ETV Bharat / sports

ಟೀಂ ಇಂಡಿಯಾ ಕೋಚ್​​ ಹುದ್ದೆ ಮೇಲೆ ಕಣ್ಣು... ಕಿಂಗ್ಸ್​ ಇಲೆವೆನ್​​ ಪಂಜಾಬ್​ ತೊರೆದ ಮೈಕ್ ಹೆಸ್ಸನ್!

author img

By

Published : Aug 8, 2019, 4:43 PM IST

ಟೀಂ ಇಂಡಿಯಾ ಕೋಚ್​ ಹುದ್ದೆ ಮೇಲೆ ಕಣ್ಣಿಟ್ಟಿರುವ ನ್ಯೂಜಿಲ್ಯಾಂಡ್​​ನ ಮಾಜಿ ಕ್ರಿಕೆಟಿಗ ಹಾಗೂ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಕೋಚ್​ ಮೈಕ್​ ಹಸ್ಸನ್​ ಇದೀಗ ಐಪಿಎಲ್​​ನಲ್ಲಿ ಪಂಜಾಬ್​ ತಂಡದ ಕೋಚ್​ ಆಗಿ ಮುಂದುವರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಮೈಕ್ ಹೆಸ್ಸನ್/Mike Hesson

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ನ್ಯೂಜಿಲ್ಯಾಂಡ್​​ನ ಮಾಜಿ ಆಟಗಾರ ಮೈಕ್​ ಹಸ್ಸನ್​ ಇದೀಗ ತಮ್ಮ ಕೋಚ್​ ಹುದ್ದೆಗೆ ರಾಜೀನಾಮೆ ನೀಡಿದ್ದು, ಟೀಂ ಇಂಡಿಯಾ ಪುರುಷರ ತಂಡದ ಕೋಚ್​ ಆಗಲು ಮುಂದಾಗಿದ್ದಾರೆ.

ಈಗಾಗಲೇ ಟೀಂ ಇಂಡಿಯಾ ಹಿರಿಯರ ತಂಡದ ಕೋಚ್​ ಹುದ್ದಗೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಅದಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು, ಇದೀಗ ಪಂಜಾಬ್​​​ ತಂಡದ ಕೋಚ್​ ಹುದ್ದೆಗೆ ರಾಜೀನಾಮೆ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

ಈಗಾಗಲೇ ನ್ಯೂಜಿಲ್ಯಾಂಡ್​ ತಂಡದ ಕೋಚ್​ ಆಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಮೈಕ್​ ಹಸ್ಸೆನ್​, ಇದೀಗ ಟೀಂ ಇಂಡಿಯಾ ಕೋಚ್​ ಆಗಲು ಮುಂದಾಗಿದ್ದಾರೆ. ಇವರ ಜತೆಗೆ ಆಸ್ಟ್ರೇಲಿಯಾ ಆಲ್​​ರೌಂಡರ್ ಟಾಮ್ ಮೂಡಿ, ಟೀಂ ಇಂಡಿಯಾದ ಮಾಜಿ ಪ್ಲೇಯರ್​​ ರಾಬಿನ್ ಸಿಂಗ್​​, ಲಾಲ್​ಚಂದ್ ರಜಪೂತ್ ಸೇರಿ ಪ್ರಮುಖರು ಅರ್ಜಿ ಸಲ್ಲಿಸಿದ್ದಾರೆ. ಇವರ ಜೊತೆಗೆ ದ. ಆಫ್ರಿಕಾ ಮಾಜಿ ಆಟಗಾರ ಜಾಂಟಿ ರೋಡ್ಸ್​ ಕೂಡ ಫೀಲ್ಡಿಂಗ್​​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಒಟ್ಟು 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವ ಬಗ್ಗೆ ತಿಳಿದು ಬಂದಿದೆ.

