ETV Bharat / sitara

ಎನ್​ಸಿಬಿ ಡ್ರಿಲ್ ಬಳಿಕ ಮೊದಲ ಬಾರಿಗೆ ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡ ಬಾಲಿವುಡ್​ ನಟಿ ಅನನ್ಯಾ ಪಾಂಡೆ

author img

By

Published : Nov 16, 2021, 4:46 PM IST

ಬಾಲಿವುಡ್​ ಬೆಡಗಿ ಅನನ್ಯಾ ಪಾಂಡೆ (Bollywood actor Ananya Panday)ಇನ್​ಸ್ಟಾಗ್ರಾಮ್​ನಲ್ಲಿ ಸುಂದರವಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಾವು ಕಾರಿನಲ್ಲಿ ಕುಳಿತು ಆಕಾಶದಲ್ಲಿ ಕಾಮನಬಿಲ್ಲು ಮೂಡಿರುವ ವಿಡಿಯೋ ಸೆರೆ ಹಿಡಿದ ವಿಡಿಯೋ ಪೋಸ್ಟ್​ (shared a beautiful post on her Instagram)ಮಾಡಿದ್ದಾರೆ..

Bollywood actor Ananya Panday
ಬಾಲಿವುಡ್​ ನಟಿ ಅನನ್ಯಾ ಪಾಂಡೆ

ಮುಂಬೈ(ಮಹಾರಾಷ್ಟ್ರ) : ಬಾಲಿವುಡ್​ ಬೆಡಗಿ ಅನನ್ಯಾ ಪಾಂಡೆ(Bollywood actor Ananya Panday) ಕ್ರೂಸ್​ ಡ್ರಗ್ಸ್​ ಪ್ರಕರಣದಲ್ಲಿ ಎನ್‌ಸಿಬಿಯಿಂದ ನೋಟಿಸ್​ ಪಡೆದ ಬಳಿಕ ಸಾಮಾಜಿಕ ಜಾಲತಾಣದಿಂದ ಸ್ವಲ್ಪ ವಿಮುಖರಾಗಿದ್ದರು.

ಇದೀಗ ಬಾನಿನಲ್ಲಿ ಮೂಡಿದ ಕಾಮನಿಬಿಲ್ಲನ್ನು ಸೆರೆ ಹಿಡಿದ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ(shared a beautiful post on her Instagram) ಹಂಚಿಕೊಳ್ಳುವ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.

Bollywood actor Ananya Panday
ಸೋದರ ಸಂಬಂಧಿ ಅಲನ್ನಾ ಪಾಂಡೆಗೆ ಅಭಿನಂದನೆ

ಕಾರಿನಲ್ಲಿ ಕುಳಿತಿರುವ ಅನನ್ಯಾ ಪಾಂಡೆ, ಕಾರಿನ ಗಾಜಿನಾಚೆಗೆ ಕಾಣುವ ತಿಳಿನೀಲಿ ಆಕಾಶದಲ್ಲಿ ಕಾಮನಬಿಲ್ಲು ಮೂಡಿರುವ ಸುಂದರವಾದ ವಿಡಿಯೋವನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದು ಇನ್​ಸ್ಟಾಗ್ರಾಮ್​ನಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೇ, 'ಮಳೆ ಬೀಳದೇ ಕಾಮನಬಿಲ್ಲು ಮೂಡಲು ಸಾಧ್ಯವೇ' ಎಂಬ ಒಕ್ಕಣೆಯನ್ನೂ ಬರೆದಿದ್ದಾರೆ.

ಇದಲ್ಲದೇ, ತನ್ನ ಸೋದರ ಸಂಬಂಧಿ ಅಲನ್ನಾ ಪಾಂಡೆ, ಗೆಳೆಯ ಐವರ್​ ಮೆಕ್​ಕ್ರೇ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸಲು ಅಲನ್ನಾ ಕೈಬೆರಳಲ್ಲಿ ಉಂಗುರ ಇರುವ ಫೋಟೋವನ್ನು ಇನ್​ಸ್ಟಾಗ್ರಾಮ್​ನ ಸ್ಟೇಟಸ್​ನಲ್ಲಿ ಹಾಕಿ@ಅಲನ್ನಾಪಾಂಡೆ@ಸೋ ಮಚ್​ ಲವ್​ ಎಂದು ಬರೆದುಕೊಂಡಿದ್ದಾರೆ.

ಅನನ್ಯಾ ಪಾಂಡೆ ತೆಲುಗು ನಟ ವಿಜಯ್​ ದೇವರಕೊಂಡ ನಾಯಕರಾಗಿರುವ ಲಿಗರ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಕ್ಸಿಂಗ್​ ದಂತಕಥೆ ಮೈಕ್​ ಟೈಸನ್​ ಕೂಡ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.