt to bat  Eden Gardens Kolkata  ICC Cricket World Cup 2023  ಟಾಸ್​ ಗೆದ್ದು ಬ್ಯಾಟಿಂಗ್​ ಬೃಹತ್​ ಮೊತ್ತದತ್ತ ಬಾಬರ್​ ಅಜಮ್​ ಗುರಿ  ಈಡನ್ ಗಾರ್ಡನ್ಸ್‌ ಮೈದಾನ  ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯ  ನ್ಯೂಜಿಲೆಂಡ್‌ನ ನೆಟ್​ ರನ್ ರೇಟ್
ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಹೋರಾಟ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಜಾನಿ ಬೈರ್‌ಸ್ಟೋವ್, ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಅವರ ಅರ್ಧಶತಕಗಳ ಇನ್ನಿಂಗ್ಸ್​ ನೆರವಿನಿಂದ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್​ ಇಲ್ಲಿನ ಈಡನ್​​ ಗಾರ್ಡನ್ಸ್​ ಮೈದಾನದಲ್ಲಿ ನಿಗದಿತ ಓವರ್​ ಅಂತ್ಯಕ್ಕೆ 9 ವಿಕೆಟ್​ ನಷ್ಟಕ್ಕೆ 337 ರನ್​ ಕಲೆಹಾಕಿದೆ. ಸೆಮೀಸ್​​​ಗೆ ಪ್ರವೇಶ ಪಡೆಯಲು ಪಾಕಿಸ್ತಾನ ಈ ಗುರಿಯನ್ನು 6.1 ಓವರ್​ ಒಳಗಾಗಿ ಸಾಧಿಸಬೇಕಿದೆ. ಇದು ಸಾಧ್ಯವಾದ ಮಾತಾಗಿರುವುದರಿಂದ ನ್ಯೂಜಿಲೆಂಡ್​ ನಾಲ್ಕನೇ ತಂಡವಾಗಿ ಸೆಮಿಫೈನಲ್ಸ್​ ಪ್ರವೇಶ ಪಡೆಯಲಿದೆ.

ಪಾಕಿಸ್ತಾನಕ್ಕೆ ಇಂದಿನ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ್ದರೆ ಸೆಮೀಸ್​ ಪ್ರವೇಶಕ್ಕೆ ಒಂದು ಪ್ರಯತ್ನ ಮಾಡಲು ಸಾಧ್ಯವಿತ್ತು ಎಂದೇ ಪರಿಗಣಿಸಲಾಗಿತ್ತು. ಆದರೆ, ಟಾಸ್​ ಸೋತಿದ್ದರಿಂದ ಈ ಲೆಕ್ಕಾಚಾರ ಬುಡಮೇಲಾಯಿತು. ಅಲ್ಲದೇ ಇಂಗ್ಲೆಂಡ್​ ಮೊದಲು ಬ್ಯಾಟಿಂಗ್​ ಮಾಡಿ 337 ರನ್​ ಕಲೆಹಾಕಿದೆ. ಇಂಗ್ಲೆಂಡ್​ ಪಾಕ್​ ವಿರುದ್ಧ ಗೆದ್ದಲ್ಲಿ 2025ರ ಚಾಂಪಿಯನ್ಸ್​ ಟ್ರೋಫಿಗೆ ಪ್ರವೇಶ ಪಡೆದುಕೊಳ್ಳಲಿದೆ.

