ETV Bharat / sports

ಅತ್ಯಾಚಾರ ಆರೋಪ: ಕ್ರಿಕೆಟ್​ನಿಂದ ಗುಣತಿಲಕಗೆ ಲಂಕಾ ಕ್ರಿಕೆಟ್​ ಮಂಡಳಿ ನಿಷೇಧ

author img

By

Published : Nov 7, 2022, 11:02 PM IST

ಆಸ್ಟ್ರೇಲಿಯಾದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬ್ಯಾಟರ್​ ದನುಷ್ಕಾ ಗುಣತಿಲಕರನ್ನು ಶ್ರೀಲಂಕಾ ಕ್ರಿಕೆಟ್​ ಮಂಡಳಿ ಎಲ್ಲ ಕ್ರಿಕೆಟ್​​​ನಿಂದ ಅಮಾನತು ಮಾಡಿದೆ.

Sri Lanka Cricket suspends Danushka Gunathilaka
ಕೆಟ್​ನಿಂದ ಗುಣತಿಲಕಗೆ ಲಂಕಾ ಕ್ರಿಕೆಟ್​ ಮಂಡಳಿ ನಿಷೇಧ

ಕೊಲಂಬೋ(ಶ್ರೀಲಂಕಾ): ಆಸ್ಟ್ರೇಲಿಯಾದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬ್ಯಾಟರ್​ ದನುಷ್ಕಾ ಗುಣತಿಲಕರನ್ನು ಶ್ರೀಲಂಕಾ ಕ್ರಿಕೆಟ್​ ಮಂಡಳಿ ಎಲ್ಲ ಕ್ರಿಕೆಟ್​​​ನಿಂದ ಅಮಾನತು ಮಾಡಿದೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್‌ನಿಂದ ಹೊರಬಿದ್ದ ಬಳಿಕ ತಂಡದ ಎಲ್ಲ ಆಟಗಾರರು ದೇಶಕ್ಕೆ ವಾಪಸ್​ ಆಗಿದ್ದರು. ಅಲ್ಲಿಯೇ ಉಳಿದುಕೊಂಡಿದ್ದ ಗುಣತಿಲಕ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಕೇಸಲ್ಲಿ ಬಂಧಿಸಲಾಗಿದೆ.

ಇದರಿಂದ ಶ್ರೀಲಂಕಾ ಕ್ರಿಕೆಟ್​ ಮಂಡಳಿ ದನುಷ್ಕಾ ಗುಣತಿಲಕರನ್ನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ. ಇನ್ನು ಮುಂದೆ ಯಾವುದೇ ಮಾದರಿಯ ಕ್ರಿಕೆಟ್​ಗೆ ಗುಣತಿಲಕರನ್ನು ಪರಿಗಣಿಸುವಂತಿಲ್ಲ ಎಂದು ಲಂಕಾ ಕ್ರಿಕೆಟ್‌ ಕಾರ್ಯಕಾರಿ ಸಮಿತಿ ಘೋಷಿಸಿದೆ.

ಶೂನ್ಯ ಸಹಿಷ್ಣುತೆ ಕಾಪಾಡಲು ಆಟಗಾರರ ನಡವಳಿಕೆ ಮುಖ್ಯ. ಕ್ರಿಕೆಟರ್​ ಮೇಲಿರುವ ತನಿಖೆಯನ್ನು ತ್ವರಿತವಾಗಿ ಕೈಗೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ. ಇನ್ನು ಅತ್ಯಾಚಾರ ಕೇಸಲ್ಲಿ ಜೈಲು ಸೇರಿರುವ ಗುಣತಿಲಕನಿಗೆ ಅಲ್ಲಿನ ಕೋರ್ಟ್​ ಜಾಮೀನು ನಿರಾಕರಿಸಿದೆ.

ಓದಿ: ಅತ್ಯಾಚಾರ ಆರೋಪ: ಶ್ರೀಲಂಕಾ ಸ್ಟಾರ್ ಬ್ಯಾಟ್ಸ್‌ಮನ್​ಗೆ ಜಾಮೀನು ನಿರಾಕರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.