ETV Bharat / sports

ಮೊದಲ ಎಸೆತದಲ್ಲೇ ಗೋಲ್ಡನ್​ ಡಕ್​ ಬೇಡದ ದಾಖಲೆಗೆ ತುತ್ತಾದ ಡೀನ್ ಎಲ್ಗರ್​

author img

By

Published : Dec 26, 2019, 8:06 PM IST

ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್​ಮನ್​ ಡೀನ್​ ಎಲ್ಗರ್​ ಬೇಡದ ದಾಖಲೆಗೆ ತುತ್ತಾಗಿದ್ದಾರೆ.

South Africa vs England
South Africa vs England

ಸೆಂಚುರಿಯನ್​: ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್​ಮನ್​ ಡೀನ್​ ಎಲ್ಗರ್​ ಬೇಡದ ದಾಖಲೆಗೆ ತುತ್ತಾಗಿದ್ದಾರೆ.

ಗುರುವಾರದಿಂದ ಸೆಂಚುರಿಯನ್​ಲ್ಲಿ ಆರಂಭವಾದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್​ ಆತೀಥೇಯರನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಇದರಂತೆ ಡೀನ್​ ಎಲ್ಗರ್​ ಹಾಗೂ ಐಡೆನ್​ ಮಾರ್ಕ್ರಮ್​ ಆರಂಭಿಕರಾಗಿ ಬ್ಯಾಟಿಂಗ್ ಆಗಮಿಸಿದ್ದರು.

ಇಂಗ್ಲೆಂಡ್ ನಾಯಕ ವೇಗಿ ಜೇಮ್ಸ್​ ಆ್ಯಂಡರ್ಸನ್ ಮೊದಲ ಓವರ್​ ಎಸೆಯಲು ತಿಳಿಸಿದರು. ಆ್ಯಂಡರ್ಸನ್​​ ಬೌಲಿಂಗ್​ ಮಾಡಿದ ಮೊದಲ ಓವರ್​ನ ಮೊದಲ ಎಸೆತದಲ್ಲೇ ಎಲ್ಗರ್​ ವಿಕೆಟ್​ ಕೀಪರ್ಗೆ ಕ್ಯಾಚ್​ ನೀಡಿ ಗೋಲ್ಡನ್​ ಡಕ್​ ಆದರು. ಈ ಮೂಲಕ ಈ ರೀತಿ ಟೆಸ್ಟ್​ ಕ್ರಿಕೆಟ್​ನಲ್ಲಿ ಔಟಾದ ದಕ್ಷಿಣ ಆಫ್ರಿಕಾದ 4 ನೇ ಬ್ಯಾಟ್ಸ್​ಮನ್​ ಹಾಗೂ ವಿಶ್ವದ 32 ನೇ ಬ್ಯಾಟ್ಸ್​ಮನ್​ ಎಂಬ ಕುಖ್ಯಾತಿ ಪಡೆದರು.

ಡೀನ್​ ಎಲ್ಗರ್​ಗಿಂತ ಮೊದಲು ಗ್ಯಾರಿ ಕಿರ್ಸ್ಟನ್​, ಕರ್ಟ್ಲಿ ಆಂಬ್ರೋಸ್​, ಜಿಮ್ಮಿ ಕುಕ್​ ಹಾಗೂ ಎಡ್ಡಿ ಬಾರ್ಲೊ ದಕ್ಷಿಣ ಆಫ್ರಿಕಾ ತಂಡದ ಪರ ಮೊದಲ ಎಸೆತದಲ್ಲಿ ವಿಕೆಟ್​ ಒಪ್ಪಿಸಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.