ETV Bharat / science-and-technology

10 ಸೆಕೆಂಡುಗಳಲ್ಲಿ ಕೋವಿಡ್​ & ಫ್ಲು ಪತ್ತೆ ಮಾಡುವ ಸೆನ್ಸರ್ ಆವಿಷ್ಕಾರ

author img

By

Published : Mar 29, 2023, 1:33 PM IST

ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸಣ್ಣ ಜ್ವರ ಕೋವಿಡ್ ಆಗಿದೆಯಾ ಅಥವಾ ಸಾಮಾನ್ಯ ನೆಗಡಿಯ ಜ್ವರವಾಗಿದೆಯಾ ಎಂಬುದು ತಿಳಿಯದೆ ಕೆಲವೊಮ್ಮೆ ಗೊಂದಲವಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ನಿಮಗೆ ಸಹಾಯ ಮಾಡಲು ಕೋವಿಡ್ ಪತ್ತೆ ಮಾಡುವ ಅತ್ಯಂತ ತೆಳುವಾದ ಕೋವಿಡ್ ಸೆನ್ಸರ್ ಒಂದನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ.

10 ಸೆಕೆಂಡುಗಳಲ್ಲಿ ಕೋವಿಡ್​ & ಫ್ಲು ಪತ್ತೆ ಮಾಡುವ ಸೆನ್ಸರ್ ಆವಿಷ್ಕಾರ
10 ಸೆಕೆಂಡುಗಳಲ್ಲಿ ಕೋವಿಡ್​ & ಫ್ಲು ಪತ್ತೆ ಮಾಡುವ ಸೆನ್ಸರ್ ಆವಿಷ್ಕಾರ

ನ್ಯೂಯಾರ್ಕ್ : ಕೆಮ್ಮು, ನೆಗಡಿ, ಗಂಟಲು ನೋವು ಕಾಣಿಸಿಕೊಂಡಿದೆಯಾ? ಇದು ಕೋವಿಡ್ -19 ಅಥವಾ ಸಾಮಾನ್ಯ ಜ್ವರವಾ ಎಂಬುದು ತಿಳಿಯದೆ ಗೊಂದಲಕ್ಕೀಡಾಗಿರುವಿರಾ? ಹಾಗಾದ್ರೆ ಚಿಂತೆ ಬಿಡಿ.. ಈಗ ಕೋವಿಡ್ ಹಾಗೂ ಸಾಮಾನ್ಯ ನೆಗಡಿಯನ್ನು ಕಂಡುಹಿಡಿಯಲು ಅತ್ಯಂತ ತೆಳುವಾಗಿರುವ ಸೆನ್ಸರ್​ ಒಂದನ್ನು ಆವಿಷ್ಕರಿಸಲಾಗಿದೆ. ಹೊಸ ಅಲ್ಟ್ರಾ ತೆಳುವಾದ ಸೆನ್ಸರ್ (ultra-thin sensor) ಕೇವಲ 10 ಸೆಕೆಂಡುಗಳಲ್ಲಿ ನಿಮಗೆ ಬಂದಿರುವುದು ಕೋವಿಡ್-19 ಅಥವಾ ಸಾಮಾನ್ಯ ಜ್ವರವಾ ಎಂಬುದನ್ನು ಪತ್ತೆ ಮಾಡಿ ತಿಳಿಸಬಲ್ಲದು.

ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಕೋವಿಡ್ -19 ಮತ್ತು ಜ್ವರಕ್ಕೆ ಕಾರಣವಾಗುವ ವೈರಸ್‌ಗಳ ಉಪಸ್ಥಿತಿಯನ್ನು ಏಕಕಾಲದಲ್ಲಿ ಪತ್ತೆಹಚ್ಚುವ ಸಾಧನವನ್ನು ನಿರ್ಮಿಸಲು ಏಕ-ಪರಮಾಣು-ದಪ್ಪ ನ್ಯಾನೊಮೆಟೀರಿಯಲ್ (single-atom-thick nanomaterial) ಅನ್ನು ಬಳಸಿದ್ದಾರೆ. ಜ್ವರ ಎಷ್ಟೇ ದಣ್ಣ ಪ್ರಮಾಣದಲ್ಲಿದ್ದರೂ ಇದು ಅತ್ಯಂತ ತ್ವರಿತವಾಗಿ ಅದು ಎಂಥ ಜ್ವರ ಎಂಬುದನ್ನು ಕಂಡು ಹಿಡಿಯುತ್ತದೆ.

