ETV Bharat / sports

Asia Cup 2023: ಏಷ್ಯಾ ಕಪ್​ಗೆ ಮರಳುವರೇ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್?

author img

By

Published : Jun 16, 2023, 4:14 PM IST

ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಯುವ ಆಟಗಾರರು ಗಾಯಕ್ಕೆ ತುತ್ತಾಗಿದ್ದು ಎಂದು ತಂಡಕ್ಕೆ ಮರಳುತ್ತಾರಾ ಎಂಬುದೇ ಸದ್ಯದ ಪ್ರಶ್ನೆ. ಜಸ್ಪ್ರೀತ್ ಬುಮ್ರಾ, ಶ್ರೇಯಸ್​ ಅಯ್ಯರ್​, ಕೆ.ಎಲ್.​ ರಾಹುಲ್ ಮತ್ತು ರಿಷಬ್​ ಪಂತ್​ ತಂಡಕ್ಕೆ ಯಾವಾಗ ಸೇರಿಕೊಳ್ಳುತ್ತಾರೆ ಎಂದು ಕ್ರಿಕೆಟ್​ ಅಭಿಮಾನಿಗಳು ಕೇಳುತ್ತಿದ್ದಾರೆ.

Jasprit Bumrah Shreyas Iyer may return for Asia Cup
Asia Cup 2023: ಏಷ್ಯಾ ಕಪ್​ಗೆ ಮರಳುತ್ತಾರಾ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್!

ಭಾರತ ಸ್ಟಾರ್​ ವೇಗಿ ಜಸ್ಪ್ರೀತ್ ಬುಮ್ರಾ ಟೀಂ​ ಇಂಡಿಯಾದ ಜರ್ಸಿ ತೊಟ್ಟು ಕಣಕ್ಕಿಳಿಯದೇ ಸುಮಾರು 8 ತಿಂಗಳುಗಳೇ ಕಳೆಯಿತು. ಮಹತ್ವದ ಪಂದ್ಯಗಳಿಂದ ದೂರ ಉಳಿದಿದ್ದು ಇನ್ನೂ ಚೇತರಿಸಿಕೊಂಡಿಲ್ಲವೇ ಎಂಬುದು ಎಲ್ಲರ ಪ್ರಶ್ನೆ. ಐಪಿಎಲ್​ ವೇಳೆ ತಂಡದೊಂದಿಗೆ ಕಾಣಿಸಿಕೊಂಡಿದ್ದ ಬುಮ್ರಾ ಫಿಟ್​ನೆಸ್​ ಬಗ್ಗೆ ಪ್ರಶ್ನೆಗಳಿವೆ.

ಭಾರತಕ್ಕೆ ಆಸ್ಟ್ರೇಲಿಯಾ ತಂಡ ಸೆಪ್ಟೆಂಬರ್​ನಲ್ಲಿ ಪ್ರವಾಸ ಕೈಗೊಂಡಿದ್ದಾಗ ಬುಮ್ರಾ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡದ್ದೇ ಕೊನೆ. ಅದಕ್ಕೂ ಮುನ್ನವೇ ಗಾಯದಿಂದಾಗಿ ತಂಡದಿಂದ ಜಸ್ಪ್ರೀತ್ ಬುಮ್ರಾ​ ಹೊರಗುಳಿದಿದ್ದರು. 2022ರ ಏಷ್ಯಾಕಪ್​ನಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ಈಗ ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಆಯ್ಕೆ ಆಗುತ್ತಾರಾ ಅಥವಾ ನೇರವಾಗಿ ಹೈಬ್ರಿಡ್​ ಮಾದರಿಯ ಏಷ್ಯಾ ಕಪ್​ಗೆ ಆಯ್ಕೆ ಆಗುತ್ತಾರಾ ಎಂಬುದನ್ನು ಕಾದುನೋಡಬೇಕು.

ಬುಮ್ರಾ ಅವರ ಫಿಟ್​ನೆಸ್​​ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಹಾಗೆಯೇ ಅವರು ಇತರೆ ಎಲ್ಲಿಯೂ ತಂಡದಲ್ಲಿ ಗುರುತಿಸಿಕೊಂಡಿಲ್ಲ. 2023ರ ಐಪಿಎಲ್​, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ್ನು ಮಿಸ್​ ಮಾಡಿಕೊಂಡಿದ್ದಾರೆ. ಹೀಗಿರುವಾಗ ನೇರ ಏಷ್ಯಾ ಕಪ್​ಗೆ ಬೂಮ್ರಾ ಅವರನ್ನು ಇಳಿಸುವ ಮುನ್ನ ವೆಸ್ಟ್ ಇಂಡೀಸ್​ ಪ್ರವಾಸದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

