ETV Bharat / sitara

ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ, ಪುತ್ರ ಅಕಿರ್​​ ನಂದನ್​ಗೆ ಕೋವಿಡ್​

author img

By

Published : Jan 11, 2022, 6:01 PM IST

ಬಾಲಿವುಡ್​, ಟಾಲಿವುಡ್​ ಸೇರಿದಂತೆ ಅನೇಕ ಭಾಷೆಯ ನಟ-ನಟಿಯರಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದು ಇದೀಗ ತೆಲುಗು ನಟ ಪವನ್​ ಕಲ್ಯಾಣ್​ ಅವರ ಮಾಜಿ ಪತ್ನಿ ಹಾಗೂ ಪುತ್ರನಿಗೂ ಸೋಂಕು ದೃಢಗೊಂಡಿದೆ.

Pawan Kalyan ex-wife Renu Desai
Pawan Kalyan ex-wife Renu Desai

ಹೈದರಾಬಾದ್​: ತೆಲುಗು ನಟ ಪವನ್ ಕಲ್ಯಾಣ್​ ಅವರ ಮಾಜಿ ಪತ್ನಿ ರೇಣು ದೇಸಾಯಿ ಹಾಗೂ ಪುತ್ರ ಅಕಿರ್ ನಂದನ್​ಗೆ ಸೋಂಕು ದೃಢಗೊಂಡಿದೆ.

ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಇನ್​​ಸ್ಟಾಗ್ರಾಂ ಮೂಲಕ ಮಾಹಿತಿ ಹಂಚಿಕೊಂಡಿರುವ ರೇಣು ದೇಸಾಯಿ, ನನಗೆ ಮತ್ತು ನನ್ನ ಮಗ ಅಕಿರ್​​​ನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಹೋಂ ಐಸೋಲೇಷನ್​​ಗೊಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದೇವೆ. ಎಲ್ಲರೂ ಕೊರೊನಾ ಬಗ್ಗೆ ಎಚ್ಚರದಿಂದ ಇರುವಂತೆ ಮನವಿ ಮಾಡಿರುವ ಅವರು, ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಯುಪಿಯಲ್ಲಿ ಪಕ್ಷ ತೊರೆದ ಓರ್ವ ಸಚಿವ, ಮೂವರು ಬಿಜೆಪಿ ಶಾಸಕರು: ಶರದ್ ಪವಾರ್‌ ಹೇಳಿದ್ದೇನು ಗೊತ್ತೇ?

ಕಳೆದ ವರ್ಷ ನಾನು ಕೋವಿಡ್​ನ ಎರಡು ಡೋಸ್​ ಪಡೆದುಕೊಂಡಿದ್ದು, ಇದೀಗ ಅಕಿರ್​ನಿಗೆ ನೀಡಲಿದ್ದೇನೆ. ನೀವೂ ಕೂಡ ಕೋವಿಡ್​ನ ಎರಡು ಡೋಸ್​ ಪಡೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಕೋವಿಡ್​ನ ಮೂರನೇ ಅಲೆ ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಕಳೆದ ಕೆಲ ದಿನಗಳಿಂದ ಅನೇಕ ಸೆಲೆಬ್ರಿಟಿಗಳಿಗೆ ಸೋಂಕು ದೃಢಪಟ್ಟಿದೆ. ಇಂದು ಬೆಳಗ್ಗೆ ಅಷ್ಟೇ ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ ಅವರಿಗೆ ಕೋವಿಡ್ ಸೋಂಕು ದೃಢಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಟಾಲಿವುಡ್​ನ ನಟ ಮಹೇಶ್​ ಬಾಬು ಹಾಗೂ ನಟಿ ತ್ರಿಶಾಗೂ ಸೋಂಕು ದೃಢಗೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.