ETV Bharat / international

ಫೈಲಟ್​ಗಳ ನಡುವೆ ಇದ್ದ ಗೊಂದಲವೇ 2021 ರ ಟ್ರಾನ್ಸ್ ಏರ್ ಕಾರ್ಗೋ ಫ್ಲೈಟ್ ಮುಳುಗಲು ಕಾರಣ: ವರದಿ

author img

By

Published : Jun 17, 2023, 1:22 PM IST

Updated : Jun 17, 2023, 1:43 PM IST

ಟ್ರಾನ್ಸ್ ಏರ್ ಕಾರ್ಗೋ ಫ್ಲೈಟ್
ಟ್ರಾನ್ಸ್ ಏರ್ ಕಾರ್ಗೋ ಫ್ಲೈಟ್

ಜುಲೈ 2, 2021 ರಲ್ಲಿ ಸಾಗರದ ಮಧ್ಯೆ ಮುಳುಗಿದ್ದ ಬೋಯಿಂಗ್ 737 ಟ್ರಾನ್ಸ್ ಏರ್ ಕಾರ್ಗೋ ಫ್ಲೈಟ್ ಅಪಘಾತಕ್ಕೆ ಸಂಬಂಧಿಸಿದಂತೆ ಫೆಡರಲ್ ತನಿಖಾಧಿಕಾರಿಗಳು ನಿಖರ ಕಾರಣ ತಿಳಿಸಿದ್ದಾರೆ.

ವಾಷಿಂಗ್ಟನ್(ಅಮೆರಿಕ): 46 ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದ ಬೋಯಿಂಗ್ 737 ಟ್ರಾನ್ಸ್ ಏರ್ ಕಾರ್ಗೋ ಫ್ಲೈಟ್ 2021 ರಲ್ಲಿ ಹವಾಯಿ ಸಾಗರದಲ್ಲಿ ಮುಳುಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಫೆಡರಲ್ ತನಿಖಾಧಿಕಾರಿಗಳು ವರದಿ ನೀಡಿದ್ದಾರೆ. ಫೈಲಟ್​ಗಳು ವಿಫಲಗೊಳ್ಳುತ್ತಿರುವ ಎಂಜಿನ್​ ಅನ್ನು ಗುರುತಿಸುವಲ್ಲಿ ವಿಫಲರಾಗಿದ್ದರು ಎಂದು ವರದಿಯಲ್ಲಿ ಹೇಳಿದ್ದಾರೆ.

ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಕ್ಯಾಪ್ಟನ್‌ನ ಮೇಲೆ ಹೆಚ್ಚಿನ ಹೊರೆ ಹೊರೆಸಿತ್ತು. ಜೊತೆಗೆ ಕಳಪೆ ಸಂವಹನ, ಇಬ್ಬರು ಪೈಲಟ್‌ಗಳ ನಡುವಿನ ಟೀಮ್‌ವರ್ಕ್ ಕೊರತೆಯೇ ಅಪಘಾತಕ್ಕೆ ಕಾರಣವಾಗಿದೆ. ಈ ಅಪಘಾತದಲ್ಲಿ ಕ್ಯಾಪ್ಟನ್ ಗಂಭೀರವಾಗಿ ಗಾಯಗೊಂಡಿದ್ದರು, ಸಹ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿತ್ತು. ವಿಮಾನವು ಅಪಘಾತದಲ್ಲಿ ನಾಶವಾಗಿತ್ತು ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯೇ ಹೇಳಿದೆ.

ಬೋಯಿಂಗ್ 737 ವಿಮಾನವು ರೋಡ್ಸ್ ಏವಿಯೇಷನ್ ವಿಮಾನದ ಒಡೆತನದಲ್ಲಿತ್ತು ಮತ್ತು ಟ್ರಾನ್ಸ್ ಏರ್ ಕಾರ್ಗೋ ಫ್ಲೈಟ್ ಆಗಿ ಕಾರ್ಯನಿರ್ವಹಿಸುತ್ತಿತ್ತು. ಈ ಬೋಯಿಂಗ್ 737 ವಿಮಾನವು ಜುಲೈ 2, 2021 ರ ಮುಂಜಾನೆ ಹೊನೊಲುವಿನಿಂದ ಹವಾಯಿಯ ಕಹುಲುಯಿಗೆ ಹಾರಲು ಯೋಜಿಸಲಾಗಿತ್ತು. ಆದರೆ, ಹೊನೊಲುಲು ವಿಮಾನ ನಿಲ್ದಾಣದಿಂದ ಸುಮಾರು 5 ಮೈಲಿಗಳಷ್ಟು ದೂರದಲ್ಲಿರುವ ಮಮಲಾ ಕೊಲ್ಲಿಯಲ್ಲಿ ಹಾರಾಟ ನಡೆಸಿತ್ತು. ಹಾರಾಟದ ವೇಳೆ ಎರಡೂ ಇಂಜಿನ್​ಗಳು ಸರಿಯಾಗಿಯೇ ಕಾರ್ಯನಿರ್ವಹಿಸಿದ್ದವು. ವಿಮಾನ ಟೇಕ್​ಆಫ್ ಆಗುವ ಸಂದರ್ಭದಲ್ಲಿ ​ಸೂಚಕಗಳೆಲ್ಲವು ಸಾಮಾನ್ಯವಾಗಿಯೇ ಎಂದಿನಂತೆ ಕಾಣಿಸಿಕೊಂಡಿದ್ದವು ಎಂದು ಕ್ಯಾಪ್ಟನ್ ತನಿಖಾಧಿಕಾರಿಗಳಿಗೆ ತಿಳಿಸಿದ್ದರೂ ಕೂಡಾ.