ಬಾರ್ಡರ್​- ಗವಾಸ್ಕರ್​ ಟ್ರೋಫಿಯಲ್ಲಿ ಅಯ್ಯರ್​ಗೆ ಗಾಯ: ಆಸ್ಟ್ರೇಲಿಯಾ ಭಾರತದ ನಡುವಿನ ಟೆಸ್ಟ್​ ಸರಣಿಯ ಎರಡನೇ ಪಂದ್ಯದ ವೇಳೆ ಜಿಮ್​ನಲ್ಲಿ ಕಸರತ್ತು ಮಾಡುವಾಗ ಅಯ್ಯರ್​ ಗಾಯಕ್ಕೆ ತುತ್ತಾದರು. ನಂತರ ಅವರು ಇಂಗ್ಲೆಂಡ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲೂ ಅಭ್ಯಾಸಕ್ಕೆ ಮರಳಿದ್ದರು.

ಅಯ್ಯರ್​ ಗಾಯಗೊಂಡ ಕಾರಣ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ​ ಮಧ್ಯಮ ಕ್ರಮಾಂಕಕ್ಕೆ ಅನುಭವಿ ಅಜಿಂಕ್ಯ ರಹಾನೆಯನ್ನು ಆಡಿಸಲಾಗಿತ್ತು. 2023ರ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಅವರು ಆಡಲಾಗದ ಕಾರಣ ಕೆಕೆಆರ್​ನ ನಾಯಕತ್ವವನ್ನು ನಿತೀಶ್​ ರಾಣಾಗೆ ನೀಡಲಾಗಿತ್ತು. ಬಾರ್ಡರ್​- ಗವಾಸ್ಕರ್​ ಟ್ರೋಫಿಯಲ್ಲಿ ಅಯ್ಯರ್​ ಜಾಗದಲ್ಲಿ ಸೂರ್ಯ ಕುಮಾರ್​ ಯಾದವ್​ ಟೆಸ್ಟ್​ಗೆ ಪದಾರ್ಪಣೆ ಮಾಡಿದ್ದರು.

ಅಪಘಾತಕ್ಕೊಳಗಾದ ಪಂತ್​ ಮುಂದಿನ ವರ್ಷ ಮರಳುವ ನಿರೀಕ್ಷೆ: ವಿಕೆಟ್​ ಕೀಪರ್ ಕಮ್​ ಹೊಡಿಬಡಿ ಆಟಗಾರ ಪಂತ್​ ಮುಂದಿನ ವರ್ಷದ ವೇಳೆ ಸಂಪೂರ್ಣ ಫೀಟ್​ ಆಗಿ ತಂಡಕ್ಕೆ ಸೇರುವ ಸಾಧ್ಯತೆ ಇದೆ. ಗಾಯದಿಂದ ಸಂಪೂರ್ಣ ಗುಣಮುಖರಾಗಿರುವ ಅವರು ಎನ್​ಸಿಎಯಲ್ಲಿ ಫಿಟ್​​ಆಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಟ್ಟು ತಯಾರಾಗುತ್ತಿರುವ ಬಗ್ಗೆ ಅಪ್​ಡೇಟ್​ ನೀಡುತ್ತಿರುತ್ತಾರೆ.

ಐಪಿಎಲ್​ನಲ್ಲಿ ಗಾಯಗೊಂಡ ರಾಹುಲ್​: ಮೇ 1ರಂದು ಆರ್​ಸಿಬಿ ಮತ್ತು ಲಕ್ನೋ ಪಂದ್ಯದಲ್ಲಿ ಕೆ.ಎಲ್​. ರಾಹುಲ್​ ಗಾಯಕ್ಕೆ ತುತ್ತಾಗಿ ನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಈಗ ಎನ್​ಸಿಎಯಲ್ಲಿದ್ದಾರೆ. ಆದಷ್ಟೂ ಬೇಗ ರಾಹುಲ್​ ಫಿಟ್​ ಆಗಿಲಿದ್ದು, ಏಷ್ಯಾಕಪ್​ ವೇಳೆಗೆ ತಂಡ ಸೇರುವ ನಿರೀಕ್ಷೆಯೂ ಇದೆ.

ಇದನ್ನೂ ಓದಿ: Asia Cup 2023: ಆಗಸ್ಟ್ 31ರಿಂದ ಹೈಬ್ರಿಡ್ ಮಾದರಿ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿ; ಪಾಕ್​ನಲ್ಲಿ 4, ಲಂಕಾದಲ್ಲಿ 9 ಪಂದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.