ETV Bharat / science-and-technology

ಟ್ವಿಟರ್​ ಎನ್​ಕ್ರಿಪ್ಟೆಡ್​ ಮೆಸೇಜಿಂಗ್ ಆರಂಭ: '..ಈಗಲೇ ನಂಬಬೇಡಿ' ಎಂದ ಮಸ್ಕ್!

author img

By

Published : May 12, 2023, 12:35 PM IST

ಟ್ವಿಟರ್ ತನ್ನ ಮಹತ್ವಾಕಾಂಕ್ಷಿ ಎನ್​ಕ್ರಿಪ್ಟೆಡ್ ಮೆಸೇಜಿಂಗ್ ಸರ್ವಿಸ್ ಆರಂಭಿಸಿದೆ. ಆದರೆ ಇದು ಈಗಿನ್ನೂ ಆರಂಭಿಕ ಹಂತದಲ್ಲಿದೆ.

Secure messaging arrives on Twitter
Secure messaging arrives on Twitter

ಸ್ಯಾನ್ ಫ್ರಾನ್ಸಿಸ್ಕೊ : ಸೋಶಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ ಟ್ವಿಟರ್ ಬುಧವಾರದಿಂದ ಎನ್​ಕ್ರಿಪ್ಟೆಡ್ (ಗೂಢಲಿಪಿ) ಮೆಸೇಜಿಂಗ್ ಸೇವೆಯನ್ನು ಆರಂಭಿಸಿದೆ. ಇದರ ಮೂಲಕ ಬಳಕೆದಾರರು ಇನ್ನು ಮುಂದೆ ಟ್ವಿಟರ್​ನಲ್ಲಿ ಮೊದಲಿಗಿಂತಲೂ ಹೆಚ್ಚು ಸುರಕ್ಷಿತವಾಗಿ ಸಂವಹನ ನಡೆಸಬಹುದು. ಆದರೆ ಈ ಸೇವೆ ಈಗಿನ್ನೂ ಆರಂಭಿಕ ಹಂತದಲ್ಲಿದ್ದು, ಅಷ್ಟೊಂದು ಉಪಯುಕ್ತ ವೈಶಿಷ್ಟ್ಯಗಳನ್ನು ಹೊಂದಿಲ್ಲ ಎನ್ನಲಾಗಿದೆ. ಹ್ಯಾಕರ್​ಗಳು ಮತ್ತು ಇತರ ಸೈಬರ್ ವಂಚಕರಿಂದ ಮೆಸೇಜುಗಳಿಗೆ ರಕ್ಷಣೆ ನೀಡಲು ಅತಿ ಅಗತ್ಯವಾದ ಸುರಕ್ಷತಾ ಕವಚಗಳೇ ಹೊಸ ಸೇವೆಯಲ್ಲಿ ಇಲ್ಲ ಎಂದು ಸೈಬರ್ ತಜ್ಞರು ಹೇಳಿದ್ದಾರೆ.

  • Say goodbye to prying eyes and hello to secure conversations. We're giving early access to Encrypted Direct Messages v1 to our verified users.

    We're excited to get feedback, improve the experience, and roll it out to even more users. Learn more: https://t.co/xl5Juz1pyy

    — Twitter (@Twitter) May 11, 2023 " class="align-text-top noRightClick twitterSection" data=" ">

