ETV Bharat / bharat

"ಚಂದ್ರಯಾನ-3‘‘ ವಿಕ್ರಮ್​ನ ಯಶಸ್ವಿ ಲ್ಯಾಂಡಿಂಗ್​​​​ಗಾಗಿ ಆಗ್ರಾದಲ್ಲಿ ಹೋಮ- ಹವನ, ವಿಶೇಷ ಪೂಜೆ

author img

By

Published : Aug 21, 2023, 9:51 AM IST

Updated : Aug 21, 2023, 10:01 AM IST

Special prayers for succes of Chandrayaan-3 mission: ಆಗ್ರಾದಲ್ಲಿ ಚಂದ್ರನ ಮೇಲ್ಮೈನಲ್ಲಿ ವಿಕ್ರಮ್​ ಲ್ಯಾಂಡರ್​ ಯಶಸ್ವಿಯಾಗಿ ಲ್ಯಾಂಡಿಂಗ್​ ಆಗಲಿ ಎಂದು ಆಶಿಸಿ ವಿಶೇಷ ಪೂಜೆ ನಡೆಸಲಾಗಿದೆ.

ಚಂದ್ರಯಾನ-3 ವಿಕ್ರಮ್ ಯಶಸ್ವಿಗೆ ಪೂಜೆ
ಚಂದ್ರಯಾನ-3 ವಿಕ್ರಮ್ ಯಶಸ್ವಿಗೆ ಪೂಜೆ

ಆಗ್ರಾ(ಉತ್ತರ ಪ್ರದೇಶ): ಬುಧವಾರ ಭಾರತದ ಚಂದ್ರಯಾನ-3 ನೌಕೆಯು ಚಂದ್ರನಂಗಳದಲ್ಲಿ ಲ್ಯಾಂಡಾಗಲಿದೆ. 'ವಿಕ್ರಮ್​'ನ ಯಶಸ್ವಿಗಾಗಿ ಆಗ್ರಾದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಮಾಡಲಾಗಿದೆ. ಚಂದ್ರನ ಮೇಲ್ಮೈನಲ್ಲಿ ವಿಕ್ರಮ್​ ಲ್ಯಾಂಡರ್​ ಯಶಸ್ವಿಯಾಗಿ ಚಂದ್ರನ ಅಂಗಳದದಲ್ಲಿ ಪಾದಸ್ಪರ್ಶ ಮಾಡಲಿ ಎಂದು ಪವಿತ್ರ ಯಮುನಾ ನದಿಯ ಆರ್ಶೀವಾದ ಪಡೆಯುವ ಮೂಲಕ ಪ್ರಾರ್ಥನೆ ಪೂಜೆಗಳನ್ನು ನಡೆಸಲಾಗಿದೆ. ಯಮುನಾ ನದಿಯಲ್ಲಿ ಅಭಿಮಾನಿಗಳು ಭಾನುವಾರ ವಿಶೇಷ "ಹವನ ಪೂಜೆ" ಮಾಡಿದ್ದಾರೆ.

ಪೂಜೆ ಬಳಿಕ ಪ್ರಾರ್ಥನ ಕಾರ್ಯಕ್ರಮ ಆಯೋಜಿಸಿದ್ದ ರಾಹುಲ್​ ರಾಜ್​ ಮಾತನಾಡಿ, " ಕಳೆದ ಬಾರಿ ನಾವು ಚಂದ್ರಯಾನದಲ್ಲಿ ವಿಫಲರಾಗಿದ್ದೇವೆ. ಆದರೆ, ಈ ಬಾರಿ ಆಗಸ್ಟ್​ 23 ರಂದು ಭಾರತವು ಯಶಸ್ವಿಯಾಗಬೇಕು. ಈ ಯಶಸ್ವಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಪರಾಕ್ರಮದೊಂದಿಗೆ ನಮ್ಮ ದೈವಿಕ ಶಕ್ತಿಗಳು ಬೇಕಾಗುತ್ತವೆ. ಆ ಕಾರಣಕ್ಕಾಗಿ ನಾವು ಯಾವ ಅಡೆತಡೆಯಾಗದಂತೆ ಹವನ ಪೂಜೆ ಮಾಡಿದ್ದೇವೆ" ಎಂದಿದ್ದಾರೆ.

