ETV Bharat / sports

ಅಕ್ಷರ್​ ಆಲ್​ರೌಂಡರ್​ ಆಟ ಭಾರತಕ್ಕೆ ಭರವಸೆ: ಏಳನೇ ವಿಕೆಟ್​ಗೂ ಪಟೇಲ್​ ಬ್ಯಾಟಿಂಗ್​ ಬಲ

author img

By

Published : Mar 15, 2023, 8:20 PM IST

ಬಾರ್ಡರ್​ ಗವಾಸ್ಕರ್​ ಟ್ರೋಫಿ ಮತ್ತು ಬಾಂಗ್ಲಾದೇಶ ಸರಣಿಯಲ್ಲಿ ಅಕ್ಷರ್​ ಪಟೇಲ್​ ಉತ್ತಮ ಆಲ್​ರೌಂಡರ್​ ಸ್ಥಾನ ನಿಬಾಯಿಸಿದ್ದು, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಭರವಸೆಯ ಬೌಲರ್​ ಆಗಿದ್ದಾರೆ.

Axar Patel batting Skills Improved Team India
ಅಕ್ಷರ್​ ಆಲ್​ರೌಂಡರ್​ ಆಟ ಭಾರತಕ್ಕೆ ಭರವಸೆ

ನವದೆಹಲಿ: ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾಗುತ್ತಿರಬಹುದು, ಆದರೆ ಆಲ್​ರೌಂಡರ್​ಗಳು ಕಳೆದ ಹಲವು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಉತ್ತಮ ಬ್ಯಾಟಿಂಗ್​ ಪ್ರದರ್ಶನ ಮಾಡಿದ್ದಾರೆ. ಬಹುಶಃ ಅದಕ್ಕಾಗಿಯೇ ಬ್ಯಾಟಿಂಗ್‌ನಿಂದಾಗಿ ಕೆಲವು ಬ್ಯಾಕ್ ಆರ್ಡರ್ ಬೌಲರ್‌ಗಳು ತಂಡದಲ್ಲಿ ಉಳಿಯಲು ಅವಕಾಶವನ್ನು ಪಡೆಯುತ್ತಿದ್ದಾರೆ.

Axar Patel batting Skills Improved Team India
ಏಳನೇ ವಿಕೆಟ್​ಗೂ ಪಟೇಲ್​ ಬ್ಯಾಟಿಂಗ್​ ಬಲ

ಬೌಲಿಂಗ್​ ವಿಭಾಗದ ಆಲ್​ರೌಂಡರ್​ಗಳು ಹೆಚ್ಚು ತಂಡಕ್ಕೆ ಸಹಕಾರಿಯಾಗುತ್ತಾರೆ. ಹೀಗಾಗಿ ತಂಡದಲ್ಲಿ ಅಕ್ಷರ್​, ಅಶ್ವಿನ್​​ ಮತ್ತು ಜಡೇಜಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇದರಿಂದ 8ನೇ ವಿಕೆಟ್​ ವರಗೂ ಬ್ಯಾಟಿಂಗ್ ಬಲ ತಂಡಕ್ಕೆ ಇರುತ್ತದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡಗಳು ಎಂಟು ಹಾಗೂ ಒಂಬತ್ತನೇ ವಿಕೆಟ್​ ವರೆಗೆ ಬ್ಯಾಟಿಂಗ್​ ಆಸರೆ ಇಟ್ಟುಕೊಂಡಿರುವುದು ಚಾಂಪಿಯನ್​ ಆಟಕ್ಕೆ ಕಾರಣ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತದೆ.

Axar Patel batting Skills Improved Team India
ಟೆಸ್ಟ್​ ಚಾಂಪಿಯನ್​ಶಿಪ್ ಬ್ಯಾಟಿಂಗ್​ ಪಟ್ಟಿ

ಕಳೆದ ಕೆಲವು ತಿಂಗಳುಗಳಿಂದ ಅಕ್ಷರ್ ಪಟೇಲ್ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಬೆಂಬಲಿಸುತ್ತಿರುವ ರೀತಿ, ತಂಡದಲ್ಲಿ ಅವರ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತಿದೆ. ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಅಕ್ಷರ್​ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದು ಅವರು ಹೆಚ್ಚು ತಂಡದಲ್ಲಿ ಉಳಿದು ಕೊಳ್ಳಲು ಸಹಕಾರ ಮಾಡುತ್ತಿದೆ. ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲೂ ಅಕ್ಷರ್​ ಸ್ಥಾನ ಗಳಿಸುವ ಸಾಧ್ಯತೆ ಇದೆ.

