ETV Bharat / sports

ಸಿರಾಜ್​ರನ್ನು ಪ್ರೇಕ್ಷಕರು ಕಂದು ನಾಯಿ, ದೊಡ್ಡ ಕೋತಿ ಎಂದು ನಿಂದಿಸಿದ್ದಾರೆ : ಬಿಸಿಸಿಐ ಮೂಲ

author img

By

Published : Jan 10, 2021, 5:51 PM IST

ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕ್ರಿಕೆಟ್​ ಆಸ್ಟ್ರೇಲಿಯಾ, ಖಂಡಿತಾ ಆ ವ್ಯಕ್ತಿಗಳು ಕ್ಷಮೆಗೆ ಅರ್ಹರಲ್ಲ ಎಂದಿದೆ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮಾತು ನೀಡಿದೆ. ಈ ಘಟನೆ ನಂತರ ನ್ಯೂಸ್ ಸೌತ್​ ವೇಲ್ಸ್​ ಪೊಲೀಸರು ಆ ಪ್ರೇಕ್ಷಕರನ್ನು ಮೈದಾನದಿಂದ ಹೊರ ಕರೆದೊಯ್ದು, ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ..

ಸಿರಾಜ್​ ಜನಾಂಗೀಯ ನಿಂದನೆ
ಸಿರಾಜ್​ ಜನಾಂಗೀಯ ನಿಂದನೆ

ನವದೆಹಲಿ : ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವಿನ 3ನೇ ಪಂದ್ಯದ ನಾಲ್ಕನೇ ದಿನ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರ ಒಂದು ಗುಂಪು ಸಿರಾಜ್​ರನ್ನು 'ಬ್ರೌನ್​ ಡಾನ್'​ ಮತ್ತು 'ಬಿಗ್​ ಮಂಕಿ' ಎಂದು ಕರೆದು ನಿಂದಿಸಿದ್ದಾರೆ ಎಂದು ಬಿಸಿಸಿಐ ಆರೋಪಿಸಿದೆ.

ಮೊಹಮ್ಮದ್​ ಸಿರಾಜ್ ಮತ್ತು ತಂಡದ ಹಿರಿಯ ಬೌಲರ್​ ಜಸ್ಪ್ರೀತ್​ ಬುಮ್ರಾ ಅವರನ್ನು ಅವಾಚ್ಯ ಪದಗಳಿಂದ ಕುಡಿದ ಮತ್ತಿನಲ್ಲಿದ್ದ ಪ್ರೇಕ್ಷಕರ ಗುಂಪೊಂದು ನಿಂದಿಸಿದೆ ಎಂದು ಬಿಸಿಸಿಐ ಅಧಿಕಾರಿಗಳು ಮ್ಯಾಚ್​ ರೆಫ್ರಿ ಡೇವಿಡ್​ ಬೂನ್​ಗೆ ಶನಿವಾರ ವರದಿ ಮಾಡಿತ್ತು. ಆದರೆ, ಭಾನುವಾರ ಕೂಡ ತಮ್ಮ ಚಾಳಿ ಬಿಡದ ಕೆಲ ಪ್ರೇಕ್ಷಕರ ಗುಂಪು ಮತ್ತೆ ಸಿರಾಜ್ ಫೀಲ್ಡಿಂಗ್ ಮಾಡುವ ವೇಳೆ ಜನಾಂಗೀಯ ನಿಂದನೆ ಮಾಡಿದೆ.

"ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ತಮ್ಮನ್ನು ಬ್ರೌನ್​ ಡಾಗ್​, ಬಿಗ್​ ಮಂಕಿ ಎಂದು ಕರೆದಿದ್ದಾರೆಂದು ಸಿರಾಜ್​ ಆರೋಪಿಸಿದ್ದಾರೆ. ಈ ರೀತಿ ಆಟಗಾರರನ್ನು ಸಂಬೋಧಿಸುವುದು ಜನಾಂಗೀಯ ನಿಂದನೆಯಾಗಿದೆ. ತಕ್ಷಣ ಈ ವಿಚಾರವನ್ನು ಮೈದಾನದ ಅಂಪೈರ್​ಗಳ ಗಮನಕ್ಕೆ ತರಲಾಯಿತು. ಆ ಗುಂಪು ನಿರಂತರವಾಗಿ ಬುಮ್ರಾರನ್ನು ಕೂಡ ನಿಂದಿಸುತ್ತಿತ್ತು" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮೊಹಮ್ಮದ್ ಸಿರಾಜ್​
ಮೊಹಮ್ಮದ್ ಸಿರಾಜ್​

ಇದನ್ನು ಓದಿ:ಇದು ನಾಚಿಕೆಗೇಡು, ನನ್ನ ಜೀವನದಲ್ಲಿ ಕಾಡುವ ಘಟನೆ.. ಜನಾಂಗೀಯ ನಿಂದನೆ ಬಗ್ಗೆ ಲ್ಯಾಂಗರ್​ ಕಿಡಿ

ಆಟಗಾರರು ಪಂದ್ಯದ ಮಧ್ಯೆ ಈ ವಿಚಾರವನ್ನು ತಂದು ಪಂದ್ಯದ ಮೇಲೆ ತಮ್ಮ ಗಮನವನ್ನು ಕಳೆದುಕೊಳ್ಳಲು ಬಯಸಿರಲಿಲ್ಲ. ನಾವು ಪಂದ್ಯ ಮುಗಿದ ಮೇಲೆ ವರದಿ ಮಾಡಬೇಕೆಂದಿದ್ದೆವು. ಆದರೆ, ಅಂಪೈರ್​ಗಳೇ ಇಂತಹ ಘಟನೆ ಯಾವುದೇ ಸಂದರ್ಭದಲ್ಲಿ ನಡೆದರೂ ನಮಗೆ ವರದಿ ಮಾಡಿ ಎಂದು ತಿಳಿಸಿದ್ದರು. ಹಾಗಾಗಿ, ನಮ್ಮ ಆಟಗಾರರು ತಕ್ಷಣ ವರದಿ ಮಾಡಿದರು ಎಂದು ಆ ಅಧಿಕಾರಿ ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕ್ರಿಕೆಟ್​ ಆಸ್ಟ್ರೇಲಿಯಾ, ಖಂಡಿತಾ ಆ ವ್ಯಕ್ತಿಗಳು ಕ್ಷಮೆಗೆ ಅರ್ಹರಲ್ಲ ಎಂದಿದೆ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮಾತು ನೀಡಿದೆ. ಈ ಘಟನೆ ನಂತರ ನ್ಯೂಸ್ ಸೌತ್​ ವೇಲ್ಸ್​ ಪೊಲೀಸರು ಆ ಪ್ರೇಕ್ಷಕರನ್ನು ಮೈದಾನದಿಂದ ಹೊರ ಕರೆದೊಯ್ದು, ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ನೀವು ಆಟಗಾರರಿಗೆ ಗೌರವ ಕೊಡದಿದ್ರೆ ಮೈದಾನಕ್ಕೆ ಬರಬೇಡಿ: ಇರ್ಫಾನ್​ ಪಠಾಣ್​

ಇದನ್ನು ಓದಿ:ಹಿಂದೆಯೂ ಸಿಡ್ನಿ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಅನುಭವಿಸಿದ್ದೇವೆ: ರವಿಚಂದ್ರನ್​ ಅಶ್ವಿನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.