ETV Bharat / sports

ಇಂಗ್ಲೆಂಡ್​ ಏಕದಿನ ವಿಶ್ವಕಪ್​​ ಗೆದ್ದು ವೈಟ್ ಬಾಲ್​ನಲ್ಲೂ ಶ್ರೇಷ್ಠ ತಂಡ ಎಂದು ಸಾಬೀತು ಪಡಿಸಬೇಕಿದೆ: ಮಾರ್ಗನ್

author img

By

Published : Nov 19, 2022, 9:00 PM IST

England will have to win next one day World Cup
ಮಾರ್ಗನ್

ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ 20 ವಿಶ್ವಕಪ್​ ಅನ್ನು ಇಂಗ್ಲೆಂಡ್​ ತಂಡ ಗೆದ್ದು ಕೊಂಡಿದೆ. 2019ರಲ್ಲಿ ಮಾರ್ಗನ್ ನಾಯಕತ್ವದಲ್ಲಿ ನ್ಯೂಜಿಲ್ಯಾಂಡ್​ ಮಣಿಸಿ ಏಕದಿನ ವಿಶ್ವಕಪ್ ಆಂಗ್ಲರು ಮುಡಿಗೇರಿಸಿಕೊಂಡಿದ್ದರು. ಮುಂದಿನ ವರ್ಷ ನಡೆಯುವ ಒಂದು ದಿನ ಮಾದರಿಯ ವಿಶ್ವ ಕಪ್ ಮತ್ತೆ ಗೆಲ್ಲಬೇಕು ಎಂದು ಮಾಜಿ ನಾಯಕ ಮಾರ್ಗನ್ ಅಭಿಪ್ರಾಯಪಟ್ಟಿದ್ದಾರೆ.

ಅಡಿಲೇಡ್: ಜೋಸ್ ಬಟ್ಲರ್ ನಾಯಕತ್ವದಲ್ಲಿ ಇಂಗ್ಲೆಂಡ್​ ತಂಡವು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನ್ನು ಗೆದ್ದು ಶ್ರೇಷ್ಠ ವೈಟ್‌ಬಾಲ್ ತಂಡಗಳಲ್ಲಿ ಒಂದೆಂದು ಕರೆಸಿಕೊಳ್ಳಬೇಕು. ಟಿ 20 ವಿಶ್ವಕಪ್ ಗೆದ್ದ ತಂಡಕ್ಕೆ ಇದು ಸುಲಭ ಸಾಧ್ಯ ಎಂದು ಇಯಾನ್ ಮಾರ್ಗನ್ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ-20 ವಿಶ್ವಕಪ್ ಅ​ನ್ನು ಇಂಗ್ಲೆಂಡ್​ ತಂಡ ಗೆದ್ದು ಕೊಂಡಿದೆ. 2019ರಲ್ಲಿ ಮಾರ್ಗನ್ ನಾಯಕತ್ವದಲ್ಲಿ ನ್ಯೂಜಿಲ್ಯಾಂಡ್​ ಮಣಿಸಿ ಏಕದಿನ ವಿಶ್ವಕಪ್ ಆಂಗ್ಲರು ಮುಡಿಗೇರಿಸಿಕೊಂಡಿದ್ದರು. ಮುಂದಿನ ವರ್ಷ ನಡೆಯುವ ಒಂದು ದಿನ ಮಾದರಿಯ ವಿಶ್ವ ಕಪ್ ಮತ್ತೆ ಗೆಲ್ಲಬೇಕು ಎಂದು ಮಾಜಿ ನಾಯಕ ಮಾರ್ಗನ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್​ ಮುಖಾಮುಖಿ ನೊಡಲು ಜನರು ಇಷ್ಟ ಪಡುತ್ತಾರೆ. ಇದು ಮುಂದಿನ ವರ್ಷದ ಏಕದಿನದಲ್ಲೂ ನೋಡಲು ಕಾತರರಾಗಿದ್ದೇವೆ. ಬಟ್ಲರ್​ ನಾಯಕತ್ವದಲ್ಲಿ ಇನ್ನೊಂದು ವಿಶ್ವಕಪ್​ ನೋಡಲು ಇಷ್ಟ ಪಡುತ್ತೇನೆ. ಟಿ 20 ವಿಶ್ವಕಪ್​ನಲ್ಲಿ ಬಟ್ಲರ್​ ಉತ್ತಮ ನಾಯಕತ್ವವನ್ನು ನಿಭಾಯಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಆಯ್ಕೆಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ


ETV Bharat Logo

Copyright © 2024 Ushodaya Enterprises Pvt. Ltd., All Rights Reserved.