ವಿಜ್ಞಾನಿಗಳು ಅಮೆರಿಕದಲ್ಲಿ ನಡೆಯುತ್ತಿರುವ ಅಮೇರಿಕನ್ ಕೆಮಿಕಲ್ ಸೊಸೈಟಿಯ (ACS) ಚಳಿಗಾಲದ ಸಭೆಯಲ್ಲಿ ತಮ್ಮ ಫಲಿತಾಂಶಗಳನ್ನು ಪ್ರಸ್ತುತಪಡಿಸಿದ್ದಾರೆ. ಜ್ವರ ಮತ್ತು ಕೋವಿಡ್ -19 ಎರಡರ ಲಕ್ಷಣಗಳು ಗಣನೀಯವಾಗಿ ಒಂದೇ ರೀತಿಯಾಗಿರುತ್ತವೆ. ಅವುಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟಕರವಾಗಿದೆ ಎಂದು ವಿಶ್ವವಿದ್ಯಾಲಯದ ದೇಜಿ ಅಕಿನ್ವಾಂಡೆ ಹೇಳಿದರು.

ಈ ಎರಡೂ ವೈರಸ್‌ಗಳು ಹಿಂದಿನ ಚಳಿಗಾಲದ ಆರಂಭದಲ್ಲಿ ಆದಂತೆ ಒಟ್ಟಿಗೆ ಹರಡುತ್ತಿರುವಾಗ, ನಿಮಗೆ ಬಂದಿರುವುದು ಕೋವಿಡ್ ಅಥವಾ ಫ್ಲು ಎಂಬುದನ್ನು ಕಂಡುಹಿಡಿಯಬೇಕಾದರೆ ಈ ಸೆನ್ಸರ್ ಬಹಳೇ ಉಪಯುಕ್ತವಾಗುತ್ತದೆ ಎಂದು ಅವರು ಹೇಳಿದರು. ಸದ್ಯ ತಾವು ಹಾಗೂ ತಮ್ಮ ತಂಡದವರು ಸೇರಿಕೊಂಡು ತಯಾರಿಸುತ್ತಿರುವ ಈ ಉಪಕರಣವನ್ನು ಮುಂದಿನ ದಿನಗಳಲ್ಲಿ ಇತರ ಸೋಂಕುಗಳನ್ನು ಕಂಡು ಹಿಡಿಯುವ ರೀತಿಯಲ್ಲಿಯೂ ಅಭಿವೃದ್ಧಿಪಡಿಸಬಹುದು ಎಂದು ಅಕಿನ್ವಾಂಡೆ ಹೇಳಿದ್ದಾರೆ.

ತಂಡವು ಕೋವಿಡ್ -19 ಮತ್ತು ಫ್ಲೂ ಸೆನ್ಸರ್ ಅನ್ನು ಗ್ರ್ಯಾಫೀನ್ ಬಳಸಿ ನಿರ್ಮಿಸಿದೆ. ಇದರಲ್ಲಿ ಇಂಗಾಲದ ಪರಮಾಣುಗಳ ಒಂದು ಪದರವನ್ನು ಷಡ್ಭುಜೀಯ ಲ್ಯಾಟಿಸ್ ಮಾದರಿಯಲ್ಲಿ ಜೋಡಿಸಲಾಗಿದೆ. ಇದು ವಿಪರೀತ ತೆಳುವಾಗಿರುವುದರಿಂದ ಇದರ ಗ್ರ್ಯಾಫೀನ್ ತನ್ನ ಪರಿಸರದಲ್ಲಿನ ಯಾವುದೇ ವಿದ್ಯುತ್ ಬದಲಾವಣೆಗಳಿಗೆ ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಸೋಂಕು ಸೆನ್ಸರ್ ನಿರ್ಮಿಸಲು, ಸಂಶೋಧಕರು ಗ್ರ್ಯಾಫೀನ್ ಅನ್ನು ವೈರಲ್ ಪ್ರೋಟೀನ್‌ನ ಉಪಸ್ಥಿತಿಗೆ ಪ್ರತಿಕ್ರಿಯಿಸುವಂತೆ ಮಾಡಬೇಕಾಗಿತ್ತು. ಹಾಗೆ ಮಾಡಲು, ಅವರು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಳಸಿದರು. ಇದು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ.

ಸಂಶೋಧಕರು ನಂತರ ಕೋವಿಡ್​-19ಗೆ ಕಾರಣವಾಗುವ SARS-CoV-2 ವಿರುದ್ಧ ಪ್ರತಿಕಾಯಗಳನ್ನು ಲಿಂಕ್ ಮಾಡಿದರು. ನಂತರ ಪ್ರತಿಕಾಯಗಳನ್ನು ಫ್ಲೂ ವೈರಸ್ ವಿರುದ್ಧ ಗ್ರ್ಯಾಫೀನ್‌ಗೆ ಲಿಂಕ್ ಮಾಡಿದರು. ಸೋಂಕಿತ ವ್ಯಕ್ತಿಯಿಂದ ಪಡೆದ ಮಾದರಿಯನ್ನು ಸೆನ್ಸರ್​ನಲ್ಲಿ ಇರಿಸಿದಾಗ, ಈ ಪ್ರತಿಕಾಯಗಳು ತಮ್ಮ ಟಾರ್ಗೆಟ್ ಪ್ರೋಟೀನ್‌ಗಳಿಗೆ ಅಂಟಿಕೊಳ್ಳುತ್ತವೆ. ಇದು ವಿದ್ಯುತ್ ಪ್ರವಾಹದಲ್ಲಿ ಬದಲಾವಣೆಯನ್ನು ಪ್ರೇರೇಪಿಸುತ್ತದೆ.

