ETV Bharat / sports

ಬದಲಾದ ಕೋಚ್​... ಇನ್ನಾದರೂ ಬದಲಾಗುವುದೇ ಆರ್​ಸಿಬಿ ಹಣೆಬರಹ!

author img

By

Published : Aug 23, 2019, 4:16 PM IST

Updated : Aug 24, 2019, 9:11 AM IST

ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್​​ಮನ್​​ ಸೈಮನ್ ಕ್ಯಾಟಿಚ್ ಅವರನ್ನು ತಂಡದ ಮುಖ್ಯ ಕೋಚ್​ ಆಗಿ ನೇಮಕಗೊಳಿಸಿದೆ. ಆರ್​ಸಿಬಿ ತಂಡಕ್ಕೆ ಇಷ್ಟು ದಿನ ಗ್ಯಾರಿ ಕರ್ಸ್ಟನ್‌ ಕೋಚ್​ ಆಗಿದ್ದರು.

katich

ಮುಂಬೈ: ಟೀಂ ಇಂಡಿಯಾದ ಮುಖ್ಯ ಕೋಚ್​ ಹುದ್ದೆಗಾಗಿ ಅರ್ಜಿ ಗುಜರಾಯಿಸಿದ್ದ ನ್ಯೂಜಿಲ್ಯಾಂಡ್​ ಕ್ರಿಕೆಟ್​​ನ ಮಾಜಿ ಕೋಚ್​​ ಮೈಕ್​ ಹೆಸ್ಸನ್ ಅವರನ್ನು ರವಿಶಾಸ್ತ್ರಿ ಹಿಂದಿಕ್ಕಿದ್ದು ಎಲ್ಲರಿಗೂ ತಿಳಿದು ವಿಚಾರ. ಈ ಮಧ್ಯೆ ಭಾರತದಲ್ಲೇ ಅವರಿಗೆ ಮತ್ತೊಂದು ಅವಕಾಶದ ಬಾಗಿಲು ತೆರೆದಿದೆ.

ಆಗಸ್ಟ್​​ 16ರಂದು ನಡೆದ ಸಂದರ್ಶನದಲ್ಲಿ ಕಪಿಲ್​ ದೇವ್​ ನೇತೃತ್ವದ ಕ್ರಿಕೆಟ್​ ಸಲಹಾ ಸಮಿತಿ, ನ್ಯೂಜಿಲ್ಯಾಂಡ್​ ತಂಡದ ಮಾಜಿ ಕೋಚ್​​ ಮೈಕ್​ ಹೆಸ್ಸನ್​ ಅವರ ಹೆಸರನ್ನು ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಅಂತಿಮಗೊಳಿಸಿತ್ತು. ಆದರೆ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಸಲಹೆ ಮೇರೆಗೆ ಇನ್ನೊಂದು ಅವಧಿಗೆ ರವಿಶಾಸ್ತ್ರಿಯನ್ನೇ ತಂಡದ ಕೋಚ್​ ಆಗಿ ಮರುನೇಮಕಗೊಳಿಸಿ ಆದೇಶ ಹೊರಡಿಸಿದ್ದರು. ಇದೀಗ ಇಂಡಿಯನ್​ ಪ್ರೀಮಿಯರ್​​ ಲೀಗ್​​ನ ಆರ್​ಸಿಬಿ ತಂಡ ಹೆಸ್ಸನ್‌ ಅವರಿಗೆ ಮಣೆ ಹಾಕಿದೆ.