ಹೊಸ ಸೇವೆ ಬಳಸಬೇಕಾದರೆ ಸೆಂಡರ್ ಮತ್ತು ರಿಸೀವರ್ ಇಬ್ಬರೂ ಪ್ರತಿ ತಿಂಗಳಿಗೆ 11 ಡಾಲರ್ (ಡೆಸ್ಕ್​ಟಾಪ್ ಮಾತ್ರ ಆವೃತ್ತಿಗೆ 8 ಡಾಲರ್) ಪಾವತಿಸಿ ಪಡೆಯುವ ಟ್ವಿಟರ್ ಬ್ಲೂ ಸರ್ವಿಸ್​ನ ಚಂದಾದಾರರಾಗಿರಬೇಕಾಗುತ್ತದೆ ಅಥವಾ ತಿಂಗಳಿಗೆ 1000 ಡಾಲರ್ ಪಾವತಿಸುವ ಹಾಗೂ ಪ್ರತಿ ಬಳಕೆದಾರನಿಗೆ 50 ಡಾಲರ್ ಪಾವತಿಸುವ ಚಂದಾದಾರಿಕೆ ಪಡೆದ ಸಂಸ್ಥೆಯ ಪ್ರತಿನಿಧಿಯಾಗಿರಬೇಕಾಗುತ್ತದೆ. ಹೊಸ ಎನ್​ಕ್ರಿಪ್ಟೆಡ್ ಮೆಸೇಜಿಂಗ್ ಸರ್ವಿಸ್​ಗೆ ಶೀಘ್ರದಲ್ಲೇ ಇನ್ನಷ್ಟು ಉಪಯುಕ್ತ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು ಎಂದು ಕಂಪನಿ ಹೇಳಿದೆ. "ಸದ್ಯಕ್ಕೆ ಇದನ್ನು ಟ್ರೈ ಮಾಡಿ, ಆದರೆ ಈಗಲೇ ಇದನ್ನು ನಂಬಬೇಡಿ" ಎಂದು ಸಿಇಓ ಎಲೋನ್ ಮಸ್ಕ್ ಟ್ವೀಟ್ ಮಾಡಿರುವುದು ಕುತೂಹಲಕರವಾಗಿದೆ.

  • Early version of encrypted direct messages just launched.

    Try it, but don’t trust it yet.

    — Elon Musk (@elonmusk) May 11, 2023 " class="align-text-top noRightClick twitterSection" data=" ">

ಎನ್‌ಕ್ರಿಪ್ಟ್ ಮಾಡಿದ ಸಂದೇಶ ಎಂದರೇನು? : ಇಮೇಲ್, ಡೈರೆಕ್ಟ್ ಮೆಸೇಜ್, ಟ್ವಿಟರ್ ಅಥವಾ ಇತರ ವಿಧಾನಗಳ ಮೂಲಕ ಇಂಟರ್ನೆಟ್‌ನಾದ್ಯಂತ ಕಳುಹಿಸುವ ಸಾಮಾನ್ಯ ಸಂದೇಶಗಳನ್ನು ಮಧ್ಯದಲ್ಲಿ ಬೇರೆಯವರು ಹ್ಯಾಕ್ ಮಾಡಿ ಓದುವ ಸಾಧ್ಯತೆಯಿರುತ್ತದೆ. ಅಂದರೆ ಅವುಗಳನ್ನು ಕಳುಹಿಸುವ ವ್ಯವಸ್ಥೆಯು ಶೇಕಡಾ ನೂರರಷ್ಟು ಸುರಕ್ಷಿತವಾಗಿರುವುದಿಲ್ಲ. ಇನ್ನೊಂದು ರೀತಿಯಲ್ಲಿ ನಿಮಗೆ ಮೆಸೇಜಿಂಗ್ ಸರ್ವಿಸ್ ನೀಡುವ ಕಂಪನಿಯೇ ನಿಮ್ಮ ಮೆಸೇಜುಗಳನ್ನು ಓದುವ ಸಾಧ್ಯತೆಯಿರುತ್ತದೆ. ಇನ್ನು ಕೆಲವೊಮ್ಮೆ ಕೋರ್ಟ್ ಕೇಸ್ ಅಥವಾ ಪೊಲೀಸರು ಕೇಳಿದಾಗ ಮೆಸೇಜಿಂಗ್ ಸರ್ವಿಸ್ ನೀಡುವ ಕಂಪನಿಗಳು ನಿಮ್ಮ ಮೆಸೇಜುಗಳ ಮಾಹಿತಿಯನ್ನು ಅವರಿಗೆ ನೀಡುವ ಸಾಧ್ಯತೆಯಿರುತ್ತದೆ. ಹೀಗಿರುವಾಗ ಎನ್​ಕ್ರಿಪ್ಟ್ ಮಾಡಲಾದ ಮೆಸೇಜುಗಳನ್ನು ಕಳುಹಿಸಿದವರು ಮತ್ತು ಅದನ್ನು ಸ್ವೀಕರಿಸಿದವರು ಮಾತ್ರ ಓದಲು ಸಾಧ್ಯ.

