ETV Bharat / bharat

ಯುಪಿಯಲ್ಲಿ ಪಕ್ಷ ತೊರೆದ ಓರ್ವ ಸಚಿವ, ಮೂವರು ಬಿಜೆಪಿ ಶಾಸಕರು: ಶರದ್ ಪವಾರ್‌ ಹೇಳಿದ್ದೇನು ಗೊತ್ತೇ?

author img

By

Published : Jan 11, 2022, 5:22 PM IST

ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಆಡಳಿತಾರೂಢ ಬಿಜೆಪಿಗೆ ಮೇಲಿಂದ ಮೇಲೆ ದೊಡ್ಡ ಹೊಡೆತ ಬೀಳಲು ಶುರುವಾಗಿದೆ. ಕಳೆದ 24 ಗಂಟೆಯೊಳಗೆ ಓರ್ವ ಸಚಿವ ಸೇರಿದಂತೆ ಮೂವರು ಶಾಸಕರು ಕಮಲ ಪಕ್ಷ ತೊರೆದಿದ್ದಾರೆ.

NCP chief Sharad Pawar
NCP chief Sharad Pawar

ಮುಂಬೈ(ಮಹಾರಾಷ್ಟ್ರ): ಉತ್ತರ ಪ್ರದೇಶ, ಗೋವಾ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ವಿವಿಧ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಉದ್ದೇಶದಿಂದ ಪ್ರಮುಖ ಮುಖಂಡರಿಗೆ ಮಣೆ ಹಾಕುತ್ತಿದ್ದು, ಉತ್ತರ ಪ್ರದೇಶದಲ್ಲಿ ಇದು ಜೋರಾಗಿದೆ.

ಅಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಸ್ವಾಮಿ ಪ್ರಸಾದ್​ ಮೌರ್ಯ ಪಕ್ಷಕ್ಕೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷ ಸೇರಿಕೊಳ್ಳುತ್ತಿದ್ದಂತೆ ಭಾರತೀಯ ಜನತಾ ಪಾರ್ಟಿಯ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಹಜಾನಪುರ್​ ಬಿಜೆಪಿ ಶಾಸಕ ರೋಷನ್​ ಲಾಲ್​ ವರ್ಮಾ, ಬಿಲ್ಹೌರ್​ ಶಾಸಕ ಭಗವತಿ ಪ್ರಸಾದ್​ ಸಾಗರ್ ಮತ್ತು ತಿಂದವಾರಿ ಶಾಸಕ ಬ್ರಜೇಶ್​ ಪ್ರಜಾಪತಿ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

  • 13 MLAs are going to join Samajwadi Party (SP): NCP chief Sharad Pawar on Uttar Pradesh minister Swami Prasad Maury resigning and joining SP pic.twitter.com/ZZJnAQRvba

    — ANI (@ANI) January 11, 2022 " class="align-text-top noRightClick twitterSection" data=" ">

13 ಶಾಸಕರು ಸಮಾಜವಾದಿ ಪಕ್ಷ ಸೇರ್ಪಡೆ:

ಉತ್ತರ ಪ್ರದೇಶದಲ್ಲಿ ಪಕ್ಷಾಂತರ ಪರ್ವ ಆರಂಭಗೊಳ್ಳುತ್ತಿದ್ದಂತೆ ಇದೇ ವಿಚಾರವಾಗಿ ಮಾತನಾಡಿರುವ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​, ಕೆಲವು ದಿನಗಳಲ್ಲೇ 13 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಮಾಜವಾದಿ ಪಕ್ಷ ಸೇರಲಿದ್ದಾರೆ ಎಂಬ ಬಾಂಬ್​ ಸ್ಫೋಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ನಾವು ಮಾತುಕತೆ ನಡೆಸಿದ್ದು, ನಮ್ಮ ನಿರ್ಧಾರ ತಿಳಿಸಿದ್ದೇವೆ ಎಂದರು.

ಇದನ್ನೂ ಓದಿ: ಬಿಜೆಪಿ ತ್ಯಜಿಸಿ ಸಮಾಜವಾದಿ ಪಕ್ಷ ಸೇರಿದ ಯುಪಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ

ಲಭ್ಯವಾಗಿರುವ ಮಾಹಿತಿ ಪ್ರಕಾರ, ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಅನೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲು ಹಿಂದೇಟು ಹಾಕಿದ್ದು, ಹೊಸ ಮುಖಗಳಿಗೆ ಮಣೆ ಹಾಕಲು ತೀರ್ಮಾನಿಸಿದೆ ಎಂಬ ಮಾತು ಕೇಳಿ ಬಂದಿದೆ. ಕೆಲ ಶಾಸಕರ ವಿರುದ್ಧ ಗಂಭೀರ ಸ್ವರೂಪದ ಆರೋಪ ಕೇಳಿ ಬಂದಿದ್ದು ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸಲು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.