ETV Bharat / sports

ಮಹಿಳಾ ದಿನದಂದೇ ಟೀಂ ಇಂಡಿಯಾ ನಾಯಕಿ ಕೌರ್​ ಬರ್ತ್‌ಡೇ: ಮುಂಬೈ ಟೀಂ​ನಲ್ಲಿ ಭರ್ಜರಿ ಪಾರ್ಟಿ

author img

By

Published : Mar 8, 2023, 1:03 PM IST

ಟಿ20 ವಿಶ್ವಕಪ್​ನಲ್ಲಿ ಭಾರತದ ವನಿತೆಯರ ತಂಡವನ್ನು ಮುನ್ನಡೆಸುವ ಹರ್ಮನ್​ಪ್ರೀತ್​ ಕೌರ್​ಗೆ ಇಂದು ಜನ್ಮದಿನದ ಸಂಭ್ರಮ.

Harmanpreet Kaur birthday
ಹರ್ಮನ್​ಪ್ರೀತ್​ ಕೌರ್​

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್​ ಇಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಂತಾರಾಷ್ಟ್ರೀಯಾ ಮಹಿಳಾ ದಿನದಂದೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಕೌರ್​ ದೇಶ ಕಂಡ ಯಶಸ್ವಿ ಕ್ರಿಕೆಟರ್​. ವೃತ್ತಿ ಜೀವನದಲ್ಲಿ 100ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಇವರು ಹಲವು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಗುರುತು ಮಾಡಿದ್ದಾರೆ.

2009ರಲ್ಲಿ ಕ್ರಿಕೆಟ್ ವೃತ್ತಿಜೀವನ ಪ್ರಾರಂಭಿಸಿದ ಹರ್ಮನ್‌ಪ್ರೀತ್ ಅವರು ವಿರಾಟ್​ ಕೊಹ್ಲಿ ದಾಖಲೆಗಳನ್ನು ಮುರಿದಿದ್ದಾರೆ. ಪ್ರಸ್ತುತ ಚೊಚ್ಚಲ ವುಮೆನ್ಸ್​​ ಪ್ರೀಮಿಯರ್​ ಲೀಗ್​ನಲ್ಲಿ(WPL) ಮುಂಬೈ ಇಂಡಿಯನ್ಸ್​ ತಂಡದ ಸಾರಥ್ಯ ವಹಿಸಿಕೊಂಡಿದ್ದು, ಎರಡು ಪಂದ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ನಾಳೆ ಮುಂಬೈಗೆ ಮೂರನೇ ಪಂದ್ಯವಿದ್ದು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ.

ಮುಂಬೈ ಪಾಳಯದಲ್ಲಿ ಖುಷಿ: ನಿನ್ನೆ ರಾತ್ರಿ ನಾಯಕಿಯ ಜನ್ಮದಿನವನ್ನು ಭರ್ಜರಿಯಾಗಿಯೇ ಮುಂಬೈ ಇಂಡಿಯನ್ಸ್​ ತಂಡ ಆಚರಿಸಿದೆ. ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಮುಂಬೈ ತಂಡದ ಎಲ್ಲಾ ಆಟಗಾರರೊಂದಿಗೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ. ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ಸೆಲೆಬ್ರೇಷನ್​ನ​ ವಿಡಿಯೋ ಹಂಚಿಕೊಂಡಿದೆ. ಇದರಲ್ಲಿ ಹರ್ಮನ್‌ಪ್ರೀತ್ ಅವರು ಕೇಕ್ ಕತ್ತರಿಸಿ ತಂಡದ ಎಲ್ಲಾ ಆಟಗಾರರಿಗೆ ತಿನ್ನಿಸುತ್ತಿರುವುದನ್ನು ನೋಡಬಹುದು. ಕೇಕ್​ ಕತ್ತರಿಸಿದ ನಂತರ ಎಲ್ಲ ಆಟಗಾರರು ಸೇರಿ ಡ್ಯಾನ್ಸ್​ ಮಾಡಿದ್ದಾರೆ. ಭಾರತದ ಮಹಿಳಾ ತಂಡದ ನಾಯಕಿಗೆ ಹಲವು ಕ್ರಿಕೆಟಿಗರು ಶುಭ ಕೋರಿದ್ದಾರೆ.