ವಿಶ್ವಕಪ್​ ಟೂರ್ನಿ ಕೊನೆಯ ಹಂತಕ್ಕೆ ತಲುಪಿದಾಗ ಇಂಗ್ಲೆಂಡ್​ ಆಟಗಾರರು ಬ್ಯಾಟಿಂಗ್ ಲಯಕ್ಕೆ ಮರಳಿದ್ದಾರೆ. ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ಮಲನ್ ಮೊದಲ ವಿಕೆಟ್​ಗೆ 82 ರನ್​ಗಳ ದೊಡ್ಡ ಜೊತೆಯಾಟ ನೀಡಿದ್ದರು. ಆಂಗ್ಲರಿಗೆ ಈ ಜೊತೆಯಾಟದ ಇನ್ನಿಂಗ್ಸ್​ವ ಅನ್ನು ಉತ್ತಮವಾಗಿ ಮುಂದುವರೆಸಲು ಸಹಕಾರಿ ಆಯಿತು. ತಂಡದ ಮೊತ್ತ 82 ಆಗಿದ್ದಾಗ ಡೇವಿಡ್ ಮಲನ್ (31) ವಿಕೆಟ್​ ಕಳೆದುಕೊಂಡರೆ, ನಂತರ 25 ರನ್​ ಸೇರುತ್ತಿದ್ದಂತೆ ಅಂದರೆ 108 ಆಗಿದ್ದಾಗ ಅರ್ಧಶತಕ ಗಳಿಸಿದ್ದ ಜಾನಿ ಬೈರ್‌ಸ್ಟೋವ್ (59) ವಿಕೆಟ್​ ಕಳೆದುಕೊಂಡರು.

3ನೇ ವಿಕೆಟ್​ಗೆ ಒಂದಾದ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಆರಂಭಿಕರು ಹಾಕಿಕೊಟ್ಟ ಗಟ್ಟಿ ತಳಪಾಯವನ್ನು ಮುಂದುವರೆಸಿಕೊಂಡು ಹೋದರು. ಈ ಜೋಡಿ 132 ರನ್​ಗಳ ಪಾಲುದಾರಿಕೆಯನ್ನು ಮಾಡಿತು. 76 ಬಾಲ್​ ಎದುರಿಸಿ 11 ಬೌಂಡರಿ ಮ ತ್ತು 2 ಸಿಕ್ಸ್​ನಿಂದ 84 ರನ್ ​ಗಳಿಸಿ ಆಡುತ್ತಿದ್ದ ಬೆನ್ ಸ್ಟೋಕ್ಸ್ ವಿಕೆಟ್​ ಕಳೆದುಕೊಂಡರು. ಅವರ ಬೆನ್ನಲ್ಲೇ ಅರ್ಧಶತಕ ಮಾಡಿದ್ದ ಜೋ ರೂಟ್ (60) ಸಹ ವಿಕೆಟ್​ ಕಳೆದುಕೊಂಡರು.

  • " class="align-text-top noRightClick twitterSection" data="">

ಜೋಸ್ ಬಟ್ಲರ್(27), ಹ್ಯಾರಿ ಬ್ರೂಕ್ (30), ಮೊಯಿನ್ ಅಲಿ (8), ಡೇವಿಡ್ ವಿಲ್ಲಿ (15), ಗುಸ್ ಅಟ್ಕಿನ್ಸನ್ (0) ಕೊನೆಯಲ್ಲಿ ವೇಗವಾಗಿ ರನ್​ ಹೆಚ್ಚಿಲು ಹೋಗಿ ವಿಕೆಟ್​ ಕೈಚೆಲ್ಲಿದರು. ನಿಗದಿತ ಈ ಓವರ್​ ಅಂತ್ಯಕ್ಕೆ ಇಂಗ್ಲೆಂಡ್​ 9 ವಿಕೆಟ್​ ಕಳೆದುಕೊಂಡು 337 ರನ್​ ಕಲೆಹಾಕಿತು.

ಪಾಕ್​ ಪರ ಹ್ಯಾರಿಸ್ ರೌಫ್ 3 ಮತ್ತು ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್ ತಲಾ ಎರಡು ವಿಕೆಟ್​ ಪಡೆದರೆ, ಇಫ್ತಿಕರ್ ಅಹ್ಮದ್ 1 ವಿಕೆಟ್​ ಕಬಳಿಸುವಲ್ಲಿ ಯಶಸ್ವಿ ಆದರು.

ಓದಿ: ಅಫ್ಘಾನ್ ಕ್ರಿಕೆಟ್‌ಗೆ ಮುಂದಿವೆ ಒಳ್ಳೆಯ ದಿನಗಳು: ವಿಶ್ವಕಪ್ ಪ್ರದರ್ಶನದೊಂದಿಗೆ ಭವಿಷ್ಯದ ಮೇಲೆ ಆಸೆ

Last Updated : Nov 11, 2023, 6:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.