ETV Bharat / sports

2 ವರ್ಷಗಳ ನಂತರ ಟೂರ್ನಿಯೊಂದರಲ್ಲಿ ಫೈನಲ್​ ಪ್ರವೇಶಿಸಿದ ವಿಶ್ವಚಾಂಪಿಯನ್​ ಸಿಂಧು

author img

By

Published : Mar 6, 2021, 7:43 PM IST

ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಪಿವಿ ಸಿಂಧು ಟೂರ್ನಿಯಲ್ಲಿ 4ನೇ ಶ್ರೇಯಾಂಕ ಪಡೆದಿದ್ದ ಡೆನ್ಮಾರ್ಕ್​ನ ಬ್ಲಿಚ್​ಫೆಲ್ಡ್​ ವಿರುದ್ಧ 22-20, 21-10 ಗೇಮ್​ಗಳ ಅಂತರದಲ್ಲಿ 43 ನಿಮಿಷ ನಡೆದ ಪಂದ್ಯದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರು. ಈ ಮೂಲಕ ಯುನೆಕ್ಸ್​ ಥಾಯ್ಲೆಂಡ್​ ​ ಓಪನ್​ನಲ್ಲಿನ ಮೊದಲ ಸುತ್ತಿನ ಸೋಲಿಗೆ ಸಿಂಧು ಸೇಡು ತೀರಿಸಿಕೊಂಡರು.

ಪಿವಿ ಸಿಂಧುಗೆ ಗೆಲುವು
ಪಿವಿ ಸಿಂಧುಗೆ ಗೆಲುವು

ಬಾಸೆಲ್(ಸ್ವಿಟ್ಜರ್ಲೆಂಡ್​): ವಿಶ್ವ ಚಾಂಪಿಯನ್​ ಸಿಂಧು ಸ್ವಿಸ್​ ಓಪನ್​ ಸೂಪರ್​ 300 ಟೂರ್ನಮೆಂಟ್​ ಸೆಮಿಫೈನಲ್​ನಲ್ಲಿ ವಿಶ್ವದ 12ನೇ ಶ್ರೇಯಾಂಕದ ಮಿಯಾ ಬ್ಲಿಚ್‌ಫೆಲ್ಡ್ ವಿರುದ್ಧ ಗೆಲ್ಲುವ ಮೂಲಕ ಮಹಿಳೆಯರ ಸಿಂಗಲ್ಸ್​ನಲ್ಲಿ ಫೈನಲ್​ ಪ್ರವೇಶಿಸಿದ್ದಾರೆ.​

ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಪಿವಿ ಸಿಂಧು ಟೂರ್ನಿಯಲ್ಲಿ 4ನೇ ಶ್ರೇಯಾಂಕ ಪಡೆದಿದ್ದ ಡೆನ್ಮಾರ್ಕ್​ನ ಬ್ಲಿಚ್​ಫೆಲ್ಡ್​ ವಿರುದ್ಧ 22-20, 21-10 ಗೇಮ್​ಗಳ ಅಂತರದಲ್ಲಿ 43 ನಿಮಿಷ ನಡೆದ ಪಂದ್ಯದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರು. ಈ ಮೂಲಕ ಯುನೆಕ್ಸ್​ ಥಾಯ್ಲೆಂಡ್​​ ಓಪನ್​ನಲ್ಲಿನ ಮೊದಲ ಸುತ್ತಿನ ಸೋಲಿಗೆ ಸಿಂಧು ಸೇಡು ತೀರಿಸಿಕೊಂಡರು.

2019ರ ವಿಶ್ವಚಾಂಪಿಯನ್​ಶಿಪ್​ನಲ್ಲಿ​ ಫೈನಲ್ ಗೆದ್ದ ನಂತರ ಇದೇ ಮೊದಲ ಬಾರಿಗೆ ಟೂರ್ನಿಯೊಂದರಲ್ಲಿ ಫೈನಲ್​ ಪ್ರವೇಶಿಸಿದ್ದಾರೆ.

ಇನ್ನು ಪುರುಷರ ಸ್ಟಾರ್​ ಶಟ್ಲರ್​ ಕಿಡಂಬಿ ಶ್ರೀಕಾಂತ್​ ವಿಶ್ವದ 2ನೇ ಶ್ರೇಯಾಂಕ ಹಾಗೂ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ವಿಕ್ಟರ್​ ಅಕ್ಸೆಲ್ಸನ್​ ವಿರುದ್ಧ 13-21, 19-21 ರ ಅಂತರದಲ್ಲಿ ಸೋಲುವ ಮೂಲಕ ನಿರಾಸೆಯನುಭವಿಸಿದರು.

ಇದನ್ನು ಓದಿ: ಇಂಗ್ಲೆಂಡ್​ ವಿರುದ್ಧ ಗೆದ್ದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಭಾರತ ಲಗ್ಗೆ: ರಾಷ್ಟ್ರಪತಿ ಅಭಿನಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.