ETV Bharat / science-and-technology

'ರಿಪ್ಲೈ ವಿತ್ ಮೆಸೇಜ್' ಹೊಸ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್​ಆ್ಯಪ್

author img

By

Published : Apr 28, 2023, 6:01 PM IST

ವಾಟ್ಸ್​​ಆ್ಯಪ್ ಇತ್ತೀಚೆಗೆ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಿದೆ. ಬಳಕೆದಾರರಿಗೆ ಅನುಕೂಲವಾಗುವಂತೆ ವಾಟ್ಸ್​ಆ್ಯಪ್ ಈಗ ರಿಪ್ಲೈ ವಿತ್ ಮೆಸೇಜ್ ಹೆಸರಿನ ವೈಶಿಷ್ಟ್ಯ ಹೊರತಂದಿದೆ.

WhatsApp rolling out 'reply with message' feature within call notifications
WhatsApp rolling out 'reply with message' feature within call notifications

ಸ್ಯಾನ್ ಫ್ರಾನ್ಸಿಸ್ಕೊ : ವಾಟ್ಸ್​​ಆ್ಯಪ್ ರಿಪ್ಲೈ ವಿತ್ ಮೆಸೇಜ್ (reply with a message) ಎಂಬ ಹೊಸ ವೈಶಿಷ್ಟ್ಯವೊಂದನ್ನು ಹೊರತಂದಿದೆ. ಕಾಲ್ ನೋಟಿಫಿಕೇಶನ್​ ಒಳಗಡೆ ಬಳಸಬಹುದಾದ ರಿಪ್ಲೈ ವಿತ್ ಮೆಸೇಜ್ ವೈಶಿಷ್ಟ್ಯವನ್ನು ಸದ್ಯ ಆ್ಯಂಡ್ರಾಯ್ಡ್​ ಬೀಟಾ ಟೆಸ್ಟರ್​ಗಳಿಗಾಗಿ ಬಿಡುಗಡೆ ಮಾಡಲಾಗಿದೆ. ಬರುವ ದಿನಗಳಲ್ಲಿ ಮತ್ತಷ್ಟು ಬಳಕೆದಾರರಿಗೆ ಹೊಸ ವೈಶಿಷ್ಟ್ಯ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ರಿಪ್ಲೈ ವಿತ್ ಮೆಸೇಜ್ ಸೌಲಭ್ಯದ ಮೂಲಕ ಈಗ ಒಳಬರುತ್ತಿರುವ ವಾಟ್ಸ್​​ಆ್ಯಪ್ ಕಾಲಿಂಗ್​ ವೇಳೆ ಕರೆ ತಿರಸ್ಕರಿಸಬಹುದು ಹಾಗೂ ಅದೇ ಸಮಯದಲ್ಲಿ ಕಾಲ್ ಮಾಡಿದವರಿಗೆ ಮೆಸೇಜ್ ಕಳುಹಿಸಬಹುದು ಎಂದು ವರದಿಗಳು ತಿಳಿಸಿವೆ.

ವಾಟ್ಸ್​ಆ್ಯಪ್​ನಲ್ಲಿ ಕರೆ ಬರುತ್ತಿರುವಾಗ ಇನ್ನುಮುಂದೆ ಗ್ರಾಹಕರಿಗೆ ಇನ್​ಕಮಿಂಗ್ ಕಾಲ್ ನೋಟಿಫಿಕೇಶನ್ ಜೊತೆಗೆ reply ಎಂಬ ಬಟನ್ ಕಾಣಿಸಲಿದೆ. ಈಗಿರುವ decline ಮತ್ತು answer ಬಟನ್​ಗಳ ಜೊತೆಯಲ್ಲೇ ಇದು ಕಾಣಿಸಿಕೊಳ್ಳಲಿದೆ. ಒಂದು ವೇಳೆ ಬಳಕೆದಾರರು ರಿಪ್ಲೈ ಬಟನ್ ಟ್ಯಾಪ್ ಮಾಡಿದರೆ ಒಳಬರುತ್ತಿರುವ ಕರೆಯು ರಿಜೆಕ್ಟ್ ಆಗಲಿದೆ ಮತ್ತು ಒಂದು ಮೆಸೇಜ್ ಬಾಕ್ಸ್​ ತೆರೆದುಕೊಳ್ಳುತ್ತದೆ. ಇದರ ಮೂಲಕ ಬಳಕೆದಾರರು ಕರೆ ಮಾಡಿದವರಿಗೆ ಒಂದು ತ್ವರಿತ ಸಂದೇಶ ಕಳುಹಿಸಬಹುದು.

