ETV Bharat / sports

ಲೈಂಗಿಕ ದೌರ್ಜನ್ಯದ ವೇಳೆ ಮಹಿಳೆ ಕುತ್ತಿಗೆ ಹಿಸುಕಿದ್ದ ಶ್ರೀಲಂಕಾ ಆಟಗಾರ: ಆರೋಪ

author img

By

Published : Nov 9, 2022, 10:30 PM IST

ಶ್ರೀಲಂಕಾದ ಬ್ಯಾಟರ್​ ಧನುಷ್ಕಾ ಗುಣತಿಲಕ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಜೈಲುಪಾಲಾಗಿದ್ದು, ಮಹಿಳೆ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿದ್ದ ಎಂಬುದು ಪೊಲೀಸ್​ ವರದಿಯಲ್ಲಿದೆ.

danushka-gunathilaka-choked-sydney-woman
ಲೈಂಗಿನ ದೌರ್ಜನ್ಯದ ವೇಳೆ ಮಹಿಳೆ ಕುತ್ತಿಗೆ ಹಿಸುಕಿದ್ದ ಶ್ರೀಲಂಕಾ ಆಟಗಾರ

ಸಿಡ್ನಿ(ಆಸ್ಟ್ರೇಲಿಯಾ): ಶ್ರೀಲಂಕಾ ಸ್ಟಾರ್​ ಬ್ಯಾಟರ್​ ಧನುಷ್ಕಾ ಗುಣತಿಲಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾಗ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿದ್ದ, ಇದರಿಂದ ತಾನು ಮೆದುಳಿನ ತಪಾಸಣೆಗೆ ಒಳಗಾಗಬೇಕಾಗಿ ಬಂತು ಎಂದು ದೂರುದಾರೆ ಮಹಿಳೆ ಆರೋಪಿಸಿದ್ದಾಗಿ ವರದಿಯಾಗಿದೆ.

ಶ್ರೀಲಂಕಾದ ಆಟಗಾರನ ಜೊತೆಗೆ ತಾನು ಡೇಟಿಂಗ್​ ಹೋದಾಗ ನನ್ನ ಮೇಲೆ 4 ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ, ಆತ ನನ್ನ ಕತ್ತನ್ನು ಹಿಸುಕಿದ್ದ. ಉಸಿರುಗಟ್ಟಿಸುವ ಯತ್ನ ನಡೆಸಿದ್ದ. ಇದರಿಂದ ತಪ್ಪಿಸಿಕೊಳ್ಳಲು ನಾನು ಒದ್ದಾಡಿದೆ. ಕೈ ಹಿಡಿದು ಎಳೆದರೂ ಬಿಡದ ಆತ ಬಿಗಿಯಾಗಿ ಹಿಡಿದಿದ್ದ ಎಂಬುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಆಟಗಾರನ ಈ ಕೃತ್ಯ ನನ್ನ ಪ್ರಾಣಕ್ಕೆ ಕುತ್ತು ತರುವ ಹಾಗಿತ್ತು. ಇದರಿಂದ ಮಹಿಳೆ ತೀವ್ರ ಆತಂಕಗೊಂಡಿದ್ದರು. ಇದನ್ನು ಗಮನಿಸಿದರೆ, ಮಹಿಳೆಗೆ ಇದರಲ್ಲಿ ಸಮ್ಮತಿ ಇರಲಿಲ್ಲ ಎಂಬುದು ತಿಳಿದು ಬರುತ್ತದೆ ಎಂದು ವರದಿ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್​ 12ಕ್ಕೆ ನಿಗದಿಪಡಿಸಲಾಗಿದೆ.

ಈ ಮಧ್ಯೆ ಅತ್ಯಾಚಾರ ಆರೋಪ ಕೇಳಿಬಂದು ಜೈಲುಪಾಲಾಗಿರುವ ಗುಣತಿಲಕ ವಿರುದ್ಧ ಶ್ರೀಲಂಕಾ ಕ್ರಿಕೆಟ್​ ಮಂಡಳಿ ನಿಷೇಧ ಹೇರಿದ್ದು, ಎಲ್ಲ ಮಾದರಿಯ ಕ್ರಿಕೆಟ್​ನಿಂದ ಆಟಗಾರನನ್ನು ಅಮಾನತು ಮಾಡಲಾಗಿದೆ.

ಓದಿ: ಅತ್ಯಾಚಾರ ಆರೋಪ: ಕ್ರಿಕೆಟ್​ನಿಂದ ಗುಣತಿಲಕಗೆ ಲಂಕಾ ಕ್ರಿಕೆಟ್​ ಮಂಡಳಿ ನಿಷೇಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.