ETV Bharat / sports

ಏಷ್ಯನ್ ಗೇಮ್ಸ್: ಸಿಂಗಾಪುರ ಮಟ್ಟ 'ಹಾಕಿ'ದ ಭಾರತ, ಫೆನ್ಸಿಂಗ್​ನಲ್ಲಿ ನಿರಾಸೆ ಮೂಡಿಸಿದ ಭವಾನಿ

author img

By ETV Bharat Karnataka Team

Published : Sep 26, 2023, 8:43 AM IST

Updated : Sep 26, 2023, 11:20 AM IST

Asian Games 2023 Day 3: ಗುಂಪು ಹಂತದ ಹಾಕಿ ಪಂದ್ಯದಲ್ಲಿ ಸಿಂಗಾಪುರ ವಿರುದ್ಧ ಭಾರತ ಭಾರಿ ಅಂತರದ ಗೆಲುವು ಸಾಧಿಸಿದೆ. ಇನ್ನೊಂದೆಡೆ, ಭವಾನಿ ದೇವಿ ಫೆನ್ಸಿಂಗ್ ಕ್ರೀಡೆಯಲ್ಲಿ ಪದಕ ರೇಸ್‌ನಿಂದ ಹೊರಬಿದ್ದಿದ್ದಾರೆ.

Asian Games 2023 Day 3  India won the hockey match  India won the hockey match against Singapore  Asian Games 2023  ಹಾಕಿಯಲ್ಲಿ ಸಿಂಗಾಪುರ ವಿರುದ್ಧ ಭಾರತಕ್ಕೆ ಭರ್ಜರಿ ಜಯ  ಗುಂಪು ಹಂತದ ಹಾಕಿ ಪಂದ್ಯ  ಸಿಂಗಾಪುರ ವಿರುದ್ಧದ ಭಾರತ ಗೆಲುವು  ಭಾರತೀಯ ಆಟಗಾರರು ಶೂಟಿಂಗ್‌ನಲ್ಲಿಯೂ ಪದಕ  ಏಷ್ಯನ್ ಗೇಮ್ಸ್ 2023  ಟೂರ್ನಿಯಲ್ಲಿ ಇದುವರೆಗೆ ಭಾರತದ ಪ್ರದರ್ಶನ ಬಲಿಷ್ಠ  ಎರಡು ದಿನಗಳಲ್ಲಿ ದೇಶ ಒಟ್ಟು 11 ಪದಕ  ಸಿಂಗಾಪುರನ್ನು ಮಣಿಸಿದ ಭಾರತ
ಹಾಕಿಯಲ್ಲಿ ಸಿಂಗಾಪುರ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಹಾಂಗ್‌ಝೌ (ಚೀನಾ): ಚೀನಾದ ಹ್ಯಾಂಗ್‌ಝೌ ನಗರದಲ್ಲಿ ಏಷ್ಯನ್ ಗೇಮ್ಸ್ ನಡೆಯುತ್ತಿದೆ. ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 11 ಪದಕಗಳನ್ನು ಗೆದ್ದುಕೊಂಡಿದೆ. ಮೂರನೇ ದಿನವಾದ ಇಂದು ವಿವಿಧ ಸ್ಪರ್ಧೆಗಳಲ್ಲಿ ದೇಶದ ಸ್ಪರ್ಧಿಗಳು ಪದಕ ಗೆಲ್ಲುವ ನಿರೀಕ್ಷೆ ಇದೆ.

ಪುರುಷರ ಹಾಕಿ ಪಂದ್ಯದಲ್ಲಿ ಭಾರತ ತಂಡವು ಇಂದು ಸಿಂಗಾಪುರವನ್ನು ಮಣಿಸಿತು. ಬಾಕ್ಸಿಂಗ್‌ನಲ್ಲಿ ಸಚಿನ್ ಸಿವಾಚ್ 57 ಕೆ.ಜಿ ವಿಭಾಗದಲ್ಲಿ ಅಭಿಯಾನ ಆರಂಭಿಸಲಿದ್ದಾರೆ. ಭವಾನಿ ದೇವಿ ಫೆನ್ಸಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಕ್ವಾರ್ಟರ್​ ಫೈನಲ್​ನಲ್ಲಿ ನಿರಾಸೆ ಮೂಡಿಸಿದರು. ಸ್ಕ್ವಾಷ್​ನಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿದೆ.

ಶೂಟಿಂಗ್ 25 ಮೀಟರ್​​: 25 ಮೀ ಪಿಸ್ತೂಲ್ ಮಹಿಳಾ ಅರ್ಹತಾ ನಿಖರ ಹಂತದ ನಂತರ ಮನು ಭಾಕರ್ 294 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇಶಾ ಸಿಂಗ್ 292 ಮತ್ತು ರಿದಮ್ ಸಾಂಗ್ವಾನ್ 290 ರೊಂದಿಗೆ 11 ನೇ ಸ್ಥಾನದಲ್ಲಿದ್ದಾರೆ. ಅಗ್ರ ಎಂಟು ಮಂದಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

  • FULL TIME UPDATE🏑

    🏑🎉 In an explosive display of hockey prowess, #TeamIndia (WR 3) triumphs over Team Singapore (WR 47) with a resounding score of 🇮🇳16-01🇸🇬 during their Group Stage Match 2!🤩