RCB Director
ಮೈಕ್​ ಹೆಸ್ಸನ್

ಆರ್​ಸಿಬಿ ತಂಡ ಮೈಕ್​ ಹೆಸ್ಸನ್​​​ ಅವರಿಗೆ ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕನ್ನಾಗಿ ಆಯ್ಕೆ ಮಾಡಿದೆ. ಜತೆಗೆ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್​​ಮನ್​​ ಸೈಮನ್ ಕ್ಯಾಟಿಚ್ ಅವರನ್ನು ತಂಡದ ಮುಖ್ಯ ಕೋಚ್​ ಆಗಿ ನೇಮಕಗೊಳಿಸಿದೆ. ಆರ್​ಸಿಬಿ ತಂಡಕ್ಕೆ ಇಷ್ಟು ದಿನ ಗ್ಯಾರಿ ಕರ್ಸ್ಟನ್‌ ಕೋಚ್​ ಆಗಿದ್ದರು. ತಂಡದ ಬೌಲಿಂಗ್​ ಕೋಚ್​ ಆಗಿದ್ದ ಆಶಿಶ್​ ನೇಹ್ರಾಗೂ ತಂಡದಿಂದ ಕೊಕ್​ ನೀಡಲಾಗಿದೆ.

ಆರ್​ಸಿಬಿ ತಂಡದಲ್ಲಿ ಇಷ್ಟು ದಿನ ಡೈರೆಕ್ಟರ್​​ ಹುದ್ದೆ ಇರಲಿಲ್ಲ. ಇದೇ ಮೊದಲ ಬಾರಿಗೆ ಈ ಹುದ್ದೆ ಕ್ರಿಯೆಟ್​ ಮಾಡಿ ಹೆಸ್ಸನ್​ ನೇಮಕ ಮಾಡಿಕೊಂಡಿದೆ. ಕಳೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಕೋಚ್​ ಆಗಿದ್ದ ಹೆಸ್ಸನ್​, ಟೀಂ ಇಂಡಿಯಾ ಕೋಚ್​ ಹುದ್ದೆ ಮೇಲೆ ಕಣ್ಣಿಟ್ಟು ರಾಜೀನಾಮೆ ನೀಡಿದ್ದರು. ಆದರೆ ಅವರನ್ನು ಕ್ರಿಕೆಟ್​ ಸಲಹಾ ಸಮಿತಿ ಆಯ್ಕೆ ಮಾಡಿರಲಿಲ್ಲ.

ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್​​ಮನ್​​ ಸೈಮನ್ ಕ್ಯಾಟಿಚ್, ಈಗಾಗಲೇ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.

Intro:Body:

ಟೀಂ ಇಂಡಿಯಾ ಕೋಚ್​​ ಹುದ್ದೆ ತಪ್ಪಿದ್ರೇನಾಯ್ತು... ಆರ್​​ಸಿಬಿ ಡೈರೆಕ್ಟರ್​​ ಹುದ್ದೆ ಗಿಟ್ಟಿಸಿಕೊಂಡ ಹೆಸ್ಸನ್! 



ಮುಂಬೈ: ಟೀಂ ಇಂಡಿಯಾ ಕ್ರಿಕೆಟ್​​​ನ ಮುಖ್ಯ ಕೋಚ್​ ಹುದ್ದೆಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದ ನ್ಯೂಜಿಲ್ಯಾಂಡ್​ ಕ್ರಿಕೆಟ್​​ನ ಮಾಜಿ ಕೋಚ್​​ ಮೈಕ್​ ಹೆಸ್ಸನ್​​​ ರವಿಶಾಸ್ತ್ರಿ ಹಿಂದಿಕ್ಕಿ ಸಂದರ್ಶನಕಾರರ ಗಮನ ಸೆಳೆದು ರೇಸ್​​​ನಿಂದ ಹೊರಬಿದ್ದಿರುವುದು ಎಲ್ಲರಿಗೂ ತಿಳಿದು ವಿಚಾರ.ಇದರ ಮಧ್ಯೆ ಅವರಿಗೆ ಮತ್ತೊಂದು ಮಹತ್ವದ ಹುದ್ದೆ ಹುಡುಕಿಕೊಂಡು ಬಂದಿದೆ. 



