ETV Bharat / sports

ನಾಯಕನಿಗೆ ಯಾವಾಗಲೂ ಅಶ್ವಿನ್​ ಒಂದು ಆಕ್ರಮಣಕಾರಿ ಅಸ್ತ್ರ : ರೋಹಿತ್ ಪ್ರಶಂಸೆ

author img

By

Published : Nov 22, 2021, 6:27 PM IST

Ashwin is always an attacking option for a captain: Rohit
ರೋಹಿತ್ ಶರ್ಮಾ ಅಶ್ವಿನ್

ನಾಲ್ಕು ವರ್ಷಗಳ ಕಾಲ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಅವಕಾಶ ವಂಚಿತನಾಗಿ ಕಳೆದ ಟಿ20 ವಿಶ್ವಕಪ್​ನಲ್ಲಿ(T20 World Cup) ಭಾರತ ತಂಡದಲ್ಲಿ ಅವಕಾಶ ಪಡೆದಿದ್ದ 35 ವರ್ಷದ ಅಶ್ವಿನ್(ashwin comeback)​ 3 ಪಂದ್ಯಗಳ ಕಿವೀಸ್​ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ನಿರ್ಣಾಯಕ ಹಂತದಲ್ಲಿ ಬ್ರೇಕ್ ತಂದುಕೊಟ್ಟು ಆಕರ್ಷಕ ಬೌಲಿಂಗ್ ಪ್ರದರ್ಶನ ತೋರಿದ್ದಾರೆ..

ಕೋಲ್ಕತ್ತಾ : ಟಿ20 ಪಂದ್ಯಗಳಲ್ಲಿ ತಂಡಕ್ಕೆ ವಿಕೆಟ್​ ಅಗತ್ಯವಿದ್ದಾಗ ರವಿಚಂದ್ರನ್​ ಅಶ್ವಿನ್(Ravichandran Ashwin) ಅವರು ನಾಯಕನಾದವನಿಗೆ ಸದಾ ಆಕ್ರಮಣಕಾರಿ ಆಯ್ಕೆ ಎಂದು​ ಭಾರತ ತಂಡದ ನಾಯಕ ರೋಹಿತ್ ಶರ್ಮಾ( India captain Rohit Sharma) ಅನುಭವಿ ಸ್ಪಿನ್ನರ್ ಪರ ಪ್ರಶಂಸೆಯ ಮಾತನಾಡಿದ್ದಾರೆ.

ರೋಹಿತ್​ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯಿಂದ ಭಾರತ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇವರ ನೇತೃತ್ವದಲ್ಲಿ ಭಾರತ 3-0ಯಲ್ಲಿ ನ್ಯೂಜಿಲ್ಯಾಂಡ್(India sweep 3-0 against New Zealand​) ವಿರುದ್ಧ ಸರಣಿಯನ್ನು ಕ್ಲೀನ್​ ಸ್ವೀಪ್ ಮಾಡಿದೆ.

ನಾಲ್ಕು ವರ್ಷಗಳ ಕಾಲ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಅವಕಾಶ ವಂಚಿತನಾಗಿ ಕಳೆದ ಟಿ20 ವಿಶ್ವಕಪ್​ನಲ್ಲಿ(T20 World Cup) ಭಾರತ ತಂಡದಲ್ಲಿ ಅವಕಾಶ ಪಡೆದಿದ್ದ 35 ವರ್ಷದ ಅಶ್ವಿನ್(ashwin comeback)​ 3 ಪಂದ್ಯಗಳ ಕಿವೀಸ್​ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ನಿರ್ಣಾಯಕ ಹಂತದಲ್ಲಿ ಬ್ರೇಕ್ ತಂದು ಕೊಟ್ಟು ಆಕರ್ಷಕ ಬೌಲಿಂಗ್ ಪ್ರದರ್ಶನ ತೋರಿದ್ದಾರೆ.

