ETV Bharat / sports

ಎರಡೂ ಇನ್ನಿಂಗ್ಸ್​ನಲ್ಲೂ ಗೋಲ್ಡನ್​ ಡಕ್​ಗೆ ಔಟಾದ ಸ್ಯಾಮ್​ ಕರ್ರನ್​

author img

By

Published : Aug 16, 2021, 10:47 PM IST

ಸ್ಯಾಮ್ ಕರ್ರನ್ ಎರಡನೇ ಇನ್ನಿಂಗ್ಸ್​ನಲ್ಲಿ ಮೊಹಮ್ಮದ್ ಸಿರಾಜ್​ ಬೌಲಿಂಗ್​ನಲ್ಲಿ​ ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ಕೀಪರ್​ ಪಂತ್​ಗೆ ಕ್ಯಾಚ್​ ನೀಡಿ ಔಟಾದರು. ಮೊದಲ ಇನ್ನಿಂಗ್ಸ್​ನಲ್ಲಿ ಇಶಾಂತ್ ಶರ್ಮಾ ಬೌಲಿಂಗ್​ನಲ್ಲಿ ರೋಹಿತ್​ ಶರ್ಮಾಗೆ ಕ್ಯಾಚ್​ ನೀಡಿ ಗೋಲ್ಡನ್​ ಡಕ್​ ಆಗಿದ್ದರು.

ಗೋಲ್ಡನ್​ ಡಕ್​ಗೆ ಔಟಾದ ಸ್ಯಾಮ್​ ಕರ್ರನ್​
ಸ್ಯಾಮ್ ಕರ್ರನ್​

ಲಂಡನ್​: ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ತಂಡಗಳ ನಡುವಿನ 2ನೇ ಪಂದ್ಯದಲ್ಲಿ ಆಲ್​ರೌಂಡರ್​ ಸ್ಯಾಮ್​ ಕರ್ರನ್​ ಕಿಂಗ್ ಪೇರ್ ಅಥವಾ ಎರಡೂ ಇನ್ನಿಂಗ್ಸ್​ನಲ್ಲಿ ಗೋಲ್ಡನ್ ಡಕ್​ ಆದ ಅಪಕೀರ್ತಿಗೆ ಪಾತ್ರರಾಗಿದ್ದಾರೆ.

272 ರನ್​ಗಳ ಗುರಿ ಬೆನ್ನತ್ತಿರುವ ಇಂಗ್ಲೆಂಡ್​ 90 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್​ಗೆ ಆಗಮಿಸಿ ಸ್ಯಾಮ್ ಕರ್ರನ್, ಮೊಹಮ್ಮದ್ ಸಿರಾಜ್​ ಬೌಲಿಂಗ್​ನಲ್ಲಿ​ ತಾವೆದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ಕೀಪರ್​ ಪಂತ್​ಗೆ ಕ್ಯಾಚ್​ ನೀಡಿ ಔಟಾದರು. ಮೊದಲ ಇನ್ನಿಂಗ್ಸ್​ನಲ್ಲಿ ಇಶಾಂತ್ ಶರ್ಮಾ ಬೌಲಿಂಗ್​ನಲ್ಲಿ ರೋಹಿತ್​ ಶರ್ಮಾಗೆ ಕ್ಯಾಚ್​ ನೀಡಿ ಗೋಲ್ಡನ್​ ಡಕ್​ ಆಗಿದ್ದರು.

ಈ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 364 ರನ್​ಗಳಿಸಿತ್ತು, ಇದಕ್ಕುತ್ತರವಾಗಿ ಇಂಗ್ಲೆಂಡ್​ 391 ರನ್​ಗಳಿಸಿತ್ತು. 27 ರನ್​ಗಳ ಹಿನ್ನಡೆಯಿಂದ 2ನೇ ಇನ್ನಿಂಗ್ಸ್​ನಲ್ಲಿ ಭಾರತ 298ರನ್​ಗಳಿಗೆ ಡಿಕ್ಲೇರ್ ಘೋಷಿಸಿ ಇಂಗ್ಲೆಂಡ್​ಗೆ 272 ರನ್​ಗಳ ಟಾರ್ಗೆಟ್​ ನೀಡಿದೆ.

ಕಿಂಗ್​ ಪೇರ್ಸ್​ ಸಂಪಾದಿಸಿದ ಇಂಗ್ಲೆಂಡ್​ನ 4ನೇ ಬ್ಯಾಟ್ಸ್​ಮನ್:

  • ವಿಲಿಯಂ ಅಟ್ಟೆವೆಲ್ vs ಆಸ್ಟ್ರೇಲಿಯಾ, ಸಿಡ್ನಿ -1891/92
  • ಎರ್ನಿ ಹೇನ್ಸ್ vs ದಕ್ಷಿಣ ಆಫ್ರಿಕಾ, ಕೇಪ್ ಟೌನ್- 1905/06
  • ಜೇಮ್ಸ್ ಆಂಡರ್ಸನ್ vs ಭಾರತ, ವೈಜಾಗ್- 2016/17
  • ಸ್ಯಾಮ್ ಕರ್ರನ್ vs ಭಾರತ, ಲಾರ್ಡ್ಸ್- 2021

ಇದನ್ನು ಓದಿ: ಪದೇ ಪದೇ ಕೆಣಕಿದ ಆಂಗ್ಲರಿಗೆ ಬ್ಯಾಟ್​ನಿಂದಲೇ ಉತ್ತರಿಸಿದ ಶಮಿ-ಬುಮ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.