ETV Bharat / science-and-technology

ಮಷಿನ್​ ಲರ್ನಿಂಗ್​ ಈಗ ಅತ್ಯುನ್ನತ ಕೌಶಲ: ಡೇಟಾ ಸೈಂಟಿಸ್ಟ್​​ಗಳಿಗೆ ಹೆಚ್ಚಿದ ಬೇಡಿಕೆ!

author img

By

Published : Aug 10, 2022, 7:07 AM IST

Updated : Dec 1, 2022, 3:58 PM IST

ದೇಶದ ಶೇ.84 ವೃತ್ತಿಪರರಿಗೆ ಈ ಅವಕಾಶಗಳು ಹೇರಳವಾಗಿ ದೊರೆಯುತ್ತಿದೆ. ಯಂತ್ರ ಕಲಿಕೆ (ಮಷಿನ್​ ಲರ್ನಿಂಗ್​​) ದತ್ತಾಂಶ ವಿಜ್ಞಾನ ವೃತ್ತಿಪರರಿಗಾಗಿ ನೇಮಕಾತಿದಾರರು ತಡಕಾಡುತ್ತಿದ್ದು, ಎಂಎಲ್​​​​​​ ಕೋರ್ಸ್​ ಮಾಡಿದವರಿಗೆ ಈಗ ಭಾರೀ ಬೇಡಿಕೆ ಸೃಷ್ಟಿಯಾಗಿದೆ ಎಂದು ವರದಿಯೊಂದು ಹೇಳುತ್ತಿದೆ.

Machine Learning top skill-set for data scientist jobs in India: Report
ಮಷಿನ್​ ಲರ್ನಿಂಗ್​ಗೆ ಈಗ ಅತ್ಯುನ್ನತ ಕೌಶಲ: ಡೇಟಾ ಸೈಂಟಿಸ್ಟ್​​ಗಳಿಗೆ ಹೆಚ್ಚಿದ ಬೇಡಿಕೆ!

ನವದೆಹಲಿ: ತಂತ್ರಜ್ಞಾನ ಬೆಳೆದಂತೆಲ್ಲ ಬದಲಾವಣೆಗಳು ವೇಗ ಪಡೆದುಕೊಳ್ಳುತ್ತಿವೆ. ಈಗ ವಿಶ್ವ ಕೃತಕ ಬುದ್ಧಿಮತ್ತೆ ಮತ್ತು ಮಷಿನ್​ ಲರ್ನಿಂಗ್​ ಅಂದರೆ ಯಂತ್ರ ಕಲಿಕೆ ಎಂದು ಕರೆಯಲಾಗುವ ತಂತ್ರಜ್ಞಾನದ ಹಿಡಿತಕ್ಕೆ ಹೋಗುತ್ತಿದೆ. ಅದರಲ್ಲೂ ಭಾರತದಲ್ಲಿ ಈ ತಂತ್ರಜ್ಞಾನದ ಬಳಕೆ ತೀವ್ರ ವೇಗವನ್ನು ಪಡೆದುಕೊಳ್ಳುತ್ತಿದೆ.

ದೇಶದ ಶೇ.84 ವೃತ್ತಿಪರರಿಗೆ ಈ ಅವಕಾಶಗಳು ಹೇರಳವಾಗಿ ದೊರೆಯುತ್ತಿದೆ. ಯಂತ್ರ ಕಲಿಕೆ (ಮಷಿನ್​ ಲರ್ನಿಂಗ್​​) ದತ್ತಾಂಶ ವಿಜ್ಞಾನ ವೃತ್ತಿಪರರಿಗಾಗಿ ನೇಮಕಾತಿದಾರರು ತಡಕಾಡುತ್ತಿದ್ದು, ಎಂಎಲ್​​​​​​ ಕೋರ್ಸ್​ ಮಾಡಿದವರಿಗೆ ಈಗ ಭಾರೀ ಬೇಡಿಕೆ ಸೃಷ್ಟಿಯಾಗಿದೆ ಎಂದು ವರದಿಯೊಂದು ಹೇಳುತ್ತಿದೆ.

