ETV Bharat / sports

ಐಪಿಎಲ್ ಆಯ್ಕೆ ಮಾಡಿಕೊಂಡವರಿಗೆ ಟೆಸ್ಟ್​ ತಂಡದಲ್ಲಿ ಜಾಗ ಅನುಮಾನ: ದ.ಆಫ್ರಿಕಾ ನಾಯಕ ಡೀನ್ ಎಲ್ಗರ್

author img

By

Published : Apr 12, 2022, 10:41 PM IST

ಸೋಮವಾರ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶದ ವಿರುದ್ಧ 2-0ಯಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಈ ಪಂದ್ಯದ ನಂತರ ಮಾತನಾಡಿದ ಎಲ್ಗರ್, ಆಯ್ಕೆ ನನ್ನ ಕೈಯಲ್ಲಿಲ್ಲ, ಅವರು ಮತ್ತೆ ಆಯ್ಕೆಯಾಗುತ್ತಾರೋ, ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

Dean Elgar on IPL bound players
ದಕ್ಷಿಣ ಆಫ್ರಿಕಾ ಕ್ರಿಕೆಟ್ vs ಐಪಿಎಲ್

ಕೇಪ್​ಟೌನ್: ಬಾಂಗ್ಲಾದೇಶದ ವಿರುದ್ಧದ ಟೆಸ್ಟ್​ ಸರಣಿಯನ್ನು ತ್ಯಜಿಸಿ ಐಪಿಎಲ್​​ ಆಡುವುದನ್ನು ಆಯ್ಕೆ ಮಾಡಿಕೊಂಡಿರುವ ಆಟಗಾರರಿಗೆ ದಕ್ಷಿಣ ಆಫ್ರಿಕಾ ಟೆಸ್ಟ್​ ತಂಡದಲ್ಲಿ ಭವಿಷ್ಯದಲ್ಲಿ ಅವಕಾಶ ಸಿಗುತ್ತದೆ ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ನಾಯಕ ಡೀನ್ ಎಲ್ಗರ್​ ತಿಳಿಸಿದ್ದಾರೆ. ಸೋಮವಾರ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶದ ವಿರುದ್ಧ 2-0ಯಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಈ ಪಂದ್ಯದ ನಂತರ ಮಾತನಾಡಿದ ಎಲ್ಗರ್, ಆಯ್ಕೆ ನನ್ನ ಕೈಯಲ್ಲಿಲ್ಲ, ಅವರು ಮತ್ತೆ ಆಯ್ಕೆಯಾಗುತ್ತಾರೋ, ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಕಗಿಸೊ ರಬಾಡ, ಎನ್ರಿಚ್ ನಾರ್ಕಿಯಾ, ಐಡೆನ್ ಮಾರ್ಕಮ್, ರಾಸೀ ವ್ಯಾನ್​ಡರ್ ಡಸೆನ್, ಮಾರ್ಕೊ ಜಾನ್ಸನ್, ಲುಂಗಿ ಎಂಗಿಡಿ​ ಟೆಸ್ಟ್​ ಸರಣಿಯನ್ನು ತ್ಯಜಿಸಿ ಐಪಿಎಲ್ ಆಡುವುದಕ್ಕೆ ಪ್ರಾಧಾನ್ಯತೆ ನೀಡಿದ್ದರು. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಎಲ್ಗರ್​ ಟಿ20 ಲೀಗ್​ಗಳಿಗೆ ಪ್ರಾಧಾನ್ಯತೆ ನೀಡುವುದಕ್ಕಿಂತ ರಾಷ್ಟ್ರೀಯ ತಂಡಕ್ಕೆ ಆಡುವುದಕ್ಕೆ ಮಹತ್ವ ನೀಡಿ ಎಂದಿದ್ದರು. ಆದರೂ ಕೆಲವು ಆಟಗಾರರು ಮಿಲಿಯನ್ ಡಾಲರ್ ಟೂರ್ನಿಗೆ ಆಗಮಿಸಿದ್ದರು.

ಮುಖ್ಯ ಕೋಚ್​ ಮಾರ್ಕ್​ ಬೌಚರ್ ಕೂಡ, ಅವರೆಲ್ಲರೂ ಐಪಿಎಲ್​ ಆಡಲು ಹೋಗಿ ಟೆಸ್ಟ್​ ತಂಡದಲ್ಲಿ ತಮ್ಮ ಸ್ಥಾನವನ್ನು ಖಾಲಿ ಮಾಡಿದ್ದಾರೆ ಎಂದು ತಿಳಿಸಿದ್ದರು. ಇದೀಗ ಅದರ ಬೆನ್ನಲ್ಲೆ ನಾಯಕ ಈ ಹೇಳಿಕೆ ನೀಡಿರುವುದರಿಂದ ಐಪಿಎಲ್​ನಲ್ಲಿ ಆಡುತ್ತಿರುವ ಆಟಗಾರರ ಟೆಸ್ಟ್​ ಭವಿಷ್ಯ ತೂಗುಯ್ಯಾಲೆಯಂತಾಗಿದೆ.

ಇದನ್ನೂ ಓದಿ:ಭಾರತದ ವಿರುದ್ಧ ಕಣಕ್ಕಿಳಿಯಲಿದ್ದಾರೆ ವಿಶ್ವಕಪ್ ಹೀರೋ ಉನ್ಮುಖ್ತ್​ ಚಾಂದ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.