ಟ್ವಿಟರ್​ನ ಹೊಸ ಎನ್​ಕ್ರಿಪ್ಷನ್ ಮಾದರಿ ಎಷ್ಟು ಗಟ್ಟಿಯಾಗಿದೆ? : ಅಷ್ಟೊಂದು ಬಲವಾಗಿಲ್ಲ. ಸಿಗ್ನಲ್ ಮತ್ತು ಪ್ರೊಟಾನ್ ಮೇಲ್ ನಂಥ ಕಂಪನಿಗಳು ಅನುಸರಿಸುವ ಎನ್​ಕ್ರಿಪ್ಷನ್ ಮಾದರಿಯನ್ನು ಅತ್ಯಂತ ಬಲವಾದ ಎನ್​ಕ್ರಿಪ್ಷನ್ ಎಂದು ಪರಿಗಣಿಸಲಾಗುತ್ತದೆ. ಈ ಎನ್​ಕ್ರಿಪ್ಷನ್ ಎಷ್ಟು ಸುರಕ್ಷಿತವಾಗಿರುತ್ತದೆ ಎಂದರೆ ಸ್ವತಃ ಕಂಪನಿಯೇ ಅವುಗಳನ್ನು ಓದಲು ಸಾಧ್ಯವಿಲ್ಲ. ಟ್ವಿಟರ್​ನ ತಂತ್ರಜ್ಞಾನ ಸದ್ಯಕ್ಕೆ ಈ ಮಟ್ಟದಲ್ಲಿ ಇಲ್ಲ. ಈಗಿನ ಸ್ಥಿತಿಯಲ್ಲಿ ಟ್ವಿಟರ್​ನಲ್ಲಿ ಕಳುಹಿಸಲಾಗುವ ಮೆಸೇಜುಗಳನ್ನು ಮಧ್ಯದಲ್ಲಿರುವ ವ್ಯಕ್ತಿ ಅಂದರೆ man-in-the-middle ಮೆಸೇಜುಗಳನ್ನು ಹ್ಯಾಕ್ ಮಾಡಬಹುದು, ಅವುಗಳನ್ನು ಓದಬಹುದು ಹಾಗೂ ಕೆಲವೊಮ್ಮೆ ಅವನ್ನು ಬದಲಾಯಿಸಬಹುದು. ನಿಜ ಹೇಳಬೇಕೆಂದರೆ ಸ್ವತಃ ಟ್ವಿಟರ್​ ಇದೆಲ್ಲವನ್ನು ಮಾಡಬಹುದು. ನನ್ನ ತಲೆಗೆ ಗನ್ ಇಟ್ಟರೂ ನಾನು ನಿಮ್ಮ ಡೈರೆಕ್ಟ್​ ಮೆಸೇಜುಗಳನ್ನು ಓದಲು ಸಾಧ್ಯವಾಗದು ಎಂದು ಮಸ್ಕ್ ಮಂಗಳವಾರ ಟ್ವೀಟ್ ಮಾಡಿದ್ದರು. ಆದರೆ ಟ್ವಿಟರ್ ಇನ್ನೂ ಆ ಮಟ್ಟದಲ್ಲಿ ಇಲ್ಲ.

ನ್ಯೂನತೆಗಳು ಏನಿವೆ? : ಹೌದು... ನ್ಯೂನತೆಗಳಿವೆ. ಉದಾಹರಣೆಗೆ, ಟ್ವಿಟರ್​ನ ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳನ್ನು ಇನ್ನೊಬ್ಬ ವ್ಯಕ್ತಿಗೆ ಮಾತ್ರ ಕಳುಹಿಸಬಹುದು. ಟ್ವಿಟರ್ ಶೀಘ್ರದಲ್ಲೇ ಗುಂಪುಗಳಿಗೂ ಎನ್‌ಕ್ರಿಪ್ಶನ್ ಮೆಸೇಜಿಂಗ್ ಸೌಲಭ್ಯವನ್ನು ವಿಸ್ತರಿಸಲಿದೆ ಎಂದು ಹೇಳಿದೆ. ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳು ಪಠ್ಯ ಮತ್ತು ಲಿಂಕ್‌ಗಳಿಗೆ ಸೀಮಿತವಾಗಿವೆ; ಫೋಟೋಗಳು, ವಿಡಿಯೋ ಮತ್ತು ಇತರ ಅಟ್ಯಾಚ್​ಮೆಂಟ್​ಗಳಿಗೆ ಇದು ಇನ್ನೂ ಸಕ್ರಿಯವಾಗಿಲ್ಲ.

ಇದನ್ನೂ ಓದಿ : ಪ್ರಸಕ್ತ ರಬಿ ಹಂಗಾಮಿನಲ್ಲಿ 252 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.