ಹರ್ಮನ್‌ಪ್ರೀತ್ ಕೌರ್ 8 ಮಾರ್ಚ್ 1989 ರಂದು ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಜನಿಸಿದರು. ತಂದೆ ಹರ್ಮಂದರ್ ಸಿಂಗ್ ಭುಲ್ಲರ್ ವಾಲಿಬಾಲ್ ಮತ್ತು ಬಾಸ್ಕೆಟ್‌ಬಾಲ್ ಆಟಗಾರರಾಗಿದ್ದರು. ತಾಯಿಯ ಹೆಸರು ಸತ್ವಿಂದರ್. ಕೌರ್ ಬಾಲ್ಯದಿಂದಲೂ ಕ್ರಿಕೆಟ್‌ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಹರ್ಮನ್‌ ಭಾರತದ ಮಾಜಿ ಬ್ಯಾಟರ್​ ವೀರೇಂದ್ರ ಸೆಹ್ವಾಗ್ ಅವರ ಅಪ್ಪಟ ಅಭಿಮಾನಿ ಕೂಡಾ. ಕೌರ್​ ಬ್ಯಾಟಿಂಗ್​ ಆಲ್​ರೌಂಡರ್​ ಆಗಿದ್ದಾರೆ. ಇವರನ್ನು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022ರಲ್ಲಿ ಟೀಮ್ ಇಂಡಿಯಾದ ಉಪನಾಯಕಿಯನ್ನಾಗಿ ಮಾಡಲಾಯಿತು. 2023ರ ಟಿ20 ವಿಶ್ವಕಪ್​ನಲ್ಲಿ ತಂಡವನ್ನು ನಾಯಕಿಯಾಗಿ ಮುನ್ನಡೆಸಿ ಸೆಮಿಫೈನಲ್‌ವರೆಗೆ ಕೊಂಡೊಯ್ದಿದ್ದಾರೆ.

  • 2⃣7⃣8⃣ international games 👍
    6⃣4⃣1⃣8⃣ international runs 👌
    Highest score by a #TeamIndia batter in an innings in Women's ODI World Cup 🔝
    1⃣st cricketer to play 1⃣5⃣0⃣ T20Is 🫡

    Here's wishing India captain @ImHarmanpreet a very happy birthday 🎂 👏 pic.twitter.com/l7rS2PDoV7

    — BCCI Women (@BCCIWomen) March 8, 2023 " class="align-text-top noRightClick twitterSection" data=" ">

ಟಿ20 ಕ್ರಿಕೆಟ್​ನಲ್ಲಿ ಶತಕ: 2017ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ 115 ಬಾಲ್​ ಎದುರಿಸಿ 20 ಬೌಂಡರಿ ಮತ್ತು 7 ಸಿಕ್ಸ್​ನಿಂದ 171 ರನ್‌ಗಳ ಬಿರುಸಿನ ಅಜೇಯ ಇನ್ನಿಂಗ್ಸ್‌ ಕಟ್ಟಿದ್ದರು. ಈ ಇನ್ನಿಂಗ್ಸ್‌ನಿಂದ ಟೀಂ ಇಂಡಿಯಾ 42 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 281 ರನ್ ಗಳಿಸಿತ್ತು. 2018 ರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 51 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್‌ಗಳಿಂದ 103 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಈ ಶತಕದ ಮೂಲಕ ಕೌರ್ ಟಿ20 ಮಾದರಿಯ ಕ್ರಿಕೆಟ್‌ನಲ್ಲಿ 100 ರನ್ ಗಳಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

ಇದನ್ನೂ ಓದಿ: WPL 2023: ಟಾಸ್​ ಗೆದ್ದ ಯುಪಿ ವಾರಿಯರ್ಸ್​ ಕ್ಷೇತ್ರ ರಕ್ಷಣೆ ಆಯ್ಕೆ: ಮತ್ತೆ ಚೇಸಿಂಗ್​ನಲ್ಲಿ ಗೆಲ್ಲುವ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.