ಇದೀಗ ಎಂಸ್​​​ ಎಕ್ಸೆಲ್​ ಸೇರಿದಂತೆ ಇತರ ಪ್ರೊಗ್ರಾಮಿಂಗ್​​​​​ ಅಪ್ಲಿಕೇಷನ್​ಗಳ ಬಳಕೆಯೂ ಹೆಚ್ಚಾಗಿದೆ. ಅದರಲ್ಲೂ ಈಗೀಗ ಫೈಥಾನ್​ ಅಪ್ಲಿಕೇಷನ್​​ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದೆ. ಇದು ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚು ಬಳಸಿದ ಪ್ರೋಗ್ರಾಮಿಂಗ್ ಭಾಷೆಯಾಗಿ ಉಳಿದಿದೆ. MS Excel, Tableau ಮತ್ತು Power BI ಗಳು ಡೇಟಾ ಸೈನ್ಸ್ ವೃತ್ತಿಪರರು ಬಳಸುವ ಪ್ರಮುಖ ಮೂರು ದೃಶ್ಯೀಕರಣ ಸಾಧನಗಳಾಗಿವೆ ಎಂದು BYJU ನ ಸಮೂಹ ಕಂಪನಿಯಾದ ಗ್ರೇಟ್ ಲರ್ನಿಂಗ್‌ನ ವರದಿ ಹೇಳುತ್ತಿದೆ.

ಡಿಜಿಟಲ್​ ಡ್ರೈವನ್​ ತಂತ್ರಜ್ಞಾನ ವೃತ್ತಿಪರರಿಗೆ ಭವಿಷ್ಯದಲ್ಲಿ ಅಭಿವೃದ್ಧಿ ಹೊಂದಲು ಸಹಕಾರಿ ಆಗಲಿದೆ. ಮುಂಬರುವ ಬದಲಾವಣೆಗಳನ್ನು ಎದುರಿಸಲು ಸರಿಯಾದ ಡೇಟಾ ಸೈನ್ಸ್ ಕೌಶಲ್ಯಗಳಿಗೆ ಅಡಿಪಾಯ ಹಾಕುವುದು ಮುಖ್ಯವಾಗಲಿದೆ ಎಂದು ಗ್ರೇಟ್ ಲರ್ನಿಂಗ್‌ನ ಸಹ-ಸಂಸ್ಥಾಪಕ ಹರಿ ಕೃಷ್ಣನ್ ನಾಯರ್ ಹೇಳಿದ್ದಾರೆ. ಚಿಲ್ಲರೆ ವ್ಯಾಪಾರ, ಗ್ರಾಹಕ ಪ್ಯಾಕೇಜ್ಡ್ ಸರಕುಗಳು (CPG) ಮತ್ತು ಇ-ಕಾಮರ್ಸ್‌ನಲ್ಲಿ ವೃತ್ತಿಪರರು ಕ್ಲೌಡ್ ತಂತ್ರಜ್ಞಾನಗಳನ್ನು ಹೊಸ ಕೌಶಲ್ಯವಾಗಿ ಕಲಿಯಲು ಹೆಚ್ಚು ಜನರು ಒಲವು ತೋರುತ್ತಿದ್ದಾರೆ.

ಪ್ರೋಗ್ರಾಮಿಂಗ್ ಭಾಷೆಗಳ ಹೋಸ್ಟ್‌ಗಳಲ್ಲಿ ಶೇಕಡಾ 90 ರಷ್ಟು ಡೇಟಾ ಸೈನ್ಸ್ ವೃತ್ತಿಪರರು ಸಂಖ್ಯಾಶಾಸ್ತ್ರೀಯ ಮಾಡೆಲಿಂಗ್‌ಗಾಗಿ ಪೈಥಾನ್ ಅನ್ನು ತಮ್ಮ ಆಯ್ಕೆಯಾಗಿ ಬಳಸುತ್ತಾರೆ ಎಂದು ವರದಿ ಹೇಳಿದೆ.

ಇದನ್ನು ಓದಿ: 725.7 ಕೋಟಿಗೆ ಸಾನಂದ್ ಉತ್ಪಾದನಾ ಘಟಕ ಸ್ವಾಧೀನಕ್ಕೆ ಪಡೆದ ಟಾಟಾ ಮೋಟಾರ್ಸ್‌

Last Updated : Dec 1, 2022, 3:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.