IND vs SA: ದಕ್ಷಿಣ ಆಫ್ರಿಕಾ 182ಕ್ಕೆ7, ಭಾರತದ ವಿಜಯಕ್ಕೆ ಮೂರೇ ಮೆಟ್ಟಿಲು

author img

By

Published : Dec 30, 2021, 4:10 PM IST

Updated : Dec 30, 2021, 4:32 PM IST

India inch closer as South Africa struggle to 182/7 at lunch

ನಾಲ್ಕನೇ ದಿನ 305 ರನ್​ಗಳ ಗುರಿ ಪಡೆದ ಹರಿಣ ಪಡೆ 94 ರನ್​ಗಳಿಸಿ 4 ವಿಕೆಟ್ ಕಳೆದುಕೊಂಡಿತ್ತು. ಬುಧವಾರ 52 ರನ್​ಗಳಿಸಿದ್ದ ನಾಯಕ ಡೀನ್ ಎಲ್ಗರ್​ 5ನೇ ದಿನ ಟೆಂಬ ಬವೂಮ ಜೊತೆಗೆ ಬ್ಯಾಟಿಂಗ್ ಆರಂಭಿಸಿ 36 ರನ್ 14.3 ಓವರ್​ಗಳ ಕಾಲ ಕ್ರೀಸ್​ನಲ್ಲಿ ಕಾಲ ಕಳೆದರು.

ಸೆಂಚುರಿಯನ್( ದಕ್ಷಿಣ ಆಫ್ರಿಕಾ) ​: ಬಾಕ್ಸಿಂಗ್ ಡೇ ಟೆಸ್ಟ್​ ಕೊನೆಯ ದಿನಕ್ಕೆ ಕಾಲಿಟ್ಟಿದ್ದು, ಭಾರತ ನೀಡಿರುವ 305 ರನ್​ಗಳ ಗುರಿಯನ್ನು ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ ಭೋಜನ ವಿರಾಮಕ್ಕೂ ಮುನ್ನ 182 ರನ್​ಗಳಿಸಿ 7 ವಿಕೆಟ್​ ಕಳೆದುಕೊಂಡಿದೆ. ಟೀಮ್ ಇಂಡಿಯಾ ಈ ಪಂದ್ಯವನ್ನು ಗೆಲ್ಲಲು ಕೇವಲ 3 ವಿಕೆಟ್​ಗಳ ಅಗತ್ಯವಿದೆ.

ನಾಲ್ಕನೇ ದಿನ 305 ರನ್​ಗಳ ಗುರಿ ಪಡೆದ ಹರಿಣ ಪಡೆ 94 ರನ್​ಗಳಿಸಿ 4 ವಿಕೆಟ್ ಕಳೆದುಕೊಂಡಿತ್ತು. ಬುಧವಾರ 52 ರನ್​ಗಳಿಸಿದ್ದ ನಾಯಕ ಡೀನ್ ಎಲ್ಗರ್​ 5ನೇ ದಿನ ಟೆಂಬ ಬವೂಮ ಜೊತೆಗೆ ಬ್ಯಾಟಿಂಗ್ ಆರಂಭಿಸಿ 36 ರನ್ 14.3 ಓವರ್​ಗಳ ಕಾಲ ಕ್ರೀಸ್​ನಲ್ಲಿ ಕಾಲ ಕಳೆದರು.

ಈ ಹಂತದಲ್ಲಿ ಕಣಕ್ಕಿಳಿದ ಬುಮ್ರಾ 156 ಎಸೆತಗಳಲ್ಲಿ 12 ಬೌಂಡರಿ ಸಹಿತ ​77 ರನ್​ಗಳಿಸಿ ಅಪಾಯಕಾರಿಯಾಗುತ್ತಿದ್ದ ಡೀನ್ ಎಲ್ಗರ್​ ವಿಕೆಟ್ ಉಡಾಯಿಸಿ ಭಾರತಕ್ಕೆ ಬ್ರೇಕ್ ನೀಡಿದರು. ನಂತರ ಬಂದ ವಿಕೆಟ್ ಕೀಪರ್​ ಬ್ಯಾಟರ್​ ಕ್ವಿಂಟನ್​ ಡಿಕಾಕ್​ 21 ರನ್​ಗಳಿಸಿ ಸಿರಾಜ್​ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಆದರೆ, ನಂತರದ ಓವರ್​ನಲ್ಲೇ ಹೊಸ ಬ್ಯಾಟರ್​ ವಿಯಾನ್ ಮಲ್ಡರ್​ರನ್ನು ಶಮಿ ಪೆವಿಲಿಯನ್​ಗಟ್ಟಿದರು.

ಪ್ರಸ್ತುತ 78 ಎಸೆತಗಳಲ್ಲಿ 4 ಬೌಂಡರಿ ಸಹಿತ 34 ರನ್​ಗಳಿಸಿರುವ ಬವೂಮ ಮತ್ತು 5 ರನ್​ಗಳಿಸಿರುವ ಮರ್ಕೊ ಜಾನ್ಸನ್​ ಮೈದಾನದಲ್ಲಿದ್ದಾರೆ. ಇನ್ನೂ 73 ಓವರ್​ಗಳ ಆಟ ಬಾಕಿಯಿದೆ. ಆದರೆ, ಭಾರತಕ್ಕೆ ಈ ಪಂದ್ಯವನ್ನು ಗೆಲ್ಲಲು 3 ವಿಕೆಟ್​ಗಳ ಅಗತ್ಯವಿದ್ದು, ಬವೂಮ ವಿಕೆಟ್ ಪ್ರಮುಖವಾಗಿದೆ.

ಇದನ್ನೂ ಓದಿ:ಚೇತೇಶ್ವರ್ ಪೂಜಾರ, ರಹಾನೆ ಫಾರ್ಮ್​ ವಿಚಾರದಲ್ಲಿ ನಾವು ತಾಳ್ಮೆವಹಿಸಬೇಕಾಗಿದೆ: ಬ್ಯಾಟಿಂಗ್ ಕೋಚ್​ ರಾಥೋರ್

Last Updated :Dec 30, 2021, 4:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.