ETV Bharat / sports

Asia Cup 2023: ಆಗಸ್ಟ್ 31ರಿಂದ ಹೈಬ್ರಿಡ್ ಮಾದರಿ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿ; ಪಾಕ್​ನಲ್ಲಿ 4, ಲಂಕಾದಲ್ಲಿ 9 ಪಂದ್ಯ

author img

By

Published : Jun 15, 2023, 4:28 PM IST

Updated : Jun 15, 2023, 5:14 PM IST

ಹೈಬ್ರಿಡ್ ಮಾದರಿಯಲ್ಲಿ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಮಂಡಳಿ ಘೋಷಿಸಿದೆ.

Asia Cup 2023
ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿ

ನವದೆಹಲಿ: ಸಾಕಷ್ಟು ಕುತೂಹಲ ಕೆರಳಿಸಿದ್ದ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿಗೆ ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ಅಂತಿಮವಾಗಿ ಇಂದು ದಿನಾಂಕ ನಿಗದಿ ಮಾಡಿದೆ. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದೆ. ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳು ನಡೆಯಲಿದ್ದು, ಉಳಿದ ಒಂಬತ್ತು ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಾಗುತ್ತದೆ ಎಂದು ಪ್ರಕಟಿಸಿದೆ.

ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಏಷ್ಯಾ ಕಪ್​ ನಡೆಯಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳದ ತಂಡಗಳ ನಡುವೆ ಒಟ್ಟು 13 ಏಕದಿನ ಪಂದ್ಯಗಳು ಜರುಗಲಿವೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು, ಟೂರ್ನಿಯು ಎರಡು ಗುಂಪುಗಳನ್ನು ಒಳಗೊಂಡಿರುತ್ತದೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ ಫೋರ್ ಹಂತದಿಂದ ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ ಎಂದು ತಿಳಿಸಿದೆ. ಆದರೆ, ಪಂದ್ಯಗಳು ನಡೆಯುವ ಸ್ಥಳಗಳು ಮತ್ತು ದಿನಾಂಕಗಳನ್ನು ಎಸಿಸಿ ಇನ್ನೂ ಬಹಿರಂಗಪಡಿಸಿಲ್ಲ.

  • Dates and venues have been finalised for the Asia Cup 2023! The tournament will be held from 31st August to 17th September in a hybrid model - with 4 matches being held in Pakistan and the rest in Sri Lanka! https://t.co/bvkfSSAp9w#AsiaCup #ACC

    — AsianCricketCouncil (@ACCMedia1) June 15, 2023 " class="align-text-top noRightClick twitterSection" data=" ">

ಪಾಕ್​ಗೆ ನಿರಾಸೆ?: 50 ಓವರ್​ಗಳ ಮಾದರಿಯ ಏಷ್ಯಾ ಕಪ್​ ಸಂಪೂರ್ಣ ಟೂರ್ನಿಯು ಈ ಬಾರಿ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ, ಭದ್ರತಾ ಕಾರಣದಿಂದಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದಿಲ್ಲ. ಬರಬೇಕಾದರೆ ಕೇಂದ್ರ ಸರ್ಕಾರದ ಅನುಮತಿಬೇಕೆಂದು ಹೇಳಿ ನಿರಾಕರಿಸಿತ್ತು. ಇದರಿಂದ ಕಂಗೆಟ್ಟಿದ್ದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ತನ್ನ ನೆಲದಲ್ಲೇ ಟೂರ್ನಿಯ ಪಂದ್ಯಗಳು ನಡೆಯಬೇಕೆಂದು ಹೇಳಿ ಹೈಬ್ರಿಡ್ ಮಾದರಿ ಪ್ರಸ್ತಾವವನ್ನು ಮಂಡಿಸಿತ್ತು. ಅಂದರೆ, ಭಾರತ ಆಡಲಿರುವ ಆಡಲಿರುವ ಪಂದ್ಯಗಳನ್ನು ಬೇರೆಡೆ ಸ್ಥಳಾಂತರ ಮಾಡಿ, ಉಳಿದ ಪಂದ್ಯಗಳನ್ನು ತನ್ನಲ್ಲೇ ನಡೆಸಲು ಕೋರಿತ್ತು.

ಆದರೆ, ಸದ್ಯದ ಏಷ್ಯನ್ ಕ್ರಿಕೆಟ್ ಮಂಡಳಿಯ ಪ್ರಕಟಣೆ ಪ್ರಕಾರ, ಒಟ್ಟಾರೆ ಟೂರ್ನಿಯ 13 ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳು ಮಾತ್ರ ಪಾಕಿಸ್ತಾನದಲ್ಲಿ ನಡೆಯಲಿವೆ. ಉಳಿದಂತೆ ಒಂಭತ್ತು ಪಂದ್ಯಗಳು ಶ್ರೀಲಂಕಾದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಬಹುಪಾಲು ಟೂರ್ನಿಯ ಪಾಕಿಸ್ತಾನದಿಂದ ಹೊರಗಡೆಯೇ ನಡೆಯಲಿದೆ. ಹೀಗಾಗಿ ತಾನೇ ಮಂಡಿಸಿದ್ದ ಹೈಬ್ರಿಡ್ ಮಾದರಿಯಿಂದ ಪಾಕಿಸ್ತಾನ ಕ್ರಿಕೆಟ್​ ಮಂಡಳಿಗೆ ನಿರಾಸೆ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಈ ಹಿಂದೆ ಇದೇ ವಿಚಾರಕ್ಕೆ ಮಾತನಾಡಿದ್ದ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ನಜಮ್ ಸೇಥಿ, ಏಷ್ಯಾ ಕಪ್​ ಟೂರ್ನಿಯಲ್ಲಿ ತಮ್ಮ ತಂಡವು ಆಡಲು ನಿರಾಕರಿಸಿದರೆ ನಮಗೆ ಸುಮಾರು ಮೂರು ಮಿಲಿಯನ್ ಡಾಲರ್​ನಷ್ಟು ಆದಾಯ ನಷ್ಟ ಉಂಟಾಗಲಿದೆ. ಏಷ್ಯಾ ಕಪ್‌ನ ಆತಿಥ್ಯ ಹಕ್ಕುಗಳ ವಿಚಾರಕ್ಕೆ ಬಂದರೆ ಪಾಕಿಸ್ತಾನವು ಈ ನಷ್ಟ ಭರಿಸಲು ಸಿದ್ಧವಿದೆ ಎಂದೂ ಹೇಳಿದ್ದರು. ಅಲ್ಲದೇ, ಭಾರತವು ತನ್ನ ಪಂದ್ಯಗಳನ್ನು ದೇಶದ ಹೊರಗಿನ ಸ್ಥಳದಲ್ಲಿ ಆಡಲಿ. ಪಾಕಿಸ್ತಾನವು ಉಳಿದ ಪಂದ್ಯಗಳನ್ನು ತವರಿನಲ್ಲಿ ಆಯೋಜಿಸುತ್ತದೆ. ಇದರ ಹೊರತಾಗಿ ನಾವು ಬೇರೆ ಯಾವುದೇ ವೇಳಾಪಟ್ಟಿಯನ್ನು ಸ್ವೀಕರಿಸುವುದಿಲ್ಲ ಮತ್ತು ಆಡುವುದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: jioCinema: ಭಾರತ-ವೆಸ್ಟ್​ ಇಂಡೀಸ್​ ಕ್ರಿಕೆಟ್ ಸರಣಿ ಜಿಯೊಸಿನೆಮಾದಲ್ಲಿ ನೇರ ಪ್ರಸಾರ

Last Updated : Jun 15, 2023, 5:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.