ETV Bharat / sports

IND vs ENG​: 53 ವರ್ಷಗಳಿಂದ ಸೋಲೇ ಕಾಣದ ಲೀಡ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಗೆಲುವಿನ ಕನಸು

author img

By

Published : Aug 24, 2021, 5:17 PM IST

ಜಾಕ್​ ಕ್ರಾಲೇ ಮತ್ತು ಡಾಮ್ ಸಿಬ್ಲೀಯನ್ನು 2ನೇ ಟೆಸ್ಟ್​ ವೇಳೆ ತಂಡದಿಂದ ಕೈಬಿಡಲಾಗಿದೆ. ವೇಗಿ ಮಾರ್ಕ್​ ವುಡ್​ 3ನೇ ಟೆಸ್ಟ್​ನಿಂದ ಹೊರಬಿದ್ದಿದ್ದಾರೆ. ಹಾಗಾಗಿ ಈ ಪಂದ್ಯದಲ್ಲಿ ಇಂಗ್ಲೆಂಡ್​ ಬಳಗದಲ್ಲಿ ಹಲವು ಹೊಸಮುಖಗಳನ್ನು ಕಾಣುವ ಸಾಧ್ಯತೆಯಿದೆ. ಆದರೆ ಭಾರತ ತನ್ನ ವಿಜೇತ ತಂಡವನ್ನು ಬಲಾಯಿಸುವ ಸಾಧ್ಯತೆ ಕಡಿಮೆಯಿದೆ.

Eng vs Ind test
ಭಾರತ vs ಇಂಗ್ಲೆಂಡ್ ಟೆಸ್ಟ್​

ಲೀಡ್ಸ್​: ಗಾಯದಿಂದ ತತ್ತರಿಸಿರುವ ಇಂಗ್ಲೆಂಡ್​ ವಿರುದ್ಧ ಲಾರ್ಡ್ಸ್​ ಪಂದ್ಯದಲ್ಲಿ ಗೆದ್ದು ಅತ್ಯುತ್ಸಾಹದಲ್ಲಿರುವ ವಿರಾಟ್​ ಕೊಹ್ಲಿ ಬಳಗೆ ಲೀಡ್ಸ್​ನಲ್ಲಿ ಬುಧವಾರದಿಂದ ಆರಂಭವಾಗಲಿರುವ 3ನೇ ಟೆಸ್ಟ್​ ಪಂದ್ಯವನ್ನು ಗೆದ್ದು ಐತಿಹಾಸಿಕ ಸರಣಿಯ ಜಯ ಸಾಧಿಸಲು ಎದುರು ನೋಡುತ್ತಿದೆ.

ಭಾರತದಲ್ಲಿ ಕೈಯಲ್ಲಿದ್ದ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ, 2ನೇ ಪಂದ್ಯದಲ್ಲಿ 151 ರನ್​ಗಳ ಜಯ ಸಾಧಿಸಿದ ಟೀಮ್ ಇಂಡಿಯಾ 5 ಪಂದ್ಯಗಳ ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ಲಾರ್ಡ್ಸ್​ ವಿಜಯದ ಹುಮ್ಮಸ್ಸಿನಲ್ಲಿರುವ ಭಾರತ ಲೀಡ್ಸ್​ ಟೆಸ್ಟ್​ ಗೆಲ್ಲುವ ಮೂಲಕ ಆಂಗ್ಲರ ವಿರುದ್ಧ 2-0ಯಲ್ಲಿ ಮುನ್ನಡೆ ಸಾಧಿಸುವತ್ತ ಕಣ್ಣಿಟ್ಟಿದೆ.

ಜಾಕ್​ ಕ್ರಾಲೇ ಮತ್ತು ಡಾಮ್ ಸಿಬ್ಲೀಯನ್ನು 2ನೇ ಟೆಸ್ಟ್​ ವೇಳೆ ತಂಡದಿಂದ ಕೈಬಿಡಲಾಗಿದೆ. ವೇಗಿ ಮಾರ್ಕ್​ ವುಡ್​ 3ನೇ ಟೆಸ್ಟ್​ನಿಂದ ಹೊರಬಿದ್ದಿದ್ದಾರೆ. ಹಾಗಾಗಿ ಈ ಪಂದ್ಯದಲ್ಲಿ ಇಂಗ್ಲೆಂಡ್​ ಬಳಗದಲ್ಲಿ ಹಲವು ಹೊಸಮುಖಗಳನ್ನು ಕಾಣುವ ಸಾಧ್ಯತೆಯಿದೆ. ಆದರೆ ಭಾರತ ತನ್ನ ವಿಜೇತ ತಂಡವನ್ನು ಬಲಾಯಿಸುವ ಸಾಧ್ಯತೆ ಕಡಿಮೆಯಿದೆ.

