ETV Bharat / sports

ಸೆಹ್ವಾಗ್​, ಸಚಿನ್ ಸಹಿತ 73 ವರ್ಷಗಳ​ ದಾಖಲೆ ಮುರಿದ ಸ್ಟಿವ್​ ಸ್ಮಿತ್​!

author img

By

Published : Nov 30, 2019, 1:34 PM IST

ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಪಂದ್ಯದಲ್ಲಿ ಸ್ಟಿವ್​ ಸ್ಮಿತ್​ ತಮ್ಮ 126ನೇ ಇನ್ನಿಂಗ್ಸ್​ನಲ್ಲಿ 7000 ಸಾವಿರ ರನ್​ ಗಡಿ ದಾಟುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟ್ಸ್​ಮನ್​ ಎನಿಸಿಕೊಂಡರು.

Steve Smith fastest to 7,000 runs in Tests
Steve Smith fastest to 7,000 runs in Tests

ಅಡಿಲೇಡ್: ಆಸ್ಟ್ರೇಲಿಯಾದ ರನ್​ಮಷಿನ್ ಎಂದೇ ಖ್ಯಾತರಾಗಿರುವ ಸ್ಟಿವ್​ ಸ್ಮಿತ್​ ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 7000 ರನ್​ಗಳಿಸಿ ದಾಖಲೆ ಬರೆದಿದ್ದಾರೆ.

ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಪಂದ್ಯದಲ್ಲಿ ಸ್ಟಿವ್​ ಸ್ಮಿತ್​ ತಮ್ಮ 126ನೇ ಇನ್ನಿಂಗ್ಸ್​ನಲ್ಲಿ 7000 ಸಾವಿರ ಗಡಿ ದಾಟುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟ್ಸ್​ಮನ್​ ಎನಿಸಿಕೊಂಡರು.

ಇದಕ್ಕೂ ಮುನ್ನ 1946ರಲ್ಲಿ ಇಂಗ್ಲೆಂಡ್​ನ ವ್ಯಾಲಿ ಹ್ಯಾಮಂಡ್​ 131 ಇನ್ನಿಂಗ್ಸ್​ಗಳಲ್ಲಿ 7 ಸಾವಿರ ರನ್​ಗಳಿಸಿ ದಾಖಲೆ ಬರೆದಿದ್ದರು. ಇದೀಗ 73 ವರ್ಷಗಳ ಬಳಿಕ ಆ ದಾಖಲೆ ಸ್ಮಿತ್​ ಪಾಲಾಗಿದೆ. ​ ಸೆಹ್ವಾಗ್ 134 ಇನ್ನಿಂಗ್ಸ್​ಗಳಲ್ಲಿ, ಸಚಿನ್​ ತೆಂಡೂಲ್ಕರ್​ 136 ಇನ್ನಿಂಗ್ಸ್​ಗಳಲ್ಲಿ 7000 ಸಾವಿರ ಗಡಿದಾಟಿ ನಂತರದ ಸ್ಥಾನದಲ್ಲಿದ್ದಾರೆ.

  • Steve Smith goes past Don Bradman to become the 11th Australian player to reach 7000 Test runs 🙌

    He is the quickest in the world to achieve the feat, in just 126 innings!#AUSvPAK pic.twitter.com/RY2yxw2b5h

    — ICC (@ICC) November 30, 2019 " class="align-text-top noRightClick twitterSection" data=" ">

ಇನ್ನು ವೇಗವಾಗಿ 1000 ರನ್​ ಬಾರಿಸಿದ ದಾಖಲೆ ಇಂಗ್ಲೆಂಡ್​ನ ಪೀಟರ್​ ಸಟ್​ಕ್ಲಿಫ್ ​ಹಾಗೂ ವಿಂಡೀಸ್​ನ ಎವೆರ್​ಟನ್​ ವೀಕ್ಸ್​ ಹೆಸರಿನಲ್ಲಿದ್ದರೆ, 2000, 3000, 4000, 5000 ರನ್​ಗಳನ್ನು ವೇಗವಾಗಿ ಸಿಡಿಸಿದ ದಾಖಲೆ ಆಸೀಸ್​ನ ಡಾನ್​ ಬ್ರಾಡ್ಮನ್​ ಹೆಸರಿನಲ್ಲಿದೆ. 8000 ಹಾಗೂ 9000 ಸಂಗಾಕ್ಕರ ಹೆಸರಿನಲ್ಲಿದೆ.

10 ಸಾವಿರ ಮೈಲಿಗಲ್ಲನ್ನು ವೇಗವಾಗಿ ತಲುಪಿದ ದಾಖಲೆ ಜಂಟಿಯಾಗಿ ಲಾರಾ, ಸಚಿನ್​ ಹಾಗೂ ಸಂಗಾಕ್ಕರ(195ಇನ್ನಿಂಗ್ಸ್​) ಹೆಸರಿನಲ್ಲಿದೆ. ವೇಗವಾಗಿ 11ಹಾಗೂ 12 ಸಾವಿರ ತಲುಪಿದ ದಾಖಲೆ ಕೂಡ ಸಂಗಾಕ್ಕರ ಹೆಸರಿನಲ್ಲಿದೆ. ಆದರೆ 13,14 ಹಾಗೂ 15 ಸಾವಿರ ರನ್ ವೇಗವಾಗಿ ತಲುಪಿದ ದಾಖಲೆ ಭಾರತದ ಬ್ಯಾಟಿಂಗ್​ ದಿಗ್ಗಜ ಸಚಿನ್​ ಹೆಸರಲ್ಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.