ಲಾಲಾರಸವನ್ನು ಹೋಲುವ ಉದ್ದೇಶದಿಂದ ದ್ರವದಲ್ಲಿ ಹಾಕಲಾದ ಸಕ್ರಿಯ ಜ್ವರ ಅಥವಾ SARS-CoV-2 ವೈರಸ್‌ಗಳಿಂದ ಪ್ರೋಟೀನ್‌ಗಳನ್ನು ಬಳಸಿಕೊಂಡು ಅವರು ಸೆನ್ಸರ್​ ಅನ್ನು ಪರೀಕ್ಷಿಸಿದರು. ಈ ಸೆನ್ಸರ್​ ಪ್ರೋಟೀನ್‌ಗಳ ಉಪಸ್ಥಿತಿಯನ್ನು ಪತ್ತೆಹಚ್ಚಲು ಮಾತ್ರವಲ್ಲದೆ, ಅವುಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವಾಗಲೂ ಅದನ್ನು ಮಾಡಬಹುದು ಎಂದು ತಿಳಿದು ಬಂದಿದೆ. ಈ ಸೂಕ್ಷ್ಮತೆಯು ಉಸಿರಾಟದಲ್ಲಿ ಕಂಡುಬರುವ ಹೆಚ್ಚು ವಿರಳವಾದ ವೈರಲ್ ಕಣಗಳನ್ನು ಪತ್ತೆಹಚ್ಚಲು ಸೆನ್ಸರ್​ ಅನ್ನು ಬಳಸಬಹುದೆಂದು ಸೂಚಿಸಿದೆ ಎಂದು ಅಕಿನ್ವಾಂಡೆ ಹೇಳಿದರು. ಸೆನ್ಸರ್ ತ್ವರಿತವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮಾದರಿಯನ್ನು ಒದಗಿಸಿದ ಸುಮಾರು 10 ಸೆಕೆಂಡುಗಳಲ್ಲಿ ಫಲಿತಾಂಶಗಳನ್ನು ಹಿಂದಿರುಗಿಸುತ್ತದೆ ಎಂದು ಅವರು ಹೇಳಿದರು.

ಹೋಲಿಕೆ ಮಾಡುವುದಾದರೆ- ಸಾಂಪ್ರದಾಯಿಕ ಕೋವಿಡ್-19 ಪರೀಕ್ಷೆಗಳು ಸಂಪೂರ್ಣವಾಗಲು ಹಲವಾರು ನಿಮಿಷಗಳು ಅಥವಾ ಗಂಟೆಗಳನ್ನು ತೆಗೆದುಕೊಳ್ಳಬಹುದು ಮತ್ತು ಇತ್ತೀಚೆಗೆ ಅಮೆರಿಕ ಫುಡ್ ಆ್ಯಂಡ ಆ್ಯಡ್ಮಿನಿಸ್ಟ್ರೇಶನ್ ವಿಭಾಗ ಅಧಿಕೃತಗೊಳಿಸಿದ ಡ್ಯುಯಲ್ ಕೋವಿಡ್ ಮತ್ತು ಫ್ಲೂ ಪರೀಕ್ಷೆಯು ಫಲಿತಾಂಶಗಳನ್ನು ನೀಡಲು ಸುಮಾರು ಅರ್ಧ ಗಂಟೆ ತೆಗೆದುಕೊಳ್ಳುತ್ತದೆ. ಅಕಿನ್‌ವಾಂಡೆ ಮತ್ತು ಅವರ ತಂಡವು ಈಗ ತಾವು ಕಂಡು ಹಿಡಿದ ಸೆನ್ಸರ್​ನ ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸಲು ಕೆಲಸ ಮಾಡುತ್ತಿದ್ದಾರೆ. ಈಗ ಅವರು ಓಮಿಕ್ರಾನ್ ಮತ್ತು ಡೆಲ್ಟಾದಂತಹ SARS-CoV-2 ರೂಪಾಂತರಗಳನ್ನು ಪರೀಕ್ಷಿಸಲು ಹೊಸ ಸೆನ್ಸರ್​ ಒಂದನ್ನು ವಿನ್ಯಾಸಗೊಳಿಸುತ್ತಿದ್ದಾರೆ.

ಇದನ್ನೂ ಓದಿ : ಕೋವಿಡ್​ನಲ್ಲಿ ತುರ್ತು ಪೆರೋಲ್​ ಪಡೆದಿದ್ದ ಕೈದಿಗಳಿಗೆ ಶರಣಾಗುವಂತೆ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.