ETV Bharat / international

ಮಹಿಳೆಯರ ಶಾಂತಿ, ಭದ್ರತೆಯ ದೃಷ್ಟಿಕೋನದಲ್ಲಿ ಅಮೂಲಾಗ್ರ ಬದಲಾವಣೆ ಅವಶ್ಯಕ: ವಿಶ್ವಸಂಸ್ಥೆ

author img

By

Published : Mar 8, 2023, 12:27 PM IST

ಶಾಂತಿ ನಿರ್ಮಾಣದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕುರಿತು ಹೊಸ ಗುರಿಗಳು ಮತ್ತು ಪರಿಣಾಮಕಾರಿ ಯೋಜನೆಗಳ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

A radical change in the vision of women's peace and security is necessary; United Nations
A radical change in the vision of women's peace and security is necessary; United Nations

ಮಹಿಳೆಯರ ಶಾಂತಿ ಮತ್ತು ಭದ್ರತೆಯ ಬಗ್ಗೆ ವಿಶ್ವಸಂಸ್ಥೆಯಲ್ಲಿ ಮಹತ್ವದ ನಿರ್ಣಯ ಅಂಗೀಕಾರವಾಗಿ 20 ವರ್ಷ ಕಳೆದರೂ ಮಹಿಳೆಯರ ಪರಿಸ್ಥಿತಿ ಮಾತ್ರ ಗಮನಾರ್ಹ ಸುಧಾರಣೆ ಕಂಡಿಲ್ಲ. ಮಹಿಳೆಯರು ಜಗತ್ತಿನ ವಿವಿಧ ದೇಶಗಳಲ್ಲಿ ಸಂಘರ್ಷದ ಪರಿಸ್ಥಿತಿಗೆ ಒಳಗಾಗುತ್ತಿದ್ದು, ಶಾಂತಿ ರೂಪಿಸುವ ಪ್ರಕ್ರಿಯೆಗಳಿಂದಲೂ ಅವರನ್ನು ಹೊರಗಿಡಲಾಗುತ್ತಿದೆ ಎಂದು ವಿಶ್ವಸಂಸ್ಥೆ ಮಹಿಳಾ ಕಾರ್ಯಕಾರಿ ನಿರ್ದೇಶಕಿ ಸಿಮಾ ಬಹುಸ್​ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉನ್ನತ ಮಟ್ಟದ ಚರ್ಚೂ ಕೂಟದಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಯು ಮಹಿಳೆ, ಶಾಂತಿ ಮತ್ತು ಭದ್ರತೆಯ 1325 ನಿರ್ಣಯವನ್ನು ಅಂಗೀಕರಿಸಿದೆ. ಈ ನಿರ್ಣಯ ಜಾರಿಗೆ ಬಂದು 20 ವರ್ಷ ಕಳೆದಿದೆ. ಇದರ ಅನುಷ್ಟಾನದಲ್ಲಿ ಮಹತ್ತರ ಬದಲಾವಣೆ ಮಾಡುವ ತುರ್ತು ಎದುರಾಗಿದೆ ಎಂದು ಸಲಹೆ ನೀಡಿದ್ದಾರೆ.

  • More than 20 years after #UNSCR1325, women & girls still bear the brunt of conflict & are excluded from processes that shape peace.

    We need radical change to fully leverage the Women, Peace, Security Agenda - now.

    My remarks at UN Security Council: https://t.co/gYwu4DG1S8

    — Sima Bahous (@unwomenchief) March 7, 2023 " class="align-text-top noRightClick twitterSection" data=" ">

2000ದಲ್ಲಿ ಜಾರಿಗೆ ತಂದ ಈ ನಿರ್ಣಯದ 20ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಾವಿದ್ದೇವೆ. ಈ ನಿರ್ಣಯ ಸಂಘರ್ಷ ಪರಿಹಾರ ಮತ್ತು ಶಾಂತಿ ನಿರ್ಮಾಣದಲ್ಲಿ ಮಹಿಳೆಯರಿಗೆ ಸಮಾನ ಮತ್ತು ಪೂರ್ಣ ಭಾಗವಹಿಸುವ ಹಕ್ಕು ಒದಗಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಕಳೆದೆರಡು ದಶಕಗಳಲ್ಲಿ ಲಿಂಗ ತಾರತಮ್ಯದ ವಿರುದ್ಧ ಅನೇಕ ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ಮಹಿಳೆಯ ಶಾಂತಿ ಮತ್ತು ದೌರ್ಜನ್ಯ ಎಸಗುವವರ ವಿರುದ್ಧದ ಕ್ರಮದಲ್ಲಿ ಯಾವುದೇ ಗುರುತರ ಬದಲಾವಣೆಗಳು ಕಂಡುಬಂದಿಲ್ಲ ಎಂದು ಅವರು ಒತ್ತಿ ಹೇಳಿದರು.

