ETV Bharat / sports

ಇಂಡಿಯಾ ವರ್ಸಸ್ ಇಂಗ್ಲೆಂಡ್​: ಆಂಗ್ಲರ ಆಟಕ್ಕೆ ಕಂಗೆಟ್ಟ ಟೀಂ ಇಂಡಿಯಾ ಪ್ಲೇಯರ್ಸ್​ಗೆ ಕೊಹ್ಲಿ ಧೈರ್ಯ!

author img

By

Published : Feb 6, 2021, 11:42 AM IST

ಇಂಗ್ಲೆಂಡ್ ಬ್ಯಾಟಿಂಗ್ ಅಬ್ಬರಕ್ಕೆ ಟೀಂ ಇಂಡಿಯಾ ಪ್ಲೇಯರ್ಸ್ ಕಂಗೆಟ್ಟು ಹೋಗಿದ್ದು, ಅವರು ಆತ್ಮಸ್ಥೈರ್ಯ ಕಳೆದುಕೊಳ್ಳದ ರೀತಿಯಲ್ಲಿ ಕಪ್ತಾನ್ ವಿರಾಟ್​ ಹುರುದುಂಬಿಸಿದ್ದಾರೆ.

Ind vs Eng
Ind vs Eng

ಚೆನ್ನೈ: ಇಲ್ಲಿನ ಪಿ. ಚಿದಂಬರಂ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್​ ಪಂದ್ಯ ಆರಂಭಗೊಂಡಿದ್ದು, ಟಾಸ್​ ಗೆದ್ದು ಬ್ಯಾಟಿಂಗ್ ನಡೆಸುತ್ತಿರುವ ಆಂಗ್ಲರ ಪಡೆ ಎರಡನೇ ದಿನವೂ ಟೀಂ ಇಂಡಿಯಾ ಬೌಲರ್​ಗಳ ಮೇಲೆ ಭರ್ಜರಿ ಸವಾರಿ ನಡೆಸಿದೆ.

ಎರಡನೇ ದಿನದಾಟ ಆರಂಭವಾಗುವುದಕ್ಕೂ ಮುಂಚಿತವಾಗಿ ಮೈದಾನದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸಹ ಆಟಗಾರರಿಗೆ ಹುರಿದುಂಬಿಸಿ, ಧೈರ್ಯದ ಮಾತುಗಳನ್ನಾಡಿದ್ದಾರೆ. ಇದರ ವಿಡಿಯೋ ಭಾರತೀಯ ಕ್ರಿಕೆಟ್ ಮಂಡಳಿ ತನ್ನ ಟ್ವೀಟರ್​ ಅಕೌಂಟ್​ನಲ್ಲಿ ಶೇರ್ ಮಾಡಿದೆ.

Ind vs Eng
ಮೈದಾನದಲ್ಲಿ ವಿರಾಟ್​ ಕೊಹ್ಲಿ ಮಾತು

ಓದಿ: ಇಂಡಿಯಾ vs ಇಂಗ್ಲೆಂಡ್: ರೂಟ್​ 150, ಸ್ಟೋಕ್ಸ್​ 50, ತ್ರಿಶತಕ ದಾಖಲಿಸಿದ ಆಂಗ್ಲರ ಪಡೆ

ಮೊದಲ ದಿನವೇ ಇಂಗ್ಲೆಂಡ್ ಉತ್ತಮ ಬ್ಯಾಟಿಂಗ್ ನಡೆಸಿರುವ ಕಾರಣ ಟೀಂ ಇಂಡಿಯಾ ಪ್ಲೇಯರ್ಸ್ ಮನೋಬಲ ಕಡಿಮೆಯಾಗಿದ್ದು, ಹೀಗಾಗಿ ತಂಡದ ಸಹ ಆಟಗಾರರಲ್ಲಿ ಕೊಹ್ಲಿ ಧೈರ್ಯ ತುಂಬಿದ್ದಾರೆ. ಎರಡನೇ ದಿನದಾಟದಲ್ಲೂ ಇಂಗ್ಲೆಂಡ್ ಪ್ಲೇಯರ್ಸ್ ಟೀಂ ಇಂಡಿಯಾ ಬೌಲರ್​ಗಳ ಮೇಲೆ ಸವಾರಿ ನಡೆಸುತ್ತಿದ್ದು, ಸ್ಫೋಟಕ ಬ್ಯಾಟಿಂಗ್ ಮೊರೆ ಹೋಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.