ETV Bharat / sports

ಗವಾಸ್ಕರ್, ಸಚಿನ್, ಕ್ಲಾರ್ಕ್​​ ದಾಖಲೆ ಮುರಿದ ಇಂಗ್ಲೆಂಡ್ ನಾಯಕ ಜೋ ರೂಟ್​

author img

By

Published : Dec 18, 2021, 5:17 PM IST

Ashes 2021
ಜೋ ರೂಟ್ ದಾಖಲೆ

ರೂಟ್​ಗಿಂತಲೂ ಮೊದಲು ಪಾಕಿಸ್ತಾನದ ಮೊಹಮ್ಮದ್ ಯೂಸುಫ್​ 1788ರನ್, ವೆಸ್ಟ್ ಇಂಡೀಸ್​ನ ಸರ್​ ವಿವಿಯನ್ ರಿಚರ್ಡ್ಸ್​ 1710 ರನ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್​ 1656 ರನ್​ಗಳಿಸಿ ರೂಟ್​ಗಿಂತ ಮುಂದಿದ್ದಾರೆ. ಆದರೆ, ಜೋ ರೂಟ್​ ಈ ವರ್ಷ ಇನ್ನೂ ಒಂದು ಟೆಸ್ಟ್​ ಸೇರಿ ಒಟ್ಟು 3 ಇನ್ನಿಂಗ್ಸ್​ ಬ್ಯಾಟಿಂಗ್ ಮಾಡಲು ಅವಕಾಶವಿದ್ದು, 173 ರನ್​ಗಳಿಸಿದರೆ ವರ್ಷವೊಂದರಲ್ಲಿ ಅತಿ ಹೆಚ್ಚು ರನ್​ಗಳಿಸಿದ ವಿಶ್ವ ದಾಖಲೆಗೆ ಪಾತ್ರರಾಗಲಿದ್ದಾರೆ..

ಅಡಿಲೇಡ್​ : ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 2ನೇ ಆ್ಯಶಸ್​ ಟೆಸ್ಟ್​ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ಇಂಗ್ಲೆಂಡ್​ ತಂಡದ ನಾಯಕ ವರ್ಷದಲ್ಲಿ ಹೆಚ್ಚು ಟೆಸ್ಟ್​ ರನ್​ಗಳಿಸಿದ ಪಟ್ಟಿಯಲ್ಲಿ ಭಾರತದ ಲೆಜೆಂಡರಿ ಕ್ರಿಕೆಟಿಗರಾದ ಸುನೀಲ್ ಗವಾಸ್ಕರ್ ಮತ್ತು ಸಚಿನ್​ ತೆಂಡೂಲ್ಕರ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಅಡಿಲೇಡ್​ನ ಡೇ ಅಂಡ್ ನೈಟ್​ ಟೆಸ್ಟ್​ ಪಂದ್ಯದ 3ನೇ ದಿನ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್​​ 116 ಎಸೆತಗಳಲ್ಲಿ 7 ಬೌಂಡರಿ ಸಹಿತ 62 ರನ್​ಗಳಿಸಿ ಔಟಾದರು. ಈ ಸಂದರ್ಭದಲ್ಲಿ ಅವರು 2021ರ ವರ್ಷದಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 1600ರ ಗಡಿ ದಾಟುವ ಮೂಲಕ ಕ್ಯಾಲೆಂಡರ್​ ವರ್ಷದಲ್ಲಿ 1600ಕ್ಕೂ ಹೆಚ್ಚು ರನ್​ಗಳಿಸಿದ ವಿಶ್ವದ 4ನೇ ಬ್ಯಾಟರ್​ ಎನಿಸಿದರು.

ರೂಟ್​ಗಿಂತಲೂ ಮೊದಲು ಪಾಕಿಸ್ತಾನದ ಮೊಹಮ್ಮದ್ ಯೂಸುಫ್​ 1788 ರನ್, ವೆಸ್ಟ್ ಇಂಡೀಸ್​ನ ಸರ್​ ವಿವಿಯನ್ ರಿಚರ್ಡ್ಸ್​ 1710 ರನ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್​ 1656 ರನ್​ಗಳಿಸಿ ರೂಟ್​ಗಿಂತ ಮುಂದಿದ್ದಾರೆ. ಆದರೆ, ಜೋ ರೂಟ್​ ಈ ವರ್ಷ ಇನ್ನೂ ಒಂದು ಟೆಸ್ಟ್​ ಸೇರಿ ಒಟ್ಟು 3 ಇನ್ನಿಂಗ್ಸ್​ ಬ್ಯಾಟಿಂಗ್ ಮಾಡಲು ಅವಕಾಶವಿದೆ. 173 ರನ್​ಗಳಿಸಿದರೆ ವರ್ಷವೊಂದರಲ್ಲಿ ಅತಿ ಹೆಚ್ಚು ರನ್​ಗಳಿಸಿದ ವಿಶ್ವ ದಾಖಲೆಗೆ ಪಾತ್ರರಾಗಲಿದ್ದಾರೆ.

ಗವಾಸ್ಕರ್, ಸಚಿನ್, ಕ್ಲಾರ್ಕ್​​ ದಾಖಲೆ

ಇನ್ನು ರೂಟ್​ ಈ ಪಂದ್ಯದಲ್ಲಿ 62 ರನ್​ಗಳಿಸುವ ಗರಿಷ್ಠ ರನ್​ಗಳಿಸಿದವರ ಪಟ್ಟಿಯಲ್ಲಿ ಒಂದೇ ದಿನ ರಿಕಿ ಪಾಂಟಿಂಗ್​(1544), ಸುನೀಲ್ ಗವಾಸ್ಕರ್​(1555), ಸಚಿನ್​ ತೆಂಡೂಲ್ಕರ್​(1562) ಮತ್ತು ಮೈಕಲ್​ ಕ್ಲಾರ್ಕ್​(1595) ದಾಖಲೆಗಳನ್ನು ಮುರಿದರು. ಇಂಗ್ಲೆಂಡ್​ ಪರ ಈ ಹಿಂದೆ 1481 ರನ್​ಗಳಿಸಿದ್ದ ಮಾಜಿ ನಾಯಕ ಮೈಕಲ್ ವಾನ್​ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ರನ್​ಗಳಿಸಿದ ದಾಖಲೆ ಹೊಂದಿದ್ದರು.​

ಇದನ್ನೂ ಓದಿ:ಕನ್ನಡಿಗ ಕೆ ಎಲ್ ರಾಹುಲ್​ಗೆ ಭಾರತ ಟೆಸ್ಟ್​ ತಂಡದ ಉಪನಾಯಕನ ಪಟ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.