ETV Bharat / sports

ರೂಟ್ ಉರುಳಿಸಲು ರೂಪಿಸಿದ್ದ ಯೋಜನೆ ಬಹಿರಂಗಪಡಿಸಿದ ಸಿರಾಜ್

author img

By

Published : Mar 4, 2021, 8:31 PM IST

ಮೊಹಮ್ಮದ್ ಸಿರಾಜ್​
ಮೊಹಮ್ಮದ್ ಸಿರಾಜ್​

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡದ ಅನನುಭವಿ ಯುವ ಆಟಗಾರರನ್ನು ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಖೆಡ್ಡಾಕ್ಕೆ ಬೀಳಿಸಲು ಯಶಸ್ವಿಯಾದರೆ, ಯುವ ವೇಗಿ ಮೊಹಮ್ಮದ್ ಸಿರಾಜ್​ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮತ್ತು ಅನುಭವಿ ಬ್ಯಾಟ್ಸ್​ಮನ್​ ಜಾನಿ ಬೈರ್ಸ್ಟೋವ್​ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಅಹ್ಮದಾಬಾದ್​: ಫ್ಲ್ಯಾಟ್​​ ಪಿಚ್​ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಕೌಶಲ್ಯ ಹೊಂದಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿಕೆಟ್ ಪಡೆದಿರುವುದು ನನಗೆ ತೃಪ್ತಿ ತಂದಿದೆ ಎಂದು ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್​ ತಿಳಿಸಿದ್ದಾರೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡದ ಅನನುಭವಿ ಯುವ ಆಟಗಾರರನ್ನು ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಕೆಡ್ಡಾಕ್ಕೆ ಬೀಳಿಸಲು ಯಶಸ್ವಿಯಾದರೆ, ಯುವ ವೇಗಿ ಮೊಹಮ್ಮದ್ ಸಿರಾಜ್​ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮತ್ತು ಅನುಭವಿ ಬ್ಯಾಟ್ಸ್​ಮನ್​ ಜಾನಿ ಬೈರ್ಸ್ಟೋವ್​ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಮೊಹಮ್ಮದ್ ಸಿರಾಜ್​

"ನಾನು ರೂಟ್​ಗೆ ಬೌಲಿಂಗ್ ಮಾಡುವಾಗ ಹೆಚ್ಚಿನ ಎಸೆತಗಳನ್ನು ಹೊರ ಹಾಕಿ ನಂತರ ಕೆಲವು ಎಸೆತಗಳನ್ನು ಒಳಗೆ ಹಾಕಲು ಬಯಸಿದ್ದೆ. ನಂತರ ಹೊಸ ಓವರ್ ಪ್ರಾರಂಭಿಸಿದ ಸಮಯದಲ್ಲಿ ಇನ್​ಸ್ವಿಂಗ್ ಬೌಲಿಂಗ್ ಮಾಡಿದೆ. ನನ್ನ ಯೋಜನೆ ಫಲಿಸಿತು, ಯೋಜಿಸಿದಂತೆ ರೂಟ್ ವಿಕೆಟ್ ಪಡೆದೆ. ಅದು ನನಗೆ ಹೆಚ್ಚಿನ ತೃಪ್ತಿ ನೀಡಿದೆ" ಎಂದು ಸಿರಾಜ್ ರೂಟ್​ ವಿಕೆಟ್​ ಪಡೆಯಲು ರೂಪಿಸಿದ್ದ ಯೋಜನೆಯನ್ನು ಬಹಿರಂಗಗೊಳಿಸಿದ್ದಾರೆ.

ಇದೇ ರೀತಿ ಬೈರ್ಸ್ಟೋವ್​ ವಿಕೆಟ್​ ಪಡೆಯಲು ಅವರ ದೌರ್ಬಲ್ಯದ ಬಗ್ಗೆ ಹೋಮ್​ ವರ್ಕ್​ ಮಾಡಿದ್ದಾಗಿ ಸಿರಾಜ್​ ಹೇಳಿದ್ದಾರೆ. ಸಿರಾಜ್ ಇನ್​ ಕಟರ್​​ ಮೂಲಕ ಬೈರ್ಸ್ಟೋವ್​ರನ್ನು ಬೌಲ್ಡ್​ ಮಾಡಿದ್ದರು.

ಬೈರ್ಸ್ಟೋವ್​ಗೆ ನಾನು ಆರಂಭದಲ್ಲಿ ಹೆಚ್ಚಿನ ವೇಗದಲ್ಲಿ ಬೌಲಿಂಗ್​ ಮಾಡಿರಲಿಲ್ಲ. ಆದರೆ ಅವರ ಬ್ಯಾಟಿಂಗ್​ನ ಕೆಲವು ವಿಡಿಯೋಗಳನ್ನು ನೋಡಿದ ಮೇಲೆ ಇನ್​ಸ್ವಿಂಗ್​​ ಎಸೆತಗಳಿಗೆ ಔಟ್​ ಆಗಿರುವುದು ತಿಳಿಯಿತು. ಹಾಗಾಗಿ ಅವರಿಗೆ ಒಂದೇ ಏರಿಯಾದಲ್ಲಿ ಬೌಲಿಂಗ್ ಮಾಡಬೇಕೆಂದು ನಿರ್ಧರಿಸಿದ್ದು ಕೆಲಸ ಮಾಡಿತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನನ್ನನ್ನು ನಿಂದಿಸಿದ್ದಕ್ಕಾಗಿ ಸ್ಟೋಕ್ಸ್​ ಜೊತೆ ಕೊಹ್ಲಿ ವಾಗ್ವಾದಕ್ಕಿಳಿದರು: ಸಿರಾಜ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.