ಈ ನಿರ್ಣಯದ 20ನೇ ವಾರ್ಷಿಕೋತ್ಸವ ಎಂಬುದು ಸಂಭ್ರಮಾಚರಣೆಯಲ್ಲ. ಆದರೆ ಇದೊಂದು ಎಚ್ಚರಿಕೆಯ ಗಂಟೆ ಎಂದು ವಿಶ್ವಸಂಸ್ಥೆ ಮಹಿಳಾ ಮುಖ್ಯಸ್ಥರು ಹೇಳಿದ್ದು, ಮಹಿಳೆಯರ ಹಕ್ಕು ಕಸಿಯುತ್ತಿರುವ ಹಾಗು ಇತರೆ ದೌರ್ಜನ್ಯಗಳ ಕುರಿತು ಪಟ್ಟಿ ಮಾಡಿದರು. ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳನ್ನು ತಾಲಿಬಾನ್​ ಕಿತ್ತುಕೊಂಡಿದೆ. ಇಥಿಯೋಪಿಯಾದ ಟೈಗ್ರೆ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಮಯನ್ಮಾರ್​ನಲ್ಲಿ ಮಿಲಿಟರಿ ನಿಯಮಗಳನ್ನು ವಿರೋಧಿಸಿದ ಮಹಿಳೆಯರ ಮೇಲೆ ಆನ್​ಲೈನ್​ ಮೂಲಕವೂ ದೌರ್ಜನ್ಯ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಅಮೂಲಗ್ರ ಬದಲಾವಣೆ ಬೇಕು: ಮಹಿಳೆಯರ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ಶಾಂತಿ ಮತ್ತು ಭದ್ರತೆಯ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದರಿಂದ ಅವರನ್ನು ಹೊರಗಿಡಲಾಗುತ್ತಿದೆ. ಈ ದಿಕ್ಕಿನಲ್ಲಿ ಅಮೂಲಗ್ರ ಬದಲಾವಣೆ ಬೇಕಿದೆ. ಪ್ರತಿ ಸಭೆ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆ ಭಾಗವಹಿಸುವಿಕೆ ಕಡ್ಡಾಯ. ಸಂಪನ್ಮೂಲಗಳನ್ನು ಹೆಚ್ಚು ಅಗತ್ಯವಿರುವವರಿಗೆ ಮತ್ತು ಅವುಗಳನ್ನು ಹೊಂದಿಲ್ಲದ ಮಹಿಳೆಯರಿಗೆ ನೀಡಲು ನಾವು ನಮ್ಮ ವ್ಯಾಪ್ತಿ ವಿಸ್ತರಿಸಬೇಕು ಎಂದಿದ್ದಾರೆ.

ಉತ್ತಮ ಮಾರ್ಗದರ್ಶನದ ಅಗತ್ಯ: ಲಿಂಗ ಸಮಾನತೆಯನ್ನು ಸಾಧಿಸಲು ಜಾಗತಿಕ ಪ್ರಯತ್ನಗಳು ನಡೆಯಬೇಕು. ಶಾಂತಿ ನಿರ್ಮಾಣದಲ್ಲಿ ಮಹಿಳೆಯರು ಭಾಗವಹಿಸುವ ಕುರಿತು ಹೊಸ ಗುರಿಗಳು ಮತ್ತು ಪರಿಣಾಮಕಾರಿ ಯೋಜನೆಗಳ ಅಗತ್ಯ ಕಾಣುತ್ತಿದೆ. ಮಹಿಳಾ ಶಾಂತಿ ಮತ್ತು ಮಾನವೀಯ ನಿಧಿಯ ಬಳಕೆ ಮಾಡುವ ಮೂಲಕ ಯುದ್ಧಪೀಡಿತ ದೇಶಗಳಲ್ಲಿನ ಮಹಿಳಾ ಗುಂಪುಗಳಿಗೆ ಸಂಪನ್ಮೂಲಗಳ ಸಿಗುವಂತೆ ಮಾಡಬೇಕು. ಇಂತಹ ದೇಶಗಳಲ್ಲಿ ನಾಗರಿಕ ಸಮಾಜ ಮತ್ತು ಸಾಮಾಜಿಕ ಚಳುವಳಿಗಳನ್ನು ಬೆಂಬಲಿಸಲು ನಮಗೆ ತುರ್ತಾಗಿ ಉತ್ತಮ ಮಾರ್ಗಗಳ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮನುಸ್ಮೃತಿ ಸುಟ್ಟು ಅದರ ಕಿಡಿಯಲ್ಲಿ ಸಿಗರೇಟ್​ ಹೊತ್ತಿಸಿಕೊಂಡ ಯುವತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.