ಮೀಟಿಂಗ್​ನಲ್ಲಿರುವಾಗ ಅಥವಾ ಇನ್ನಾವುದೋ ಕೆಲಸದಲ್ಲಿರುವಾಗ ಕರೆ ಸ್ವೀಕರಿಸಲು ಸಾಧ್ಯವಾಗದಿದ್ದಾಗ, ಆ ಸಂದರ್ಭಕ್ಕೆ ತಕ್ಕಂತೆ ಸೂಕ್ತವಾದ ಸಂದೇಶ ಕಳುಹಿಸಲು ಈ ಹೊಸ ಸೌಲಭ್ಯದಿಂದ ಸಾಧ್ಯವಾಗಲಿದೆ. ತನ್ನ ಹೊಸ ಮಲ್ಟಿ ಡಿವೈಸ್ ಲಾಗಿನ್ ಫೀಚರ್ ಮೂಲಕ ಒಂದೇ ವಾಟ್ಸ್​ಆ್ಯಪ್ ಖಾತೆಯನ್ನು ಹಲವಾರು ಫೋನ್​ಗಳಲ್ಲಿ ಬಳಸುವ ಅವಕಾಶವನ್ನು ವಾಟ್ಸ್​ ಆ್ಯಪ್ ಇತ್ತೀಚೆಗೆ ನೀಡಿದೆ. ಬಳಕೆದಾರರು ಈಗ ತಮ್ಮ ಫೋನ್ ಅನ್ನು ನಾಲ್ಕು ಹೆಚ್ಚುವರಿ ಸಾಧನಗಳಲ್ಲಿ ಒಂದಾಗಿ ಲಿಂಕ್ ಮಾಡಬಹುದು. ಈ ಅಪ್‌ಡೇಟ್ ಜಾಗತಿಕವಾಗಿ ಬಳಕೆದಾರರಿಗೆ ಲಭ್ಯವಾಗಲು ಪ್ರಾರಂಭಿಸಿದೆ ಮತ್ತು ಮುಂಬರುವ ವಾರಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

ಸ್ಯಾಮ್ಸ್ಂಗ್ ಎಂ14 ಬೆಲೆ ಕಡಿತ: ಸ್ಯಾಮ್ಸಂಗ್​ ಇತ್ತೀಚೆಗಷ್ಟೇ ತನ್ನ ಹೊಸ ಗ್ಯಾಲಕ್ಸಿ ಎಂ14 5ಜಿ ಸ್ಮಾರ್ಟ್​ಪೋನ್ ಅನ್ನು ಲಾಂಚ್ ಮಾಡಿದೆ. ಅಮೆಜಾನ್​ನಲ್ಲಿ ಈ ಪೋನ್ ಅನ್ನು ಆರಂಭಿಕ 14,990 ರೂಪಾಯಿ ಬೆಲೆಯಲ್ಲಿ ಲಾಂಚ್ ಮಾಡಲಾಗಿತ್ತು. ಆದರೆ ಈಗ ಅಮೆಜಾನ್ ಈ ಫೋನ್ ಮೇಲೆ ಹೆಚ್ಚುವರಿಯಾಗಿ 1500 ರೂಪಾಯಿಗಳ ಡಿಸ್ಕೌಂಟ್ ನೀಡುತ್ತಿರುವುದು ಆಕರ್ಷಕವಾಗಿದೆ. ಎಚ್​ಡಿಎಫ್​​ಸಿ ಕ್ರೆಡಿಟ್ ಕಾರ್ಡ್​ ಹೊಂದಿರುವವರು ಇದನ್ನು ಇಗ 13,490 ರೂಪಾಯಿಗಳಲ್ಲಿ ಖರೀದಿಸಬಹುದು. 4ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಮಾಡೆಲ್​ಗಳಿಗೆ ಸದ್ಯ ಈ ಸೌಲಭ್ಯ ಲಭ್ಯವಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 14 5ಜಿ ಫೋನ್ 6.6 ಇಂಚಿನ ಎಲ್​ಸಿಡಿ ಪ್ಯಾನೆಲ್, V ಆಕಾರದ ನಾಚ್, FHD+ ರೆಸಲ್ಯೂಶನ್, 90Hz ರಿಫ್ರೆಶ್ ರೇಟ್, Exynos 1330 ಚಿಪ್​ಸೆಟ್​, 4 ಅಥವಾ 6 ಜಿಬಿ ರ್ಯಾಮ್ ಹಾಗೂ 128 ಜಿಬಿ ಇಂಟರ್ನಲ್ ಸ್ಟೋರೇಜ್ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ : ಬ್ರೌಸರ್​ನಿಂದ ಗ್ರಾಹಕರ ಡೇಟಾ ಕಳವು: ಕ್ರಿಪ್ಟೊಬಾಟ್ ಮಾಲ್ವೇರ್ ಬ್ಲಾಕ್ ಮಾಡಿದ ಗೂಗಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.