ETV Bharat / sports

ಕುಸಿದ ಹರಿಣಗಳಿಗೆ ಆಸರೆಯಾದ ಎಲ್ಗರ್ - ಪ್ಲೆಸಿಸ್...!

author img

By

Published : Oct 4, 2019, 12:30 PM IST

ಆರಂಭಿಕ ಆಟಗಾರ ಡೀನ್ ಎಲ್ಗರ್ ಹಾಗೂ ನಾಯಕ ಫಫ್​ ಡು ಪ್ಲೆಸಿಸ್ ಮುರಿಯದ ಐದನೇ ವಿಕೆಟ್​ಗೆ 92 ರನ್ ಜೊತೆಯಾಟ ನಡೆಸಿದ್ದಾರೆ.

ಕುಸಿದ ಹರಿಣಗಳಿಗೆ ಆಸರೆಯಾದ ಎಲ್ಗರ್-ಪ್ಲೆಸಿಸ್

ವಿಶಾಖಪಟ್ಟಣಂ: ಆರಂಭಿಕ ಕುಸಿತದ ಬಳಿಕ ಮೂರನೇ ದಿನದಾಟದಲ್ಲಿ ನಿಧಾನವಾಗಿ ರನ್ ಕಲೆ ಹಾಕುತ್ತಿರುವ ದಕ್ಷಿಣ ಆಫ್ರಿಕಾ ಭೋಜನ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ.

39 ರನ್ನಿಗೆ 3 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಮುಗಿಸಿದ್ದ ಪ್ರವಾಸಿ ತಂಡ ಇಂದಿನ ಆಟ ಜಾಗರೂಕತೆಯಿಂದ ರನ್ ಕಲೆ ಹಾಕಲು ಮುಂದಾಗಿದೆ. ನೈಟ್​ ವಾಚ್​ಮನ್​ ಆಗಿ ಬಂದಿದ್ದ ತೆಂಬ ಬವುಮಾ 18 ರನ್ ಗಳಿಸಿದ್ದಾಗ ಇಶಾಂತ್ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು.

ನಂತರದಲ್ಲಿ ಕ್ರೀಸ್​​​ಗೆ ಆಗಮಿಸಿದ ನಾಯಕ ಫಫ್​ ಡು ಪ್ಲೆಸಿಸ್ ಆರಂಭಿಕ ಆಟಗಾರ ಡೀನ್ ಎಲ್ಗರ್ ಜೊತೆಗೂಡಿ ರನ್ ಹೆಚ್ಚಿಸುತ್ತಾ ಸಾಗಿದರು. ಒಂದೆಡೆ ಎಲ್ಗರ್(76) ಅರ್ಧಶತಕ ಗಳಿಸಿ ಮುನ್ನುಗ್ಗಿದರೆ, ಪ್ಲೆಸಿಸ್(48) ಅರ್ಧಶತಕ ಸನಿಹ ಬಂದಿದ್ದಾರೆ.

  • SA 153/4 | 50 Overs

    Right! The second session is underway and the pair in the middle is waiting to have another go at it. The skipper is at the crease with Elgar, the partnership is on 90.

    Are you backing them to go on and get a big one? comment below 👇#ProteaFire #INDvsSA pic.twitter.com/2nKVrFpbx2

    — Cricket South Africa (@OfficialCSA) 4 October 2019 " class="align-text-top noRightClick twitterSection" data=" ">

ದಕ್ಷಿಣ ಆಫ್ರಿಕಾ ಇನ್ನೂ 349 ರನ್​ಗಳ ಹಿನ್ನಡೆಯಲ್ಲಿದ್ದು, ಕ್ರೀಸ್​ನಲ್ಲಿರುವ ಬ್ಯಾಟ್ಸ್​ಮನ್​ಗಳ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಆತಿಥೇಯರ ಪರ ಆರ್​​. ಅಶ್ವಿನ್ 2 ಹಾಗೂ ಜಡೇಜಾ, ಇಶಾಂತ್ ತಲಾ ಒಂದೊಂದು ವಿಕೆಟ್ ಕಿತ್ತಿದ್ದಾರೆ.

Intro:Body:



ವಿಶಾಖಪಟ್ಟಣಂ: ಆರಂಭಿಕ ಕುಸಿತದ ಬಳಿಕ ಮೂರನೇ ದಿನದಾಟದಲ್ಲಿ ನಿಧಾನವಾಗಿ ರನ್ ಕಲೆ ಹಾಕುತ್ತಿರುವ ದಕ್ಷಿಣ ಅಫ್ರಿಕಾ ಭೋಜನ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ.



39 ರನ್ನಿಗೆ 3 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಮುಗಿಸಿದ್ದ ಪ್ರವಾಸಿ ತಂಡ ಇಂದಿನ ಅಟ ಜಾಗರೂಕತೆಯಿಂದ ರನ್ ಕಲೆ ಹಾಕಲು ಮುಂದಾಗಿದೆ. ನೈಟ್​ ವಾಚ್​ಮನ್​ ಆಗಿ ಬಂದಿದ್ದ ತೆಂಬ ಬವುಮಾ 18 ರನ್ ಗಳಿಸಿದ್ದಾಗ ಇಶಾಂತ್ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. 



ನಂತರದಲ್ಲಿ ಕ್ರೀಸಿಗೆ ಆಗಮಿಸಿದ ನಾಯಕ ಫಫ್​ ಡು ಪ್ಲೆಸಿಸ್ ಆರಂಭಿಕ ಆಟಗಾರ ಡೀನ್ ಎಲ್ಗರ್ ಜೊತೆಗೂಡಿ ರನ್ ಹೆಚ್ಚಿಸುತ್ತಾ ಸಾಗಿದರು. ಒಂದೆಡೆ ಎಲ್ಗರ್(76) ಅರ್ಧಶತಕ ಗಳಿಸಿ ಮುನ್ನುಗ್ಗಿದರೆ, ಪ್ಲೆಸಿಸ್(48) ಅರ್ಧಶತಕ ಸನಿಹ ಬಂದಿದ್ದಾರೆ.



ದಕ್ಷಿಣ ಆಫ್ರಿಕಾ ಇನ್ನೂ 349 ರನ್​ಗಳ ಹಿನ್ನಡೆಯಲ್ಲಿದ್ದು, ಕ್ರೀಸ್​ನಲ್ಲಿರುವ ಬ್ಯಾಟ್ಸ್​ಮನ್​ಗಳ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಆತಿಥೇಯರ ಪರ ಆರ್​​. ಅಶ್ವಿನ್ 2 ಹಾಗೂ ಜಡೇಜಾ, ಇಶಾಂತ್ ತಲಾ ಒಂದೊಂದು ವಿಕೆಟ್ ಕಿತ್ತಿದ್ದಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.