    Our hockey heroes continue to dazzle the world with their extraordinary talent and… pic.twitter.com/rDWseBTM3f

    — SAI Media (@Media_SAI) September 26, 2023 " class="align-text-top noRightClick twitterSection" data=" ">

ಹಾಕಿಯಲ್ಲಿ ಜಯಭೇರಿ: ಹಾಕಿಯಲ್ಲಿ ಭಾರತ ತಂಡ ಸಿಂಗಾಪುರ ವಿರುದ್ಧ 16-1 ಗೋಲುಗಳೊಂದಿಗೆ ಅಮೋಘ ಜಯಭೇರಿ ಬಾರಿಸಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಉಜ್ಬೇಕಿಸ್ತಾನವನ್ನು ಹೀನಾಯವಾಗಿ ಸೋಲಿಸಿತ್ತು. 16-0 ಅಂತರದ ಭರ್ಜರಿ ಜಯ ದಾಖಲಿಸಿದ ಭಾರತ ತಂಡ ಇಂದು ಸಿಂಗಾಪುರ ವಿರುದ್ಧವೂ ಅದೇ ರೀತಿಯ ಪ್ರದರ್ಶನ ನೀಡಿದೆ.

ಫೆನ್ಸಿಂಗ್​ನಲ್ಲಿ ಭವಾನಿಗೆ ಸೋಲು: ಭಾರತದ ಫೆನ್ಸರ್ ಭವಾನಿ ದೇವಿ ಅಜೇಯ ದಾಖಲೆಯೊಂದಿಗೆ ಗುಂಪು ಹಂತ ಪೂರ್ಣಗೊಳಿಸಿದ್ದರು. ತಮ್ಮ ಐದನೇ ಪಂದ್ಯದಲ್ಲಿ ಬಾಂಗ್ಲಾದೇಶದ ರೊಕ್ಸಾನಾ ಖತುನ್ ಅವರನ್ನು 5-1 ರಿಂದ ಪರಾಭವಗೊಳಿಸಿದರು. ಈ ಗೆಲುವಿನ ಮೂಲಕ ನಾಕೌಟ್ ಹಂತಕ್ಕೆ ಅಗ್ರ ಶ್ರೇಯಾಂಕಿತೆಯಾಗಿ ಕಾಲಿಟ್ಟಿದ್ದರು. ಇದೀಗ 8ನೇ ಸುತ್ತಿನಲ್ಲಿ ಚೀನಾ ಸ್ಪರ್ಧೆಯೆದುರು ಸೋಲು ಕಂಡು ಪದಕ ರೇಸ್‌ನಿಂದ ಹೊರಬಿದ್ದಿದ್ದಾರೆ.

ಶೂಟಿಂಗ್​ನಲ್ಲಿ ಕಂಚಿಗಾಗಿ ಹೋರಾಟ: ದಿವ್ಯಾಂಶ್-ರಮಿತಾ ಎರಡನೇ ಕಂಚಿನ ಪದಕಕ್ಕೆ ಅರ್ಹತೆ ಪಡೆದಿದ್ದಾರೆ. ಈ ಜೋಡಿ ಅರ್ಹತಾ ಸುತ್ತಿನಲ್ಲಿ 628.2 ಅಂಕ ಗಳಿಸಿ ಆರನೇ ಸ್ಥಾನ ಪಡೆಯಿತು. ಪದಕ ಸುತ್ತಿಗೆ ಪ್ರವೇಶಿಸಲು ಅಂತಿಮ ಸ್ಥಾನ ತನ್ನದಾಗಿಸಿಕೊಂಡಿತು. ಭಾರತವು ಕಂಚಿನ ಪದಕಕ್ಕಾಗಿ ರಿಪಬ್ಲಿಕ್ ಕೊರಿಯಾ ತಂಡವನ್ನು ಎದುರಿಸಲಿದ್ದು, ಪಂದ್ಯ ಬೆಳಗ್ಗೆ 8:40ಕ್ಕೆ ಆರಂಭವಾಗಲಿದೆ.

ಸ್ಕ್ವಾಷ್‌ನಲ್ಲಿ ಗೆಲುವು: ಪಾಕಿಸ್ತಾನ ವಿರುದ್ಧದ ಸ್ಕ್ವಾಷ್‌ನಲ್ಲಿ ಭಾರತ ಕೂಡ ಶುಭಾರಂಭ ಮಾಡಿದೆ. ಅನಂತ್ ಸಿಂಗ್ ಮೊದಲ ಪಂದ್ಯವನ್ನು 3-0 ಅಂತರದಿಂದ ಸುಲಭವಾಗಿ ಗೆದ್ದುಕೊಂಡರು.

ಇದನ್ನೂ ಓದಿ: ಏಷ್ಯನ್‌ ಗೇಮ್ಸ್‌ನಲ್ಲಿಂದು..: ಭಾರತ-ಪಾಕ್ ಹಣಾಹಣಿ, ಇಂದಿನ ಸ್ಪರ್ಧೆಗಳ ಸಂಪೂರ್ಣ ವೇಳಾಪಟ್ಟಿ

Last Updated : Sep 26, 2023, 11:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.