ಆದರೆ, ವಿಮಾನ ಹಾರಾಟ ನಡೆಸುತ್ತಿದ್ದಂತೆಯೇ ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಥಡ್ಡಿಂಗ್ ಶಬ್ದವನ್ನು ಸೆರೆಹಿಡಿದಿದೆ, ನಂತರ ವಿಮಾನದಲ್ಲಿ ಕಂಪನವಾಗಲು ಶುರುವಾಗಿದೆ. ಈ ಸಂದರ್ಭದಲ್ಲಿ ಇಬ್ಬರು ಪೈಲಟ್‌ಗಳು ವಿಮಾನದ ಬಲ ಇಂಜಿನ್​ನಲ್ಲಿ ತಾಂತ್ರಿಕ ದೋಷ ಉಂಟಾಗಿರುವುದನ್ನು ಗಮನಿಸಿದ್ದಾರೆ. ಇದರಿಂದ ವಿಮಾನ ಒಂದೇ ಇಂಜಿನ್​ನಿಂದ ಹಾರಾಟ ನಡೆಸಿದ ಪರಿಣಾಮ ಎಡದಲ್ಲಿದ್ದ ಇಂಜಿನ್​ ಹೆಚ್ಚು ಬಿಸಿಯಾಗಿ ಆ ಎಂಜಿನ್​ ಕೂಡ ಹಾನಿಗೆ ಒಳಗಾಗಿದೆ. ಪರಿಣಾಮ ಐಡಲ್ ಪವರ್‌ ಸ್ಥಿರವಾಗಿ ಕಡಿಮೆಯಾಗಿದೆ. ಇದರಿಂದ ಫೈಲಟ್​ಗಳಿಬ್ಬರು ವಿಮಾನವನ್ನು ಸಾಗರದ ನಡುವೆ ತುರ್ತು ಸ್ಪರ್ಶ ಮಾಡಲು ನಿರ್ಧರಿಸಿದ್ದಾರೆ ಎಂದು NTSB ಹೇಳಿದೆ.

ವಿಮಾನದಲ್ಲಿದ್ದ 58 ವರ್ಷದ ಕ್ಯಾಪ್ಟನ್ ಅವರು ವೃತ್ತಿ ಜೀವನದಲ್ಲಿ ಒಟ್ಟು 15,000 ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿದ ಅನುಭವ ಹೊಂದಿದ್ದರು. ಮತ್ತು ಸಹ-ಪೈಲಟ್ 5,000 ಗಂಟೆಗಳಿಗಿಂತ ಹೆಚ್ಚು ಸಮಯ ವಿಮಾನ ಹಾರಾಟ ನಡೆಸಿದ ಅನುಭವ ಹೊಂದಿದ್ದರು. ಅಪಘಾತಕ್ಕೆ ಒಳಗಾದ ವಿಮಾನದಲ್ಲಿದ್ದ ಪ್ರಾಟ್ ಮತ್ತು ವಿಟ್ನಿ ಎಂಜಿನ್‌ಗಳನ್ನು 1968 ಮತ್ತು 1971 ರಲ್ಲಿ ತಯಾರಿಸಲಾಗಿತ್ತು. ಕೊನೆಯದಾಗಿ 2019 ರಲ್ಲಿ ನಿರ್ವಹಣೆಗಾಗಿ ಇಡಲಾಗಿತ್ತು ಎಂದು ಎನ್‌ಟಿಎಸ್‌ಬಿ ಹೇಳಿದೆ.

ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಪ್ರಕಾರ, ವಿಮಾನವು ಅಗತ್ಯವಿರುವ ಎಲ್ಲಾ ತಪಾಸಣೆ ಮತ್ತು ನಿರ್ವಹಣಾ ತಪಾಸಣೆಗೆ ಒಳಗಾಗಿತ್ತು ಮತ್ತು ಅಪಘಾತದ ಹಿಂದಿನ ದಿನ ಯಾವುದೇ ತೊಂದರೆಗಳಿಲ್ಲದ ದಿನನಿತ್ಯದ ತಪಾಸಣೆಗೆ ಒಳಗಾಯಿತು. ಸಾಗರದ ಮೇಲ್ಮೈಯಿಂದ ಸುಮಾರು 400 ಅಡಿಗಳಷ್ಟು ಕೆಳಗೆ ಬಾಕಿಯಾಗಿದ್ದ ವಿಮಾನವನ್ನು ಮರುಪಡೆಯಲಾಗಿದೆ. ಆ ವೇಳೆ ವಿಫಲವಾದ ಎಂಜಿನ್‌ನಲ್ಲಿ ಕತ್ತರಿಸಿದ ಫ್ಯಾನ್ ಬ್ಲೇಡ್‌ಗಳು ಕಂಡುಬಂದಿವೆ. ಅಪಘಾತದ ನಂತರ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ರೋಡ್ಸ್ ಏವಿಯೇಷನ್ ತನ್ನ ​​ವಿಮಾನಗಳನ್ನು ಸ್ಥಗಿತಗೊಳಿಸಿತ್ತು.

ಇದನ್ನೂ ಓದಿ: ಗ್ರೀಸ್‌ ದೋಣಿ ದುರಂತದಲ್ಲಿ 78 ಜನರ ಸಾವು: 500 ಕ್ಕೂ ಅಧಿಕ ಮಂದಿ ನಾಪತ್ತೆ

Last Updated :Jun 17, 2023, 1:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.