ಇನ್ನು ಈಗಾಗಲೇ ಕೋಚ್​ ಆಗಿರುವ ರವಿಶಾಸ್ತ್ರಿ ನೇರವಾಗಿ ಸಂದರ್ಶನದಲ್ಲಿ ಭಾಗಿಯಾಗಲಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಮುಖ್ಯ ತರಬೇತುದಾರರಾಗಿ ಸೇರಲು ಆರಂಭದಲ್ಲಿ ಉತ್ಸಾಹ ತೋರಿದ್ದ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ದನೆ ಅರ್ಜಿ ಸಲ್ಲಿಕೆ ಮಾಡಿಲ್ಲ ಎನ್ನುವುದು ಗಮನಾರ್ಹ ಸಂಗತಿ.

Intro:Body:

ಟೀಂ ಇಂಡಿಯಾ ಕೋಚ್​​ ಹುದ್ದೆ ಮೇಲೆ ಕಣ್ಣು... ಕಿಂಗ್ಸ್​ ಇಲೆವೆನ್​​ ಪಂಜಾಬ್​ ತೊರೆದ ಮೈಕ್ ಹೆಸ್ಸನ್! 

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ನ್ಯೂಜಿಲ್ಯಾಂಡ್​​ನ ಮಾಜಿ ಆಟಗಾರ ಮೈಕ್​ ಹಸ್ಸನ್​ ಇದೀಗ ತಮ್ಮ ಕೋಚ್​ ಹುದ್ದೆಗೆ ರಾಜೀನಾಮೆ ನೀಡಿದ್ದು, ಟೀಂ ಇಂಡಿಯಾ ಪುರುಷರ ತಂಡದ ಕೋಚ್​ ಆಗಲು ಮುಂದಾಗಿದ್ದಾರೆ. 

ಈಗಾಗಲೇ ಟೀಂ ಇಂಡಿಯಾ ಹಿರಿಯರ ತಂಡದ ಕೋಚ್​ ಹುದ್ದಗೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಅದಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು, ಇದೀಗ ಪಂಜಾಬ್​​​ ತಂಡದ ಕೋಚ್​ ಹುದ್ದೆಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ. 

ಈಗಾಗಲೇ ನ್ಯೂಜಿಲ್ಯಾಂಡ್​ ತಂಡದ ಕೋಚ್​ ಆಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಮೈಕ್​ ಹಸ್ಸೆನ್​, ಇದೀಗ ಟೀಂ ಇಂಡಿಯಾ ಕೋಚ್​ ಆಗಲು ಮುಂದಾಗಿದ್ದಾರೆ. ಇವರ ಜತೆಗೆ ಆಸ್ಟ್ರೇಲಿಯಾ ಆಲ್​​ರೌಂಡರ್ ಟಾಮ್ ಮೂಡಿ, ಟೀಂ ಇಂಡಿಯಾದ ಮಾಜಿ ಪ್ಲೇಯರ್​​ ರಾಬಿನ್ ಸಿಂಗ್​​, ಲಾಲ್​ಚಂದ್ ರಜಪೂತ್ ಸೇರಿ ಪ್ರಮುಖರು ಅರ್ಜಿ ಸಲ್ಲಿಸಿದ್ದಾರೆ. ಇವರ ಜೊತೆಗೆ ದ. ಆಫ್ರಿಕಾ ಮಾಜಿ ಆಟಗಾರ ಜಾಂಟಿ ರೋಡ್ಸ್​ ಕೂಡ ಫೀಲ್ಡಿಂಗ್​​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಒಟ್ಟು 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವ ಬಗ್ಗೆ ತಿಳಿದು ಬಂದಿದೆ. 

ಇನ್ನು ಈಗಾಗಲೇ ಕೋಚ್​ ಆಗಿರುವ ರವಿಶಾಸ್ತ್ರಿ ನೇರವಾಗಿ ಸಂದರ್ಶನದಲ್ಲಿ ಭಾಗಿಯಾಗಲಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಮುಖ್ಯ ತರಬೇತುದಾರರಾಗಿ ಸೇರಲು ಆರಂಭದಲ್ಲಿ ಉತ್ಸಾಹ ತೋರಿದ್ದ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅರ್ಜಿ ಸಲ್ಲಿಕೆ ಮಾಡಿಲ್ಲ ಎನ್ನುವುದು ಗಮನಾರ್ಹ ಸಂಗತಿ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.