ETV Bharat / sports

ಹರ್ಭಜನ್ ಸಿಂಗ್​ ಬೌಲಿಂಗ್​ ನಕಲಿಸಿದ ವಿರಾಟ್​ ಕೊಹ್ಲಿ, ವಿಡಿಯೋ ವೈರಲ್​

author img

By

Published : Jan 7, 2020, 11:56 PM IST

Updated : Jan 8, 2020, 2:57 PM IST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಬೌಲಿಂಗ್​​​ನಂತೆ ನಕಲು ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ViratKohli imitating Harbhajan
ViratKohli imitating Harbhajan

ಇಂದೋರ್‌ (ಮಧ್ಯಪ್ರದೇಶ): ಇಲ್ಲಿನ ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯ ಪ್ರಾರಂಭಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಬೌಲಿಂಗ್​​​ನಂತೆ ನಕಲಿ ಬೌಲಿಂಗ್​ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಪಂದ್ಯ ಆರಂಭಕ್ಕೂ ಮೊದಲು ಕೊಹ್ಲಿ ಅಭ್ಯಾಸ ನಡೆಸುತ್ತಿದ್ದ ಸಮಯದಲ್ಲಿ ಕೊಹ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂತು. 39 ಸೆಕೆಂಡ್​ಗಳಿರುವ ಈ ವಿಡಿಯೋ ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಜ್ಜಿ ಮುಂದೆಯೇ ಈ ಬೌಲಿಂಗ್​:

ಪಂದ್ಯ ಆರಂಭಕ್ಕೂ ಮುನ್ನ ಭಜ್ಜಿ, ಇರ್ಫಾನ್​ ಫಠಾಣ್​ ನೇರ ಪ್ರಸಾರದ ನಿರೂಪಕರಾಗಿದ್ದರು. ಈ ಅಭ್ಯಾಸದ ಸಂದರ್ಭದಲ್ಲಿ ಭಜ್ಜಿಯಂತೆಯೇ ಬೌಲಿಂಗ್​ ಅನುಕರಣೆ ಮಾಡಿದರು. ಬಾಲ್​ ಎಸೆದ ಬಳಿಕ ತಲೆ ಮೇಲೆ ಎರಡೂ ಕೈಗಳನ್ನಿಟ್ಟುಕೊಂಡು ಭಜ್ಜಿಗೆ ಗೇಲಿ ಮಾಡಿದರು. ಬೌಲಿಂಗ್​ ಅವರಂತೆ ಎಸೆಯಲು ಸಾಧ್ಯವಾಗದ ನಂತರ ಸೊಂಟ ಬಳುಕಿಸಿ ಕೊಹ್ಲಿ ನಕ್ಕರು. ಆಗ ಭಜ್ಜಿ​ ಕೂಡ ನಗೆ ಬೀರಿ ಒಬ್ಬರನ್ನೊಬ್ಬರು ತಬ್ಬಿಕೊಂಡರು.

Intro:Body:

translate 3


Conclusion:
Last Updated :Jan 8, 2020, 2:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.