ಶಾರ್ದೂಲ್​ ಠಾಕೂರ್​ ಅವರು ಫಿಟ್​ ಎಂದು ಘೋಷಿಸಿದರೂ ನಾವು ತಂಡದ ಸಂಯೋಜನೆಯನ್ನು ಬದಲಾಯಿಸುವ ಬಗ್ಗೆ ಇನ್ನು ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದು ತಂಡದ ಉಪನಾಯಕ ಅಜಿಂಕ್ಯ ರಹಾನೆ ಸೋಮವಾರ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ರಹಾನೆ ನಾವು ಇಂಗ್ಲಿಷ್ ಪರಿಸ್ಥಿತಿಯ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ, ಬದಲಾಗಿ ಪಂದ್ಯ ಮೇಲೆ ಗಮನ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್​ ತಂಡಕ್ಕೆ ಎಡಗೈ ಬ್ಯಾಟ್ಸ್​ಮನ್ ಡೇವಿಡ್​ ಮಲನ್​ ಸೇರ್ಪಡೆಯನ್ನು ನಾಯಕ ಜೋ ರೂಟ್​ ಖಚಿತಪಡಿಸಿದ್ದು, ಆರಂಭಿಕ ಕ್ರಮಾಂಕಕ್ಕೆ ಬಲ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೇಗಿ ಸಾದಿಕ್​ ಮೊಹ್ಮದ್ ಕೂಡ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆಯಿದೆ.

19 ವರ್ಷಗಳ ನಂತರ ಮುಖಾಮುಖಿ:

ಭಾರತ ತಂಡ ಹೆಡಿಂಗ್ಲೆಯಲ್ಲಿ ಬರೋಬ್ಬರಿ 19 ವರ್ಷಗಳ ನಂತರ ಇಂಗ್ಲೆಂಡ್​ ಎದುರು ಕಣಕ್ಕಿಳಿಯಲಿದೆ. ಕೊನೆಯ ಬಾರಿ ಭಾರತ ತಂಡ ಸೌರವ್​ ಗಂಗೂಲಿ ನೇತೃತ್ವದಲ್ಲಿ ಈ ಕ್ರೀಡಾಂಗಣದಲ್ಲಿ ಆಡಿ, ಇನ್ನಿಂಗ್ಸ್​ ಹಾಗೂ 46 ರನ್​ಗಳಿಂದ ಆಂಗ್ಲರನ್ನು ಮಣಿಸಿತ್ತು. 2002 ಆಗಸ್ಟ್​ 22-26 ಮಧ್ಯೆ ನಡೆದಿದ್ದ ಆ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 628 ರನ್​ಗಳಿಸಿತ್ತು. ರಾಹುಲ್ ದ್ರಾವಿಡ್​(148), ಸಚಿನ್ ತೆಂಡೂಲ್ಕರ್​ 193 ಮತ್ತು ಸೌರವ್​ ಗಂಗೂಲಿ(128) ಭರ್ಜರಿ ಶತಕ ಸಿಡಿಸಿದ್ದರು. ಇದಕ್ಕುತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ 273 ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ 309ರನ್​ಗಳಿಗೆ ಆಲೌಟ್ ಆಗಿ ಇನ್ನಿಂಗ್ಸ್​ ಮತ್ತು 46 ರನ್​ಗಳ ಸೋಲು ಕಂಡಿತ್ತು.

ಭಾರತ ಈ ಮೈದಾನದಲ್ಲಿ ಕೊನೆಯ ಬಾರಿ ಸೋತಿರುವುದು 1967ರಲ್ಲಿ. ನಂತರ ಆಡಿರುವ 3 ಪಂದ್ಯಗಳಲ್ಲಿ ಟೀಂ ಇಂಡಿಯಾ 2ರಲ್ಲಿ ಜಯ ಸಾಧಿಸಿದರೆ, ಮತ್ತೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.

ಭಾರತಕ್ಕೆ ಸ್ನೇಹಿಯಾಗಿರುವ ಈ ಮೈದಾನ ಇಂಗ್ಲೆಂಡ್ ಕಹಿ ನೆನಪಿನ ತಾಣವಾಗಿದೆ. ಈ ಮೈದಾನದಲ್ಲಿ ಆಡಿರುವ ಕೊನೆಯ 11 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದರೆ, 6ರಲ್ಲಿ ಸೋಲು ಮತ್ತು ಒಂದರಲ್ಲಿ ಡ್ರಾ ಸಾಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.