ETV Bharat / sports

ಆಂಗ್ಲರ ನೆಲದಲ್ಲಿ ಅಬ್ಬರದ ಬ್ಯಾಟಿಂಗ್​ ಪ್ರದರ್ಶನ.. 131 ಎಸೆತಗಳಲ್ಲಿ ಭರ್ಜರಿ 176 ರನ್‌ ಸಿಡಿಸಿದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್

author img

By

Published : Aug 15, 2022, 2:10 PM IST

ಟೀಂ ಇಂಡಿಯಾದ ಅನುಭವಿ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ್ ಪೂಜಾರ, ಕೌಂಟಿ ಕ್ರಿಕೆಟ್‌ನಲ್ಲಿ ರನ್‌ ಹೊಳೆ ಹರಿಸುವುದನ್ನು ಮುಂದುವರಿಸಿದ್ದಾರೆ. ಈ ಮೂಲಕ ತಾವು ಟೆಸ್ಟ್ ಮಾದರಿಗೆ ಮಾತ್ರ ಫಿಟ್ ಅಲ್ಲ, ಅಂತಾರಾಷ್ಟ್ರೀಯ ಎಲ್ಲ ಮಟ್ಟದಲ್ಲಿಯೂ ಫಿಟ್​ ಆ್ಯಂಡ್​ ಫೈನ್​ ಎಂಬುವುದನ್ನು ಸಾಬೀತು ಮಾಡಿದ್ದಾರೆ.

Cheteshwar Pujara Scores 174 Off 131 Balls In Royal London One Day Cup
ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ್

ಇಂಗ್ಲೆಂಡ್: ಆಂಗ್ಲರ ನೆಲದಲ್ಲಿ ತಮ್ಮ ಅದ್ಭುತ ಲಯವನ್ನು ಕಾಯ್ದುಕೊಂಡಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಇದೀಗ ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಶತಕ ಬಾರಿಸಿದ್ದಾರೆ. ಕೌಂಟಿ ಕ್ರಿಕೆಟ್‌ನ ರಾಯಲ್‌ ಲಂಡನ್‌ ಒನ್‌-ಡೇ ಕಪ್‌ ಟೂರ್ನಿಯಲ್ಲಿ ಸಸೆಕ್ಸ್‌ ತಂಡವನ್ನು ಮುನ್ನಡೆಸುತ್ತಿರುವ ಅವರು, ಭಾನುವಾರ ನಡೆದ ಪಂದ್ಯದಲ್ಲಿ ಕೇವಲ 131 ಎಸೆತಗಳಲ್ಲಿ ಭರ್ಜರಿ 176 ರನ್‌ ಸಿಡಿಸಿದ್ದಾರೆ.

ತಂಡದ ನಾಯಕ ಟಾಮ್ ಹೈನ್ಸ್‌ ಅನುಪಸ್ಥಿತಿಯಲ್ಲಿ ಸಸೆಕ್ಸ್ ತಂಡವನ್ನ ಮುನ್ನಡೆಸುತ್ತಿರುವ ಚೇತೇಶ್ವರ ಪೂಜಾರ, ತಂಡದ ಸ್ಕೋರ್ 3.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 9 ರನ್ ಕಲೆಹಾಕಿತ್ತು. ಈ ವೇಳೆ ಅವರು ಕ್ರೀಸ್‌ಗಿಳಿದರು. ಸರ್ರೆ ತಂಡ ನೀಡಿದ ಆರಂಭಿಕ ಆಘಾತದಿಂದ ತಂಡಕ್ಕೆ ನೆರವಾದ ಅವರು 3ನೇ ವಿಕೆಟ್‌ಗೆ ಟಾಮ್ ಕ್ಲಾರ್ಕ್ ಜೊತೆಗೂಡಿ ಭರ್ಜರಿ ರನ್​ ಗಳಿಸಿದರು.

ಟಾಮ್ ಜೊತೆಗೆ 205ರನ್‌ಗಳ ಅಮೋಘ ಜೊತೆಯಾಟವಾಡಿದ ಪೂಜಾರ 103 ಎಸೆತಗಳಲ್ಲಿ ಶತಕ ದಾಖಲಿಸುವ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಶತಕ ದಾಖಲಿಸಿದರು. ಉತ್ತಮ ಸಾಥ್ ನೀಡಿದ್ದ ಟಾಮ್ 104 ರನ್‌ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕವೂ ಅವರು ಭರ್ಜರಿ ಆಟ ಮುಂದುವರಿಸಿದರು.

ಕೇವಲ 28 ಎಸೆತಗಳಲ್ಲಿ 74 ರನ್ ಚಚ್ಚಿದ ಚೇತೇಶ್ವರ್ ಪೂಜಾರ 131 ಎಸೆತಗಳಲ್ಲಿ 171 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ದಾರೆ. ಇವರ ಅದ್ಭುತ ಇನ್ನಿಂಗ್ಸ್‌ 48 ಓವರ್‌ನಲ್ಲಿ ಕೊನೆಗೊಂಡಿತು. ಚೇತೇಶ್ವರ್ ಪೂಜಾರ ಅವರ ಅದ್ಭುತ ಆಟದಲ್ಲಿ 20 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಸಹ ಒಳಗೊಂಡಿದ್ದವು.

ಚೇತೇಶ್ವರ್ ಪೂಜಾರ ಅಮೋಘ ಆಟದಿಂದಾಗಿ ಸಸೆಕ್ಸ್‌ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 378ರನ್‌ಗಳ ಬೃಹತ್ ಮೊತ್ತಕಲೆಹಾಕಿತು. ಸರ್ರೆ ಪರ ಕಾನರ್ ಮೆಕೆರ್ ಎರಡು ವಿಕೆಟ್ ಪಡೆದ್ರೆ, ಟಾಮ್ ಲಾವ್ಸ್, ಮ್ಯಾಟ್ ಡನ್, ಅಮರ್ ವಿರ್ಡಿ ಮತ್ತು ಯೂಸೆಫ್ ಮಜಿದ್ ತಲಾ ಒಂದು ವಿಕೆಟ್ ಪಡೆದರು.

ಇನ್ನು ಪೂಜಾರ ತಮ್ಮ ಈ ಶತಕದೊಂದಿಗೆ ಟೂರ್ನಿಯಲ್ಲಿ ಆಡಿದ 5 ಇನಿಂಗ್ಸ್‌ಗಳಿಂದ ಒಟ್ಟು 367 ರನ್‌ ಬಾರಿಸುವ ಮೂಲಕ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಆ. 12ರಂದು ನಡೆದ ಪಂದ್ಯದಲ್ಲೂ ಮಿಂಚಿದ್ದ ಪೂಜಾರ, 79 ಎಸೆತಗಳಲ್ಲಿ 107 ರನ್ ಕಲೆಹಾಕಿದ್ದರು. ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 2 ಅಮೋಘ ಸಿಕ್ಸರ್ ಸಿಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.