ETV Bharat / sports

ವೆಸ್ಟ್​ ಇಂಡೀಸ್​ ಮಣಿಸಿ 3ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದ ಇಂಗ್ಲೆಂಡ್​ ವನಿತೆಯರು

author img

By

Published : Mar 1, 2020, 5:29 PM IST

ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲುಕಂಡರೂ ನಂತರದ ಮೂರು ಪಂದ್ಯಗಳಲ್ಲೂ ಗೆಲ್ಲುವ ಮೂಲಕ ಇಂಗ್ಲೆಂಡ್​ ಸೆಮಿಫೈನಲ್​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

T20 world cup semi final
ವಿಶ್ವಕಪ್​ ಸೆಮಿಫೈನಲ್​

ಸಿಡ್ನಿ(ಆಸ್ಟ್ರೇಲಿಯಾ): ಕಳೆದ ಬಾರಿಯ ರನ್ನರ್ ಅಪ್​ ಇಂಗ್ಲೆಂಡ್​ ತಂಡ ವೆಸ್ಟ್​ ಇಂಡೀಸ್​ ತಂಡವನ್ನು 46 ರನ್​ಗಳಿಂದ ಮಣಿಸಿ ಸೆಮಿಫೈನಲ್​ ಪ್ರವೇಶಿಸಿದೆ.

ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡರೂ ನಂತರದ ಮೂರು ಪಂದ್ಯಗಳಲ್ಲೂ ಗೆಲ್ಲುವ ಮೂಲಕ ಇಂಗ್ಲೆಂಡ್​ ಸೆಮಿಫೈನಲ್​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಸಿಡ್ನಿಯಲ್ಲಿ ನಡೆದ ವಿಶ್ವಕಪ್​ನ 16ನೇ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್​ ನಡಾಲಿ ಸಿವರ್(57)​ ಅವರ ಅರ್ಧಶತಕ, ಡೇನಿಯಲ್​ ವೇಟ್​ 29, ಆ್ಯಮಿ ಜಾನ್ಸ್​ ಅವರ 23 ರನ್​ಗಳ ನೆರವಿನಿಂದ 143 ರನ್ ​ಗಳಿಸಿತು.

ವೆಸ್ಟ್​ ಇಂಡೀಸ್​ ಪರ ಗಮನಾರ್ಹ ಬೌಲಿಂಗ್​ ಪ್ರದರ್ಶನ ತೋರಿದ ಶಕಿರಾ ಸೆಲ್ಮನ್​, ಆಫಿ ಫ್ಲೆಚರ್​, ಅನಿಸಾ ಮೊಹಮ್ಮದ್​ ಹಾಗೂ ಸ್ಟೆಫನಿ ಟೇಲರ್​ ತಲಾ ಒಂದು ವಿಕೆಟ್​ ಪಡೆದರು.

ಇಂಗ್ಲೆಂಡ್​ ನೀಡಿದ 144 ರನ್​ಗಳಿಗೆ ಉತ್ತರವಾಗಿ ವೆಸ್ಟ್​ ಇಂಡೀಸ್​ ತಂಡ 97 ರನ್​ಗಳಿಗೆ ಆಲೌಟ್ ಆಗುವ ಮೂಲಕ 46 ರನ್​ಗಳ ಸೋಲು ಕಂಡು ವಿಶ್ವಕಪ್​ನಿಂದ ಹೊರಬಿದ್ದಿದೆ. ಲೀಯಾನ್ ಕಿರ್ಬಿ 20 ರನ್​ ಗಳಿಸಿದ್ದೇ ತಂಡದ ಗರಿಷ್ಠ ಮೊತ್ತವಾಯಿತು.

ಇಂಗ್ಲೆಂಡ್ ಸ್ಟಾರ್​ ಸ್ಪಿನ್ನರ್​ ಸೋಫಿಯಾ ಎಕ್ಲೆಸ್ಟೋನ್​ 3.1 ಓವರ್​ಗಳಲ್ಲಿ ಕೇವಲ 7 ರನ್​ಗಳಿಗೆ 3 ವಿಕೆಟ್​ ಪಡೆದು ಗೆಲುವಿನ ರೂವಾರಿಯಾದರು. ಸಾರಾ ಗ್ಲೆನ್​ 2 ವಿಕೆಟ್​ ಪಡೆದು ಸೋಫಿಯಾಗೆ ಸಾಥ್​ ನೀಡಿದ್ರು.

ಇಂಗ್ಲೆಂಡ್​ ತಂಡ ಈ ಗೆಲುವಿನೊಂದಿಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಂತರ ಸೆಮಿಫೈನಲ್ ಪ್ರವೇಶಿಸಿದ ಮೂರನೇ ತಂಡ ಎನಿಸಿಕೊಂಡಿದೆ.

ವಿಶ್ವಕಪ್​ ಸೆಮಿಫೈನಲ್​ ಪ್ರವೇಶಿಸಲು ಇನ್ನೊಂದು ತಂಡಕ್ಕೆ ಅವಕಾಶವಿದ್ದು, ಈ ಸ್ಥಾನಕ್ಕೆ ನ್ಯೂಜಿಲ್ಯಾಂಡ್​ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಈ ಎರಡೂ ತಂಡಗಳು ಸೆಣಸಾಡಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.