"ಅವರು(ಅಶ್ವಿನ್) ಯಾವಾಗಲೂ ನಾಯಕನ ಆಕ್ರಮಣಕಾರಿ ಆಯ್ಕೆಯಾಗಿರುತ್ತಾರೆ. ಅವರಂತಹ ಬೌಲರ್​ಗಳು ನಿಮ್ಮ ತಂಡದಲ್ಲಿದ್ದಾಗ ಮಧ್ಯಮ ಓವರ್​ಗಳಲ್ಲಿ ವಿಕೆಟ್ ಪಡೆಯಲು ನಿಮಗೆ ಸದಾ ಒಂದು ಉತ್ತಮ ಅವಕಾಶವಿರುತ್ತದೆ" ಎಂದು ಕಿವೀಸ್ ವಿರುದ್ಧ 73 ರನ್​ಗಳಿಂದ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

"ಅಶ್ವಿನ್​ ದುಬೈನಿಂದ ಈವರೆಗೆ ಅವರು ನೀಡುತ್ತಿರುವ ಪ್ರದರ್ಶನ ಗಮನಿಸಿದರೆ ಇದೊಂದು ಗ್ರೇಟ್​ ಕಮ್​ಬ್ಯಾಕ್ ಮತ್ತು ಅವರೊಬ್ಬ ಅತ್ಯುತ್ತಮ ಗುಣಮಟ್ಟದ ಬೌಲರ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅವರು ಕಳೆದ ಕೆಲವು ವರ್ಷಗಳಿಂದ ರೆಡ್ ಬಾಲ್ ಕ್ರಿಕೆಟ್​ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಅಲ್ಲದೆ ಅವರು ವೈಟ್​ ಬಾಲ್​ ಕ್ರಿಕೆಟ್​ ದಾಖಲೆ ಕೂಡ ಕೆಟ್ಟದಾಗಿಲ್ಲ. ಅವರು ಸೀಮತ ಓವರ್​ ಕ್ರಿಕೆಟ್​ಗೆ ಹಿಂತಿರುಗಿ, ದುಬೈನಲ್ಲಿ ಮತ್ತು ಇಲ್ಲಿ 2 ಪಂದ್ಯಗಳಲ್ಲಿ ನೀಡಿದ ಪ್ರದರ್ಶನ ಅವರ ಗುಣಮಟ್ಟವನ್ನು ತೋರಿಸುತ್ತದೆ" ಎಂದಿದ್ದಾರೆ.

ಅಶ್ವಿನ್​ ಜೈಪುರದಲ್ಲಿ 4 ಓವರ್​ಗಳಲ್ಲಿ 23 ರನ್​ ನೀಡಿ 2 ವಿಕೆಟ್ ಪಡೆದರೆ, ರಾಂಚಿಯಲ್ಲಿ 19 ರನ್​ ನೀಡಿ 1 ವಿಕೆಟ್ ಪಡೆದಿದ್ದರು. ಅವರು ಅಕ್ಷರ್ ಪಟೇಲ್ ಜೊತೆ ಮಧ್ಯಮ ಓವರ್​ಗಳಲ್ಲಿ ಕಿವೀಸ್​ ರನ್​ಗತಿಗೆ ನಿರಂತರ ತಡೆಯೊಡ್ಡಿದ್ದರು. 3ನೇ ಪಂದ್ಯದಲ್ಲಿ ಅಶ್ವಿನ್ ವಿಶ್ರಾಂತಿ ಪಡೆದು ಚಹಲ್​ಗೆ ಅವಕಾಶ ಮಾಡಿಕೊಟ್ಟಿದ್ದರು.

ಇದನ್ನೂ ಓದಿ:ಕಿವೀಸ್​ ಕಠಿಣ ಪರಿಸ್ಥಿತಿಯಲ್ಲಿ ಸರಣಿಯನ್ನಾಡಿದೆ, ಸರಣಿ ಗೆದ್ದರೂ ನಮ್ಮ ಕಾಲು ನೆಲದಲ್ಲಿರಬೇಕು: ದ್ರಾವಿಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.