ಇನ್ನು ಯಮುನಾ ನದಿಯ ಉದ್ದಕ್ಕೂ ಇರುವಂತಹ ಎತ್ಮೌದ್ದೌಲಾದ ವ್ಯೂ ಪಾಯಿಂಟ್​ ಪಾರ್ಕ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಾರ್ಥನೆ ಮತ್ತು ಪೂಜೆಯಲ್ಲಿ ಭಾಗವಹಿಸಿದರು. ಪೂಜಾ ನಂತರ ರಿವರ್ ಕನೆಕ್ಟ್ ಪ್ರಚಾರಕ ದೇವಶಿಶ್ ಭಟ್ಟಾಚಾರ್ಯ ಅವರು, ಈ ಪೂಜೆಯಿಂದ ನಮ್ಮ ದೇವರು ಸಂತೋಷ ಪಡುತ್ತಾರೆ. ಚಂದ್ರನ ಮೇಲ್ಮೈನಲ್ಲಿ ವಿಕ್ರಮ್​ ಸುರಕ್ಷಿತವಾಗಿ ಇಳಿಯಲು ಅನುಕೂಲಕರವಾದ ಸ್ಥಿತಿಯನ್ನು ದೇವರು ಸೃಷ್ಟಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ಭಾರತವು ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸದಾಗಿ ಛಾಪು ಮೂಡಿಸಲು ನಾವೆಲ್ಲರು ಬಯಸುತ್ತೇವೆ ಎಂದು ಚಂದ್ರಯಾನ ಯಶಸ್ವಿಯಾಗುವ ಕುರಿತು ಉತ್ಸಾಹ ವ್ಯಕ್ತಪಡಿಸಿದರು.

ಹಾಗೆ, ಎಲ್ಲ ಅಡೆತಡೆಗಳನ್ನು ತೆಗೆದು ಹಾಕಲಾಗಿದೆ. ಮತ್ತು ವಿಕ್ರಮ್ ಭಾರತಕ್ಕೆ ದಾಖಲೆಯ ಸಾಧನೆ ಮಾಡಲಿದೆ ಎಂದು ವೈದಿಕ ಸೂತ್ರಂನ ಅಧ್ಯಕ್ಷ ಜ್ಯೋತಿಷಿ ಪ್ರಮೋದ್ ಗೌತಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪೂಜೆ ಆಚರಣೆಗಳ ಮೂಲಕ ಸಾಮೂಹಿಕ ಸಂಕಲ್ಪ, ವಿಶ್ವಾಸ, ಭರವಸೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತೆ ಪದ್ಮಿನಿ ಅಯ್ಯರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಆಗಸ್ಟ್ 23 ಸಂಜೆ 6.04 ಕ್ಕೆ ವಿಕ್ರಮ್​ ಲ್ಯಾಂಡ್​: ಚಂದ್ರಯಾನ-3 ನೌಕೆಯ ಲ್ಯಾಂಡಿಂಗ್​​ನ ದಿನ ಮತ್ತು ಸಮಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನಿನ್ನೆ ಅಧಿಕೃತವಾಗಿ ಪ್ರಕಟಿಸಿತ್ತು. ಇಸ್ರೋ ನೀಡಿರುವ ಮಾಹಿತಿ ಪ್ರಕಾರ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಪಡಿಸಲಾದ ಜಾಗದಲ್ಲಿ ಚಂದ್ರಯಾನ-3 ನೌಕೆಯ ಲ್ಯಾಂಡರ್​ ಆಗಸ್ಟ್ 23 ಸಂಜೆ 6.04 ನಿಮಿಷಕ್ಕೆ ಸರಿಯಾಗಿ ಇಳಿಯಲಿದೆ.​

ಇದನ್ನೂ ಓದಿ: ಆಗಸ್ಟ್​ 23, ಸಂಜೆ 6.04 ನಿಮಿಷಕ್ಕೆ ಚಂದ್ರನ ಮೇಲೆ ಇಳಿಯುವ 'ವಿಕ್ರಮ್​': ಇಸ್ರೋದಿಂದ 'ಚಂದ್ರಚುಂಬನ'ದ ಅಧಿಕೃತ ಮಾಹಿತಿ

Last Updated : Aug 21, 2023, 10:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.