ಭಾರತದ ಸ್ಪಿನ್ ಬೌಲರ್ ಆಗಿ ತಂಡಕ್ಕೆ ಸೇರ್ಪಡೆಗೊಂಡಿರುವ ಅಕ್ಷರ್ ಅವರನ್ನು ಬಲಿಷ್ಠ ಆಲ್ ರೌಂಡರ್ ಎಂದು ಕರೆಯಲಾಗುತ್ತಿದೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ - ಗವಾಸ್ಕರ್ ಟ್ರೋಫಿಯಲ್ಲಿ ಮತ್ತು ಅದಕ್ಕೂ ಮೊದಲು ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅಕ್ಷರ್ ಪಟೇಲ್ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ತಂಡಕ್ಕೆ ಉತ್ತಮ ಆಸರೆಯಾಗಿತ್ತು.

ಬಲಿಷ್ಠ ಆಲ್ ರೌಂಡರ್ ಆಗಿ ಹೊರಹೊಮ್ಮಿರುವ ಪಟೇಲ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಪಟೇಲ್ 88.00 ಸರಾಸರಿಯಲ್ಲಿ 266 ರನ್ ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ನಾಗ್ಪುರ ಮತ್ತು ನವದೆಹಲಿಯಲ್ಲಿ ಭಾರತದ ವಿಜಯಗಳಲ್ಲಿ ಅಕ್ಷರ್ ಪಟೇಲ್ ನಿರ್ಣಾಯಕ ಅರ್ಧಶತಕಗಳನ್ನು ಗಳಿಸಿದ್ದರು. ಇಂದೋರ್‌ನಲ್ಲಿ ಅವರು ತಂಡಕ್ಕಾಗಿ ಹೋರಾಡಿ, ಎರಡೂ ಇನ್ನಿಂಗ್ಸ್‌ಗಳಲ್ಲಿ ಅಜೇಯರಾಗಿ ಉಳಿದರು.

ಕೊನೆಯ ಟೆಸ್ಟ್​​ ಮ್ಯಾಚ್​ನಲ್ಲಿ ಅಕ್ಷರ್​ ವಿರಾಟ್​ ಜೊತೆಗೂಡಿ ದಾಖಲೆಯ ಜೊತೆಯಾಟ ಮಾಡಿದರು. ವಿರಾಟ್​ ಮತ್ತು ಅಕ್ಷರ್ ಪಟೇಲ್​ ಏಳನೇ ವಿಕೆಟ್​ಗೆ 162 ರನ್​ ಜೊತೆಯಾಟ ಮಾಡಿದರು. ಇದು ಭಾರತದ ಪರ ಏಳನೇ ವಿಕೆಟ್​ ಬೃಹತ್​ ಜೊತೆಯಾಟವಾಗಿದೆ. ಅಕ್ಷರ್​ ಈ ಪಂದ್ಯದಲ್ಲಿ 79 ರನ್​ ಗಳಿಸಿದ್ದರು. ಅಲ್ಲದೇ ಈ ಇನ್ನಿಂಗ್ಸ್​ 113 ಬಾಲ್​ನಿಂದ ಬಂದಿತ್ತು ಮತ್ತು ಇದರಲ್ಲಿ 4 ಸಿಕ್ಸ್​ ಮತ್ತು 5 ಬೌಂಡರಿಗಳಿದ್ದವು.

ಇನ್ನೊಂದು ಅಂಕಿ ಅಂಶವನ್ನು ಗಮನಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಇತ್ತೀಚಿನ ಅಂಕಿ-ಅಂಶಗಳಲ್ಲಿ ಅವರು ಭಾರತ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳಿಗಿಂತ ಮುಂದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಬ್ಯಾಟಿಂಗ್ ಸರಾಸರಿಯಲ್ಲಿ ಅವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗಿಂತ ಬಹಳ ಮುಂದಿದ್ದಾರೆ. 45.80 ಸರಾಸರಿಯಲ್ಲಿ ರನ್ ಗಳಿಸುತ್ತಿದ್ದಾರೆ.

ಇದನ್ನೂ ಓದಿ: ಟೆಸ್ಟ್​ ಚಾಂಪಿಯನ್​ಶಿಪ್​ ಕೊಹ್ಲಿ​ ಶತಕ ಭರವಸೆ: ಆಸಿಸ್​ ಮೇಲೆ "ವಿರಾಟ" ದಾಖಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.