ETV Bharat / sports

ಇಂಗ್ಲೆಂಡ್​ಗೆ ಆಘಾತ: ಗಾಯದ ಕಾರಣ 3 ತಿಂಗಳು ತಂಡದಿಂದ ಹೊರಬಿದ್ದ ವಿಕೆಟ್ ಕೀಪರ್

author img

By

Published : May 26, 2021, 6:59 PM IST

ಮಿಡಲ್​ಎಸೆಕ್ಸ್​ ವಿರುದ್ಧದ ಕೌಂಟಿ ಪಂದ್ಯ ಮುಗಿದ ನಂತರ ಡ್ರೆಸ್ಸಿಂಗ್​ ರೂಮ್​ಗೆ ತೆರಳುವಾಗ ಜಾರಿ ಬಿದ್ದಿದ್ದು, ಇದರಿಂದ ಗಂಭೀರ ಮಂಡಿರಜ್ಜು ಗಾಯಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಚೇತರಿಸಿಕೊಳ್ಳಲು ಅವರಿಗೆ 3 ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿದು ಬಂದಿದೆ..

ಬೆನ್​ ಫೋಕ್ಸ್​
ಬೆನ್​ ಫೋಕ್ಸ್​

ಲಂಡನ್ : ಇಂಗ್ಲೆಂಡ್​ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಬೆನ್​ ಫೋಕ್ಸ್​ ಡ್ರೆಸ್ಸಿಂಗ್​ ರೂಮಿನಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದು, ಮುಂಬರುವ ನ್ಯೂಜಿಲ್ಯಾಂಡ್ ಸರಣಿ ಮತ್ತು ಭಾರತದ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರ ಬಿದ್ದಿದ್ದಾರೆ.

ಮಿಡಲ್​ಎಸೆಕ್ಸ್​ ವಿರುದ್ಧದ ಕೌಂಟಿ ಪಂದ್ಯ ಮುಗಿದ ನಂತರ ಡ್ರೆಸ್ಸಿಂಗ್​ ರೂಮ್​ಗೆ ತೆರಳುವಾಗ ಜಾರಿ ಬಿದ್ದಿದ್ದು, ಇದರಿಂದ ಗಂಭೀರ ಮಂಡಿರಜ್ಜು ಗಾಯಕ್ಕೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಚೇತರಿಸಿಕೊಳ್ಳಲು ಅವರಿಗೆ 3 ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿದು ಬಂದಿದೆ.

  • Get well soon, Foakesy 🙏

    Welcome Haseeb and Bilbo 👏

    — England Cricket (@englandcricket) May 26, 2021 " class="align-text-top noRightClick twitterSection" data=" ">

ಜೂನ್​ 2 ರಿಂದ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್​ ಸರಣಿ ಅವರ ಸ್ಥಾನಕ್ಕೆ ಟೆಸ್ಟ್​ ಕ್ರಿಕೆಟ್ ಆಡದ ಸ್ಯಾಮ್ ಬಿಲ್ಲಿಂಗ್ಸ್ ಇಂಗ್ಲೆಂಡ್ ತಂಡ ಸೇರಿಕೊಂಡಿದ್ದಾರೆ. ಇವರ ಜೊತೆಗೆ ಹಸೀಮ್ ಹಮೀದ್​ ಕೂಡ ತಂಡಕ್ಕೆ ಸೇರಿದ್ದಾರೆ.

ಐಪಿಎಲ್​ನಲ್ಲಿದ್ದ ಜೋಸ್ ಬಟ್ಲರ್, ಜಾನಿ ಬೈರ್​ಸ್ಟೋವ್, ಮೊಯೀನ್ ಅಲಿ, ಸ್ಯಾಮ್ ಕರ್ರನ್ ಮತ್ತು ಕ್ರಿಸ್​ ವೋಕ್ಸ್​ಗೆ ವಿಶ್ರಾಂತಿ ನೀಡಿದ್ದರಿಂದ ಬೆನ್​ ಕಿವೀಸ್​ ವಿರುದ್ಧ ಪ್ರಮುಖ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದರು. ದುರಾದೃಷ್ಟವಶಾತ್​ ಗಾಯದ ಕಾರಣ ತವರಿನ 2 ಪ್ರಮುಖ ಸರಣಿಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.

ಇದನ್ನು ಓದಿ: ನಿರ್ಭೀತಿಯಿಂದ ಆಟವಾಡಲು ಕೊಹ್ಲಿ ನಮ್ಮನ್ನು ಸದಾ ಪ್ರೋತ್ಸಾಹಿಸುತ್ತಾರೆ : ಶುಬ್ಮನ್ ಗಿಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.