ETV Bharat / sitara

’ಸರಿಗಮಪ ಸೀಸನ್-17 ಕಮಿಂಗ್ ಸೂನ್​​‘.. ಗುಟ್ಟು ಬಿಚ್ಚಿಟ್ಟ ಆ್ಯಂಕರ್‌ ಅನುಶ್ರೀ

author img

By

Published : Jun 23, 2020, 9:20 PM IST

SARIGAMAPA Season-17 will coming soon: Anushree in Social media
’ಸರಿಗಮಪ ಸೀಸನ್-17 ಕಮಿಂಗ್ ಸೂನ್​​‘ ಗುಟ್ಟು ಬಿಚ್ಚಿಟ್ಟ ಅನುಶ್ರೀ

ಸದಾ ಶೂಟಿಂಗ್ ಎಂದು ಬ್ಯುಸಿಯಾಗಿರುತ್ತಿದ್ದ ಇವರು ಶೂಟಿಂಗ್‌ನ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ, ಇದೀಗ ಈಗ ಸಿಹಿ ಸುದ್ದಿ ನೀಡಿದ್ದಾರೆ. ನಿಮ್ಮ ನೆಚ್ಚಿನ ಸಂಗೀತ ಕಾರ್ಯಕ್ರಮ ಸರಿಗಮಪ ಮತ್ತೆ ಪ್ರಸಾರ ಕಾಣಲಿದೆ..

ಬೆಂಗಳೂರು : ಲಾಕ್​ಡೌನ್​​ನಿಂದಾಗಿ ಎಲ್ಲಾ ಶೂಟಿಂಗ್​​​ಗಳು ನಿಂತು ಹೋಗಿದ್ದು ಮನೆಯಲ್ಲಿ ಖಾಲಿ ಕುಳಿತು ಕಲಾವಿದರುಗಳಿಗೆ ತುಂಬಾ ಬೇಸರವಾಗಿತ್ತು. ಮಾತ್ರವಲ್ಲ ಶೂಟಿಂಗ್ ಆರಂಭ ಅದ್ಯಾವಾಗ ಆಗುತ್ತೆ ಅಂಥ ಕಾಯುತ್ತಿದ್ದರು. ಎರಡು ತಿಂಗಳ ಸುದೀರ್ಘ ಬ್ರೇಕ್​ನ ನಂತರ ಮತ್ತೆ ಶೂಟಿಂಗ್ ಆರಂಭಗೊಂಡಿದ್ದು, ಕಿರುತೆರೆ ಕಲಾವಿದರುಗಳು ಫುಲ್ ಖುಷಿಯಲ್ಲಿದ್ದಾರೆ.

Anushree
ಆ್ಯಂಕರ್ ಅನುಶ್ರೀ

ಆದರೆ, ರಿಯಾಲಿಟಿ ಶೋಗಳ ಚಿತ್ರೀಕರಣ ಇನ್ನೂ ಕೂಡಾ ಆರಂಭಗೊಂಡಿರಲಿಲ್ಲ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪದ ನಿರೂಪಕಿಯಾಗಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಅನುಶ್ರೀ ಅವರು ಕೂಡಾ ಎರಡು ತಿಂಗಳಿನಿಂದ ಶೂಟಿಂಗ್ ಇಲ್ಲದೇ ಮನೆಯಲ್ಲಿ ಕುಳಿತಿದ್ದಾರೆ.

ಸದಾ ಶೂಟಿಂಗ್ ಎಂದು ಬ್ಯುಸಿಯಾಗಿರುತ್ತಿದ್ದ ಇವರು ಶೂಟಿಂಗ್‌ನ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ, ಇದೀಗ ಈಗ ಸಿಹಿ ಸುದ್ದಿ ನೀಡಿದ್ದಾರೆ. ನಿಮ್ಮ ನೆಚ್ಚಿನ ಸಂಗೀತ ಕಾರ್ಯಕ್ರಮ ಸರಿಗಮಪ ಮತ್ತೆ ಪ್ರಸಾರ ಕಾಣಲಿದೆ. ಅದಕ್ಕಾಗಿ ಸಕಲ ಸಿದ್ಧತೆ ಕೂಡ ನಡೆಯುತ್ತಿದೆ. ಇದನ್ನು ಸ್ವತಃ ಅನುಶ್ರೀ ಅವರೇ ತಮ್ಮ ಇನ್ಸ್​​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ‌.

"ಶೂಟಿಂಗ್ ಎಷ್ಟು ಮಿಸ್ ಮಾಡ್ಕೊಳ್ತಾದ್ದೇನೆ. ಆದರೆ, ವೇಟಿಂಗ್​ಗೆ ಸದ್ಯದಲ್ಲಿಯೇ ಬೀಳಲಿದೆ ಬ್ರೇಕು. ಸರಿಗಮಪ ಸೀಸನ್ 17 ಕಮಿಂಗ್ ಸೂನ್ " ಎಂದು ಅನುಶ್ರೀ ಬರೆದುಕೊಂಡಿದ್ದಾರೆ. ಅನುಶ್ರೀ ಸಾರಥ್ಯದಲ್ಲಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿರುವ ಸಂಗೀತ ಕಾರ್ಯಕ್ರಮ ಸರಿಗಮಪದಲ್ಲಿ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ, ವಿಜಯ ಪ್ರಕಾಶ್ ಜೊತೆಗೆ ಮಹಾಗುರುಗಳಾದ ನಾದಬ್ರಹ್ಮ ಹಂಸಲೇಖ ಕಾಣಿಸಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.