ಆಗಸ್ಟ್​​ 16ರಂದು ನಡೆದ ಸಂದರ್ಶನದಲ್ಲಿ ಕಪಿಲ್​ ದೇವ್​ ನೇತೃತ್ವದ ಕ್ರಿಕೆಟ್​ ಸಲಹಾ ಸಮಿತಿ, ನ್ಯೂಜಿಲ್ಯಾಂಡ್​ ತಂಡದ ಮಾಜಿ ಕೋಚ್​​ ಮೈಕ್​ ಹೆಸ್ಸನ್​ ಅವರ ಹೆಸರನ್ನು ಫೈನಲ್​ ಮಾಡಿದ್ದರು. ಆದರೆ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಸಲಹೆ ಮೇರೆಗೆ ಇನ್ನೊಂದು ಅವಧಿಗೆ ರವಿಶಾಸ್ತ್ರಿಯನ್ನ ತಂಡದ ಕೋಚ್​ ಆಗಿ ಮರುನೇಮಕಗೊಳಿಸಿ ಆದೇಶ ಹೊರಡಿಸಿದ್ದರು. ಇದೀಗ ಇಂಡಿಯನ್​ ಪ್ರೀಮಿಯರ್​​ ಲೀಗ್​​ನ ಆರ್​ಸಿಬಿ ತಂಡ ಹೆನ್ಸನ್​ಗೆ ಮಣೆ ಹಾಕಿದೆ. 



ಆರ್​ಸಿಬಿ ತಂಡ ಮೈಕ್​ ಹೆಸ್ಸನ್​​​ ಅವರಿಗೆ ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕನ್ನಾಗಿ ಆಯ್ಕೆ ಮಾಡಿದೆ. ಜತೆಗೆ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್​​ಮನ್​​  ಸೈಮನ್ ಕಟಿಚ್ ಅವರನ್ನ ತಂಡದ ಮುಖ್ಯ ಕೋಚ್​ ಆಗಿ ನೇಮಕಗೊಳಿಸಿದೆ. ಆರ್​ಸಿಬಿ ತಂಡಕ್ಕೆ ಇಷ್ಟು ದಿನ ಗ್ಯಾರಿ ಕಸ್ಟನ್​​ ಕೋಚ್​ ಆಗಿದ್ದರು. ಇನ್ನು ಆಶಿಶ್​ ನೇಹ್ರಾ ತಂಡದ ಬೌಲಿಂಗ್​ ಕೋಚ್​ ಆಗಿ ಮುಂದುವರಿದಿದ್ದಾರೆ. 



ಆರ್​ಸಿಬಿ ತಂಡದಲ್ಲಿ ಇಷ್ಟು ದಿನ ಡೈರೆಕ್ಟರ್​​ ಹುದ್ದೆ ಇರಲಿಲ್ಲ. ಇದೇ ಮೊದಲ ಬಾರಿಗೆ ಈ ಹುದ್ದೆ ಕ್ರಿಯೆಟ್​ ಮಾಡಿ ಹೆಸ್ಸನ್​ ನೇಮಕ ಮಾಡಿಕೊಂಡಿದೆ. ಕಳೆದ ಇಂಡಿಯನ್​ ಪ್ರಿಮೀಯರ್​ ಲೀಗ್​​ನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಕೋಚ್​ ಆಗಿದ್ದ ಹೆಸ್ಸನ್​, ಟೀಂ ಇಂಡಿಯಾ ಕೋಚ್​ ಹುದ್ದೆ ಮೇಲೆ ಕಣ್ಣಿಟ್ಟು ರಾಜೀನಾಮೆ ನೀಡಿದ್ದರು. ಆದರೆ ಅವರನ್ನ ಕ್ರಿಕೆಟ್​ ಸಲಹಾ ಸಮಿತಿ ಆಯ್ಕೆ ಮಾಡಿರಲಿಲ್ಲ. 



ಇನ್ನು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್​​ಮನ್​​  ಸೈಮನ್ ಕಟಿಚ್, ಈಗಾಗಲೇ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಅವರಿಗೆ ಇದೀಗ ಆರ್​ಸಿಬಿ ಮಣೆ ಹಾಕಿದೆ. 


Conclusion:
Last Updated : Aug 24, 2019, 9:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.