ETV Bharat / sports

ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್ ಚೌಧರಿ ನಿಧನ

author img

By

Published : Aug 16, 2022, 1:45 PM IST

ಚೌಧರಿ ಅವರು ಮಾಜಿ ಐಪಿಎಸ್​ ಅಧಿಕಾರಿಯಾಗಿದ್ದರು ಹಾಗೂ ಕ್ರಿಕೆಟ್ ಅವರ ಹವ್ಯಾಸವಾಗಿತ್ತು. ಅವರು 2005-06 ರಲ್ಲಿ ಜಿಂಬಾಬ್ವೆ ಪ್ರವಾಸಕ್ಕಾಗಿ ಭಾರತೀಯ ತಂಡದ ಮ್ಯಾನೇಜರ್ ಆಗಿದ್ದರು. ಗ್ರೆಗ್ ಚಾಪೆಲ್ ಸೌರವ್ ಗಂಗೂಲಿ ಮಧ್ಯೆ ವಿವಾದ ಹುಟ್ಟುಹಾಕಿದ ಕುಖ್ಯಾತ ಸರಣಿ ಇದಾಗಿತ್ತು.

ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್ ಚೌಧರಿ
ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್ ಚೌಧರಿ

ನವದೆಹಲಿ: ಹಿರಿಯ ಕ್ರಿಕೆಟ್ ಆಡಳಿತಾಧಿಕಾರಿ ಅಮಿತಾಭ್ ಚೌಧರಿ ಮಂಗಳವಾರ ಆಗಸ್ಟ್ 16 ರಂದು ಮುಂಜಾನೆ ನಿಧನರಾದರು. ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಅವರ ನಿಧನದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಚೌಧರಿ ಅವರು 10 ವರ್ಷಗಳ ಕಾಲ ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಉಸ್ತುವಾರಿ ವಹಿಸಿದ್ದರು ಮತ್ತು ಈ ಹಿಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಹಂಗಾಮಿ ಕಾರ್ಯದರ್ಶಿಯಾಗಿದ್ದರು.

58 ವರ್ಷದ ಅವರು ಹೃದಯಾಘಾತದಿಂದ ಬಳಲುತ್ತಿದ್ದರು ಮತ್ತು ಅದೇ ಕಾಯಿಲೆಯಿಂದ ಅವರು ಮೃತಪಟ್ಟಿದ್ದಾರೆ. ಚೌಧರಿ ನಿಧನದ ಸುದ್ದಿ ಕುರಿತು ಮಾತನಾಡಿದ ಅವರ ಸಹೋದ್ಯೋಗಿ ಅನಿರುದ್ಧ್ ಚೌಧರಿ, ಜಾರ್ಖಂಡ್‌ನಲ್ಲಿ ಕ್ರಿಕೆಟ್ ಆಟಕ್ಕೆ ಅಮಿತಾಬ್ ಅವರ ಕೊಡುಗೆ ಅಪಾರವಾಗಿದೆ. ಅವರ ನಿಧನದಿಂದ ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್​ಗೆ ಅಪಾರ ನಷ್ಟವಾಗಿದೆ. ಜಾರ್ಖಂಡ್‌ನಲ್ಲಿ ಅವರು ಬಿಟ್ಟುಹೋದ ಶೂನ್ಯವನ್ನು ತುಂಬಲು ಕಷ್ಟವಾಗುತ್ತದೆ. ಅವರ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು.

ಚೌಧರಿ ಅವರು ಮಾಜಿ ಐಪಿಎಸ್​ ಅಧಿಕಾರಿಯಾಗಿದ್ದರು ಹಾಗೂ ಕ್ರಿಕೆಟ್ ಅವರ ಹವ್ಯಾಸವಾಗಿತ್ತು. ಅವರು 2005-06 ರಲ್ಲಿ ಜಿಂಬಾಬ್ವೆ ಪ್ರವಾಸಕ್ಕಾಗಿ ಭಾರತೀಯ ತಂಡದ ಮ್ಯಾನೇಜರ್ ಆಗಿದ್ದರು. ಕುಖ್ಯಾತ ಗ್ರೆಗ್ ಚಾಪೆಲ್ ಸೌರವ್ ಗಂಗೂಲಿ ಮಧ್ಯೆ ವಿವಾದ ಹುಟ್ಟುಹಾಕಿದ ಕುಖ್ಯಾತ ಸರಣಿ ಇದಾಗಿತ್ತು.

ಬಿಸಿಸಿಐಗೆ ಆಡಳಿತಾಧಿಕಾರಿಗಳ ಸಮಿತಿ (ಸಿಒಎ)ಯು ಆಡಳಿತ ನಡೆಸಿದ ಅವಧಿಯಲ್ಲಿ ಚೌಧರಿ ಬಿಸಿಸಿಐ ಕಾರ್ಯದರ್ಶಿಯಾದರು. ಚಾಪೆಲ್ - ಗಂಗೂಲಿ ವಿವಾದವನ್ನು ಹತ್ತಿರದಿಂದ ನೋಡಿದ್ದ ನೋಡಿದ ಚೌಧರಿ ಈ ಬಾರಿ ವಿರಾಟ್ ಕೊಹ್ಲಿ-ಅನಿಲ್ ಕುಂಬ್ಳೆ ತಿಕ್ಕಾಟವನ್ನು ಎದುರಿಸಬೇಕಾಯಿತು. ಆಗಿನ ಟೀಂ ಇಂಡಿಯಾ ನಾಯಕ ಕೊಹ್ಲಿಯೊಂದಿಗಿನ ವೈಮನಸ್ಸಿನಿಂದ ಕುಂಬ್ಳೆ ಅಂತಿಮವಾಗಿ ಭಾರತ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಂಚಿಯನ್ನು ಜಾರ್ಖಂಡ್ ಕ್ರಿಕೆಟ್‌ನ ಪ್ರಧಾನ ಕಛೇರಿಯನ್ನಾಗಿ ಮಾಡುವಲ್ಲಿ ಅಮಿತಾಭ್ ಚೌಧರಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನು ಓದಿ:ಪ್ರಾಣಕ್ಕೆ ಕುತ್ತು ತಂದ ಸ್ಟಂಟ್​​.. ಸಮ್ಮರ್​ಸಾಲ್ಟ್​ ಮಾಡಿ ಜೀವ ಕಳೆದುಕೊಂಡ ಕಬಡ್ಡಿ ಪಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.