ETV Bharat / sports

ಕೊಹ್ಲಿಯ 2 ನೆಚ್ಚಿನ ಪಂದ್ಯಗಳಲ್ಲಿ 2011 ವಿಶ್ವಕಪ್​ ಫೈನ​ಲ್​ ದಿ ಬೆಸ್ಟ್​: ಮತ್ತೊಂದು ಯಾವುದು ಗೊತ್ತಾ?

author img

By

Published : May 9, 2020, 4:38 PM IST

ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ ಆಗಿ ವಿಜೃಂಭಿಸುತ್ತಿರುವ ಕೊಹ್ಲಿ ಟಿವಿ ಶೋ ಒಂದರಲ್ಲಿ ಮಾತನಾಡುತ್ತಾ ತಮ್ಮ ನೆಚ್ಚಿನ ಪಂದ್ಯಗಳನ್ನು ಬಹಿರಂಗಪಡಿಸಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ಮುಂಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ 2011ರಲ್ಲಿ ಗೆದ್ದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯವನ್ನು ಅವರ ವೃತ್ತಿ ಜೀವನದ ಶ್ರೇಷ್ಠ ಪಂದ್ಯ ಎಂದಿದ್ದಾರೆ. ಇದನ್ನು ಬಿಟ್ಟರೆ 2016ರ ವಿಶ್ವಕಪ್​ನ ಕ್ವಾರ್ಟರ್​ಫೈನಲ್​ ಪಂದ್ಯ ಅವರ ನೆಚ್ಚಿನ ಪಂದ್ಯ ಎಂದು ತಿಳಿಸಿದ್ದಾರೆ.

2016 ಟಿ20 ವಿಶ್ವಕಪ್​ ಕ್ವಾರ್ಟರ್​ ಪಂದ್ಯದ ಗೆಲುವಿನ ಸಂಭ್ರಮದಲ್ಲಿ ಕೊಹ್ಲಿ
2016 ಟಿ20 ವಿಶ್ವಕಪ್​ ಕ್ವಾರ್ಟರ್​ ಪಂದ್ಯದ ಗೆಲುವಿನ ಸಂಭ್ರಮದಲ್ಲಿ ಕೊಹ್ಲಿ

ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ ಆಗಿ ವಿಜೃಂಭಿಸುತ್ತಿರುವ ಕೊಹ್ಲಿ ಟಿವಿ ಶೋ ಒಂದರಲ್ಲಿ ಮಾತನಾಡುತ್ತಾ ತಮ್ಮ ನೆಚ್ಚಿನ ಪಂದ್ಯಗಳನ್ನು ಬಹಿರಂಗಪಡಿಸಿದ್ದಾರೆ.

​2011ರ ವಿಶ್ವಕಪ್​ ಫೈನಲ್​ ಪಂದ್ಯವನ್ನು ಬಿಟ್ಟರೆ ನನ್ನ ನೆಚ್ಚಿನ ಪಂದ್ಯವೆಂದರೆ 2017 ರ ಟಿ-20 ವಿಶ್ವಕಪ್​ನಲ್ಲಿ ಮೊಹಾಲಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್​ ಫೈನಲ್​ ಪಂದ್ಯ ಎಂದು ರನ್​ಮಷಿನ್​ ಕೊಹ್ಲಿ ತಿಳಿಸಿದ್ದಾರೆ.

2011ರ ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧದ ಗೆದ್ದು 28 ವರ್ಷಗಳ ವಿಶ್ವಕಪ್​ ಬರ ನೀಗಿಸಿಕೊಂಡಿತ್ತು. ಇನ್ನು 2016ರಲ್ಲಿ ಟಿ-20 ವಿಶ್ವಕಪ್​ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ವಿರಾಟ್​ 82 ರನ್​ಗಳಿಸಿ ತಂಡವನ್ನು ಸೆಮಿಫೈನಲ್​ಗೆ ಪ್ರವೇಶಿಸಲು ಕಾರಣರಾಗಿದ್ದರು.

ಆದರೆ, ಭಾರತ ತಂಡ ಸೆಮಿಫೈನಲ್​ನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಸೋಲುಕಾಣುವ ಮೂಲಕ ನಿರಾಶೆ ಅನುಭವಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.