ETV Bharat / sports

ಫೀಲ್ಡಿಂಗ್​ಗೆ ಅಡಚಣೆ: ವಿಚಿತ್ರವಾಗಿ ವಿಕೆಟ್​ ಒಪ್ಪಿಸಿದ ಶ್ರೀಲಂಕಾದ ಗುಣತಿಲಕ್​

author img

By

Published : Mar 11, 2021, 8:10 PM IST

Gunathilaka
Gunathilaka

ಕ್ರಿಕೆಟ್​ ಇತಿಹಾಸದಲ್ಲಿ ಕೇವಲ 8 ಪ್ಲೇಯರ್ಸ್​ ಈ ರೀತಿಯಾಗಿ ವಿಕೆಟ್​ ಒಪ್ಪಿಸಿದ್ದು, ಆ ಪಟ್ಟಿಗೆ ಇದೀಗ ಶ್ರೀಲಂಕಾದ ಗುಣತಿಲಕ್​ ಸೇರ್ಪಡೆಯಾಗಿದ್ದಾರೆ.

ಆ್ಯಂಟಿಗೊ(ವೆಸ್ಟ್​​ ಇಂಡೀಸ್​): ವೆಸ್ಟ್​ ಇಂಡೀಸ್​​-ಶ್ರೀಲಂಕಾ ನಡುವೆ ನಡೆದ ಏಕದಿನ ಪಂದ್ಯದ ವೇಳೆ ಲಂಕಾ ಆರಂಭಿಕ ಆಟಗಾರ ದನುಷ್ಕ ಗುಣತಿಲಕ್​ ವಿಚಿತ್ರವಾಗಿ ವಿಕೆಟ್​ ಒಪ್ಪಿಸಿರುವ ಘಟನೆ ನಡೆದಿದೆ. ಈ ರೀತಿಯಾಗಿ ಔಟಾಗಿರುವ ವಿಶ್ವದ 8ನೇ ಪ್ಲೇಯರ್​ ಆಗಿದ್ದಾರೆ.

  • This doesn't happen often 😱

    Kieron Pollard feels that Danushka Gunathilaka was obstructing the field and appeals for his dismissal...

    The Sri Lankan's aren't happy 😤 pic.twitter.com/ODmn99elWR

    — Cricket on BT Sport (@btsportcricket) March 10, 2021 " class="align-text-top noRightClick twitterSection" data=" ">

ವೆಸ್ಟ್​ ಇಂಡೀಸ್​​ನ ಆ್ಯಂಟಿಗುವಾದಲ್ಲಿನ ಸರ್​​ ವಿವಿಯನ್​ ರಿಚರ್ಡ್ಸ್​ ಮೈದಾನದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ಶ್ರೀಲಂಕಾದ ಆರಂಭಿಕ ಆಟಗಾರ ದನುಷ್ಕ ಗುಣತಿಲಕ್​​ ಚೆಂಡನ್ನು ಉದ್ದೇಶಪೂರ್ವಕವಾಗಿ ಕಾಲಿನಿಂದ ದೂರ ತಳ್ಳಿದ್ದು, ಹೀಗಾಗಿ ಅಬ್​ಸ್ಟ್ರಕ್ಟಿಂಗ್​​ ದಿ ಫೀಲ್ಡ್​ ನಿಯಮದ ಪ್ರಕಾರ ವಿಕೆಟ್​ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಧವನ್​ಗಿಲ್ಲ ಅವಕಾಶ: ರೋಹಿತ್​ ಜೊತೆ ಟಿ-20 ಓಪನರ್ ಆಗಿ ಕನ್ನಡಿಗ ರಾಹುಲ್​!

52 ರನ್​ಗಳಿಕೆ ಮಾಡಿ ಬ್ಯಾಟ್ ಮಾಡ್ತಿದ್ದ ಗುಣತಿಲಕ್​, ಪೋಲಾರ್ಡ್​ ಓವರ್​ನಲ್ಲಿ ರಕ್ಷಣಾತ್ಮಕವಾಗಿ ಆಡಿ ರನ್​ ಕದಿಯಲು ಮುಂದೆ ಹೋಗಿದ್ದಾರೆ. ಈ ವೇಳೆ ನಾನ್​ಸ್ಟ್ರೈಕರ್​​ನಲ್ಲಿದ್ದ ನಿಸ್ಸಾಂಕ್ ಓಡಿ ಬಂದಿದ್ದಾರೆ. ಆದರೆ ಪೋಲಾರ್ಡ್​ ಚೆಂಡಿನತ್ತ ಬರುತ್ತಿರುವುದನ್ನ ಗಮನಿಸಿರುವ ಗುಣತಿಲಕ್​ ನಿಸ್ಸಾಂಕ್​ ಅವರನ್ನು ಹಿಂದಕ್ಕೆ ಕಳುಹಿಸಿ ಚೆಂಡನ್ನು ಕಾಲಿನಿಂದ ತುಳಿದಿದ್ದಾರೆ. ಹೀಗಾಗಿ ಅದು ಪೋಲಾರ್ಡ್​ ಕೈಗೆ ಸಿಕ್ಕಿಲ್ಲ. ಗುಣತಿಲಕ್​ ಉದ್ದೇಶಪೂರ್ವಕವಾಗಿ ಈ ರೀತಿಯಾಗಿ ಮಾಡಿದ್ದಾರೆಂದು ವೆಸ್ಟ್ ಇಂಡೀಸ್​ ಪ್ಲೇಯರ್ಸ್ ಅಂಪೈರ್​ ಬಳಿ ಮನವಿ ಸಲ್ಲಿಕೆ ಮಾಡಿದ್ದರಿಂದ ಸಮಾಲೋಚನೆ ನಡೆಸಿದ ಅಂಪೈರ್​ ಔಟ್ ತೀರ್ಪು ನೀಡಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿಯಾಗಿ ವಿಕೆಟ್ ಒಪ್ಪಿಸಿರುವುದು ಕೇವಲ 8 ಪ್ಲೇಯರ್ಸ್​. ಪಾಕಿಸ್ತಾನದ ರಮೀಜ್​ ರಾಜಾ, ಇಂಜಮಾಮ್​ ಉಲ್​ ಹಕ್​​, ಮೊಹಮ್ಮದ್​ ಹಫೀಜ್​, ಅನ್ವರ್​ ಅಲಿ, ಇಂಗ್ಲೆಂಡ್​ ಬೆನ್​​ಸ್ಟೋಕ್ಸ್​​ ಹಾಗೂ ಭಾರತದ ಮೊಹಿಂದರ್​​ ಅಮರನಾಥ್​ ಕೂಡ ಈ ರೀತಿ ವಿಕೆಟ್​ ಒಪ್ಪಿಸಿದ್ದಾರೆ. ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.