ETV Bharat / sports

ಐಸಿಸಿ ಏಕದಿನ ವಿಶ್ವಕಪ್‌: ನಾರ್ಡೆಕ್ ಬ್ಲಾಕ್‌ಚೇನ್ ಪ್ರಾಯೋಜಕತ್ವದ ನೂತನ ಜರ್ಸಿ ಬಿಡುಗಡೆಗೊಳಿಸಿದ ನೆದರ್ಲೆಂಡ್ಸ್

author img

By ETV Bharat Karnataka Team

Published : Sep 26, 2023, 2:49 PM IST

ICC ODI World Cup: ಐಸಿಸಿ ಕ್ರಿಕೆಟ್ ವಿಶ್ವಕಪ್‌ ಹಿನ್ನೆಲೆಯಲ್ಲಿ ನೆದರ್ಲೆಂಡ್ಸ್‌ ಕ್ರಿಕೆಟ್ ತಂಡವು ನಾರ್ಡೆಕ್, ದಿ ಲೈಟ್‌ಸ್ಪೀಡ್ ಬ್ಲಾಕ್‌ಚೇನ್ ಇಕೋಸಿಸ್ಟಮ್ ಪ್ರಾಯೋಜಕತ್ವದ ನೂತನ ಜರ್ಸಿ ಬಿಡುಗಡೆಗೊಳಿಸಲಾಯಿತು.

ICC ODI World Cup
ಐಸಿಸಿ ಏಕದಿನ ವಿಶ್ವಕಪ್‌: ನಾರ್ಡೆಕ್ ಬ್ಲಾಕ್‌ಚೇನ್ ಪ್ರಾಯೋಜಕತ್ವದ ನೂತನ ಜರ್ಸಿ ಬಿಡುಗಡೆಗೊಳಿಸಿದ ನೆದರ್ಲೆಂಡ್ಸ್

ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮಿಸಿರುವ ನೆದರ್ಲೆಂಡ್ಸ್‌ ಕ್ರಿಕೆಟ್ ತಂಡ ನಾರ್ಡೆಕ್, ದಿ ಲೈಟ್‌ಸ್ಪೀಡ್ ಬ್ಲಾಕ್‌ಚೇನ್ ಇಕೋಸಿಸ್ಟಮ್ ಪ್ರಾಯೋಜಕತ್ವದ ತನ್ನ ಅಧಿಕೃತ ಟೀಮ್ ಕಿಟ್ ಅನಾವರಣಗೊಳಿಸಿದೆ. ಬೆಂಗಳೂರಿನ‌ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ನೆದರ್ಲೆಂಡ್ಸ್‌ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್, ಮ್ಯಾಕ್ಸ್ ಒಡೌಡ್, ಹೆಡ್ ಕೋಚ್ ರಯಾನ್ ಕುಕ್, ನಾರ್ಡೆಕ್‌ನ ಸಿಇಒ ರಾಜೇಶ್ ಕಶ್ಯಪ್, ಸಹ ಸಂಸ್ಥಾಪಕ ನವಾಲ್ ಕಿಶೋರ್ ಭಾಗಿಯಾಗಿದ್ದರು.

ನೆದರ್ಲೆಂಡ್ಸ್‌ ತಂಡದೊಂದಿಗಿನ ಸಹಭಾಗಿತ್ವದ ಕುರಿತು ಸಂತೋಷ ವ್ಯಕ್ತಪಡಿಸಿದ ನಾರ್ಡೆಕ್‌ನ ಸಿಇಒ ರಾಜೇಶ್ ಕಶ್ಯಪ್, ''2023ರ ವಿಶ್ವಕಪ್ ಸಮೀಪಿಸುತ್ತಿರುವಾಗ ನೆದರ್ಲೆಂಡ್ಸ್‌ ಕ್ರಿಕೆಟ್ ತಂಡದೊಂದಿಗೆ ಪಾಲುದಾರರಾಗುತ್ತಿರುವ ಬಗ್ಗೆ ನಾರ್ಡೆಕ್ ರೋಮಾಂಚನಗೊಂಡಿದೆ. ಇದು ಕೇವಲ ಲೋಗೋ ಪಾಲುದಾರಿಕೆಯಲ್ಲ, ಜಾಗತಿಕ ಶ್ರೇಷ್ಠತೆಯ ಹಂಚಿಕೆಯ ಅನ್ವೇಷಣೆಯಾಗಿದೆ'' ಎಂದು ಅವರು ಹೇಳಿದರು.

Netherlands unveil new jersey sponsored by Nordic Blockchain
ನೂತನ ಜರ್ಸಿ ಬಿಡುಗಡೆಗೊಳಿಸಿದ ನೆದರ್ಲೆಂಡ್ಸ್

2011ರ ನಂತರ ಮತ್ತೊಮ್ಮೆ ಏಕದಿನ ವಿಶ್ವಕಪ್ ಅಭಿಯಾನದ ಭಾಗವಾಗಿರುವ ನೆದರ್‌ಲ್ಯಾಂಡ್ಸ್ ತಂಡದ ಹೆಡ್ ಕೋಚ್ ರಯಾನ್ ಕುಕ್ ಮಾತನಾಡಿ, ''ನಾವು ಭಾರತದಲ್ಲಿ ಎರಡು ಶಿಬಿರಗಳನ್ನು ಹೊಂದಿದ್ದೇವೆ. ಭಾರತೀಯ ಪಿಕ್​ಗಳು ಹವಾಮಾನಕ್ಕೆ ತಕ್ಕಂತೆ ಬಲಾಗಲಿದ್ದು, ನಮ್ಮ ತಂಡವು ಸ್ಪಿನ್ ಬೌಲಿಂಗ್‌ಗೆ ಹೆಚ್ಚು ಆದ್ಯತೆ ನೀಡಲಿದ್ದೇವೆ'' ಎಂದರು.

ಅ.6ಕ್ಕೆ ಪಾಕಿಸ್ತಾನ ಜೊತೆಗೆ ನೆದರ್ಲೆಂಡ್ಸ್‌ ಮೊದಲ ಪಂದ್ಯ: ಪ್ರಸ್ತುತ ಬೆಂಗಳೂರಿನಲ್ಲಿರುವ ನೆದರ್ಲೆಂಡ್ಸ್ ತಂಡ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ತಂಡದೊಂದಿಗೆ ಅಭ್ಯಾಸ ಪಂದ್ಯವಾಡಿದ್ದು, 142 ರನ್‌ಗಳಿಂದ ಪರಾಜಯಗೊಂಡಿದೆ. ಈ ವರ್ಷದ ಆರಂಭದಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಪ್ರಭಾವಿ ಪ್ರದರ್ಶನ ನೀಡಿರುವ ನೆದರ್ಲೆಂಡ್ಸ್‌ ಅಕ್ಟೋಬರ್ 6ರಂದು ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌: ಸೈಲಿಂಗ್​ನಲ್ಲಿ ಭಾರತಕ್ಕೆ ಬೆಳ್ಳಿ, ಕಂಚು ಗೌರವ

ಏಷ್ಯನ್ ಗೇಮ್ಸ್: ಸಿಂಗಾಪುರ ಮಟ್ಟ 'ಹಾಕಿ'ದ ಭಾರತ, ಫೆನ್ಸಿಂಗ್​ನಲ್ಲಿ ನಿರಾಸೆ ಮೂಡಿಸಿದ ಭವಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.