ETV Bharat / science-and-technology

Chandrayaan-3 Mission: ಇಸ್ರೋ ಸಂಸ್ಥೆಗೆ ಲಭಿಸಿದ 'ಚಂದಮಾಮ'ನ ನೂತನ ಛಾಯಾಚಿತ್ರಗಳು..

author img

By

Published : Aug 21, 2023, 10:07 AM IST

Updated : Aug 21, 2023, 10:35 AM IST

chandrayaan-3: ಚಂದ್ರಯಾನ-3 ನೌಕೆಯನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ದಿನಾಂಕ, ಮುಹೂರ್ತವನ್ನು ನಿನ್ನೆ (ಭಾನುವಾರ) ಇಸ್ರೋ ಅಧಿಕೃತವಾಗಿ ಘೋಷಿಸಿತ್ತು. ಇದರ ಬೆನ್ನಲ್ಲೆ ಇಂದು (ಸೋಮವಾರ) ಇಸ್ರೋ ಸಂಸ್ಥೆಗೆ ಚಂದ್ರನ ದೂರದ ಛಾಯಾಚಿತ್ರಗಳು ತಲುಪಿವೆ.

Chandrayaan-3 Mission
Chandrayaan-3 Mission: ಇಸ್ರೋ ಸಂಸ್ಥೆಗೆ ಲಭಿಸಿದ 'ಚಂದ್ರ ಮಾಮಾ'ನ ಛಾಯಾಚಿತ್ರಗಳು...

ಬೆಂಗಳೂರು: ಭಾರತ ದೇಶ ಸೇರಿದಂತೆ ಪ್ರಪಂಚವೇ ತುದಿಗಾಲ ಮೇಲೆ ನಿಂತು ಕಾಯುತ್ತಿರುವ ಚಂದ್ರಯಾನ-3 ನೌಕೆಯ 'ವಿಕ್ರಮ್​' ಲ್ಯಾಂಡರ್ ​ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾದಿಂದ ಚಂದ್ರನ ದೂರದ ಪ್ರದೇಶದ ಚಿತ್ರಗಳನ್ನು ಸೆರೆಹಿಡಿದಿದೆ. 'ವಿಕ್ರಮ್​'​ನಿಂದ ಇಸ್ರೋ ಸಂಸ್ಥೆಗೆ ಬಂದು ತಲುಪಿರುವ ಚಂದ್ರನ ಈ ಛಾಯಾಚಿತ್ರಗಳು ವಿಜ್ಞಾನಿಗಳನ್ನು ಬೆರಗುಗೊಳಿಸಿವೆ.

ಚಂದ್ರನ ಪರಿಶೋಧನೆಯತ್ತ ಮಹತ್ವದ ದಾಪುಗಾಲು ಇರಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ವಿಕ್ರಮ್ ಲ್ಯಾಂಡರ್‌, ಗಮನಸೆಳೆಯುವಂತಹ ಹೊಸದಾಗಿ ಸೆರೆಹಿಡಿಯಲಾದ ಚಂದ್ರನ ಚಿತ್ರಗಳ ಸರಣಿಯನ್ನು ಹಂಚಿಕೊಂಡಿದೆ. ಈ ಚಿತ್ರಗಳನ್ನು ಚಂದ್ರನ ಮೇಲ್ಮೈಯಲ್ಲಿ ಸ್ಪರ್ಶಿಸುವ ನಿರೀಕ್ಷಿತ ಕ್ಷಣಕ್ಕೆ ಕೇವಲ ಎರಡು ದಿನಗಳ ಮೊದಲು ಅನಾವರಣವಾಗಿದೆ. ಇದದಿಂದ ಜಾಗತಿಕ ವೈಜ್ಞಾನಿಕ ಸಮುದಾಯದಲ್ಲಿ ಮತ್ತಷ್ಟು ಉತ್ಸಾಹ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾ (LHDAC) ಮೂಲಕ ಪಡೆದ ಚಿತ್ರಗಳು, ಚಂದ್ರನ ದೂರದ ಪ್ರದೇಶದ ಎದ್ದುಕಾಣುವ ಚಿತ್ರಣವನ್ನು ಒದಗಿಸುತ್ತವೆ. ISRO ಅಡಿ ಬಾಹ್ಯಾಕಾಶ ಅಪ್ಲಿಕೇಶನ್‌ಗಳ ಕೇಂದ್ರದಿಂದ (ಎಸ್​ಎಸಿ) ಅಭಿವೃದ್ಧಿಪಡಿಸಲಾಗಿದೆ. ಎಲ್ಎಚ್​ಡಿ​ಎಸಿ ವಿಕ್ರಮ್ ಲ್ಯಾಂಡರ್‌ ಇಳಿಯುವಿಕೆಯ ಹಂತದಲ್ಲಿ ಅಪಾಯಕಾರಿ ಬಂಡೆಗಳು ಅಥವಾ ಆಳವಾದ ಬಿರುಕುಗಳಿಲ್ಲದ ಸುರಕ್ಷಿತ ಲ್ಯಾಂಡಿಂಗ್ ಸೈಟ್ ಅನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ತಾಂತ್ರಿಕ ಕೌಶಲ್ಯವನ್ನು ಎತ್ತಿ ತೋರಿಸುವ ಈ ಮಾಹಿತಿಯನ್ನು ಇಸ್ರೋ ಸಂಸ್ಥೆ ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

''ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾ (LHDAC)ಯಿಂದ ಸೆರೆಹಿಡಿಯಲಾದ ಚಂದ್ರನ ದೂರದ ಪ್ರದೇಶದ ಚಿತ್ರಗಳು ಇಲ್ಲಿವೆ. ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಪತ್ತೆಹಚ್ಚಲು ಸಹಾಯ ಮಾಡುವ ಈ ಕ್ಯಾಮೆರಾ - ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಪ್ರದೇಶದಲ್ಲಿ ಇಳಿಸಲು ಇಸ್ರೋನಿಂದ ಎಸ್​ಎಸಿ ಅನ್ನು ಅಭಿವೃದ್ಧಿಪಡಿಸಲಾಗಿದೆ''ಎಂದು ಸಂಸ್ಥೆ ಟ್ವೀಟ್​ ಮಾಡಿದೆ.

ಚಂದ್ರಯಾನ-3 ನೌಕೆಯ 'ವಿಕ್ರಮ್​' ಲ್ಯಾಂಡಿಂಗ್​​ನ ದಿನ ಹಾಗೂ ಸಮಯ ನಿಗದಿ: ದೇಶ ಸೇರಿದಂತೆ ಇಡೀ ವಿಶ್ವವೇ ತುದಿಗಾಲ ಮೇಲೆ ನಿಂತು ಕಾತರದಿಂದ ಕಾಯುತ್ತಿರುವ ಚಂದ್ರಯಾನ-3 ನೌಕೆಯ ಲ್ಯಾಂಡಿಂಗ್​​ನ ದಿನ ಹಾಗೂ ಸಮಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧಿಕೃತವಾಗಿ ನಿನ್ನೆ (ಭಾನುವಾರ) ಪ್ರಕಟಿಸಿತ್ತು. ಇನ್ನೂ ಎರಡು ದಿನಗಳಲ್ಲಿ ಭಾರತ ಐತಿಹಾಸಿಕ ದಾಖಲೆ ನಿರ್ಮಿಸಲು ಸಜ್ಜಾಗಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಗುರುತುಪಡಿಸಿದ ಸ್ಥಳದಲ್ಲಿ ಚಂದ್ರಯಾನ-3 ನೌಕೆಯ ವಿಕ್ರಮ್​ ಲ್ಯಾಂಡರ್​ ಆಗಸ್ಟ್ 23 ಸಂಜೆ 6.04ಕ್ಕೆ ಸರಿಯಾಗಿ ಇಳಿಯಲಿದೆ ಎಂದು ಇಸ್ರೋ ಘೋಷಿಸಿತ್ತು. ಕೋಟ್ಯಂತರ ಭಾರತೀಯರ ಕನಸು ನನಸಾಗಿಸುವಲ್ಲಿ ಈ ಚಂದ್ರಯಾನ-3 ನೌಕೆ ಸಾಧಿಸಿದ ವಿಶ್ವದ ನಾಲ್ಕನೇ ಹಾಗೂ ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.

"ಚಂದ್ರಯಾನ-3 ಆಗಸ್ಟ್ 23, 2023 ರಂದು 06.04ಕ್ಕೆ ಚಂದ್ರನ ಮೇಲೆ ವಿಕ್ರಮ್​ ಲ್ಯಾಂಡರ್​ ಸಾಫ್ಟ್​ ಆಗಿ ಇಳಿಯಲಿದೆ. ಇಷ್ಟು ದಿನಗಳ ಪ್ರಯಾಣಕ್ಕೆ ಶುಭ ಕೋರಿದ ಹಾಗೂ ಸಕಾರಾತ್ಮಕ ಮನೋಭಾವಕ್ಕೆ ಧನ್ಯವಾದ. ಮುಂದಿನ ಪ್ರಯಾಣವನ್ನು ಒಟ್ಟಾಗಿ ಮುಂದುವರಿಸೋಣ" ಎಂದು ಇಸ್ರೋ ಟ್ವೀಟ್​ ಮಾಡಿತ್ತು. ಜೊತೆಗೆ ಈ ಸಾಹಸವನ್ನು ಇಸ್ರೋದ ವೆಬ್‌ಸೈಟ್, ಅದರ ಯೂಟ್ಯೂಬ್​ ಚಾನಲ್, ಫೇಸ್​ಬುಕ್​ ಹಾಗೂ ಡಿಡಿ ನ್ಯಾಷನಲ್ ಚಾನಲ್​ನಲ್ಲಿ 05.27ರಿಂದ ನೇರಪ್ರಸಾರ ಆಗಲಿದೆ ಎಂದು ಹೇಳಿದೆ.

ಇದನ್ನೂ ಓದಿ: "ಚಂದ್ರಯಾನ-3‘‘ ವಿಕ್ರಮ್​ನ ಯಶಸ್ವಿ ಲ್ಯಾಂಡಿಂಗ್​​​​ಗಾಗಿ ಆಗ್ರಾದಲ್ಲಿ ಹೋಮ- ಹವನ, ವಿಶೇಷ ಪೂಜೆ

Last Updated : Aug 21, 2023, 10:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.