ETV Bharat / sports

'ಫೈರ್​ ವರ್ಕ್'​​ನೊಂದಿಗೆ ಹೊಸ ವರ್ಷ... ಬಹುದಿನಗಳ ಪ್ರೀತಿ ಸಾರ್ವಜನಿಕವಾಗಿ ಒಪ್ಪಿಕೊಂಡ ಪಾಂಡ್ಯ!

author img

By

Published : Jan 1, 2020, 4:40 PM IST

ಟೀಂ ಇಂಡಿಯಾದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ತಮ್ಮ ಬಹುದಿನದ ಗೆಳತಿಯನ್ನ ಪರಿಚಯ ಮಾಡಿಕೊಡುವ ಮೂಲಕ 2020 ವೆಲ್​​ಕಮ್​ ಮಾಡಿಕೊಂಡಿದ್ದಾರೆ.

Hardik Pandya
ಹಾರ್ದಿಕ್​ ಪಾಂಡ್ಯ

ಮುಂಬೈ: ಟೀಂ ಇಂಡಿಯಾದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ತಮ್ಮ ಬಹುದಿನಗಳ ಪ್ರೀತಿಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಮೂಲಕ ಹೊಸ ವರ್ಷವನ್ನು ವೆಲ್​​ಕಮ್​ ಮಾಡಿಕೊಂಡಿದ್ದಾರೆ.

ಸರ್ಬಿಯನ್ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್‍ರೊಂದಿಗೆ ಹಲವು ದಿನಗಳಿಂದ ಹಾರ್ದಿಕ್​​ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಆದರೆ ಇದೀಗ ಬಹುದಿನಗಳ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ್ದಾರೆ.

Hardik Pandya
ಹಾರ್ದಿಕ್​ ಪಾಂಡ್ಯ

2019ಕ್ಕೆ ವಿದಾಯ ಹೇಳಿ 2020ಕ್ಕೆ ಲಗ್ಗೆ ಹಾಕಿರುವ ಮೊದಲ ದಿನವೇ ಹಾರ್ದಿಕ್​ ಪಾಂಡ್ಯ ತಮ್ಮ ಇನ್​ಸ್ಟಾಗ್ರಾಂದಲ್ಲಿ ಇದರ ಬಗ್ಗೆ ಬರೆದುಕೊಂಡಿದ್ದು, ನತಾಶಾ ಸ್ಟಾಂಕೋವಿಕ್‍ರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಜತೆಗೆ ಹೊಸ ವರ್ಷವನ್ನು ತಮ್ಮ ‘ಫೈರ್ ವರ್ಕ್’ನೊಂದಿಗೆ ಆರಂಭಿಸುತ್ತಿರುವುದಾಗಿ ಹೇಳಿದ್ದಾರೆ.

ಹಾರ್ದಿಕ್​ ಪಾಂಡ್ಯ ಪೋಟೋ ಶೇರ್​ ಮಾಡಿಕೊಳ್ಳುತ್ತಿದ್ದಂತೆ ಅವರ ಕುಟುಂಬ ಸದಸ್ಯರು ಸೇರಿದಂತೆ ಟೀಂ ಇಂಡಿಯಾದ ಅನೇಕ ಕ್ರಿಕೆಟರ್ಸ್​​ ಕಾಮೆಂಟ್​ ಮಾಡಿ, ಶುಭಾಶಯ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.