ETV Bharat / international

ಮಾನವ ಗೂಢಚಾರಿಗಳ ಸ್ಥಾನವನ್ನು ಎಐ ಪಡೆಯಲು ಸಾಧ್ಯವೇ ಇಲ್ಲ: ಬ್ರಿಟನ್​ ಗುಪ್ತಚರ ಅಧಿಕಾರಿ

author img

By

Published : Jul 19, 2023, 5:28 PM IST

ಎಐಗಳು ಮಾನವ ಏಜೆಂಟ್​ಗಳ ವಿಶಿಷ್ಟ ಗುಣಲಕ್ಷಣಗಳ ಸಾಮರ್ಥ್ಯವನ್ನು ಹೊಂದಲು ಸಾಧ್ಯವಿಲ್ಲ ಎಂದು ಬ್ರಿಟನ್​ ಗುಪ್ತಚರ ಅಧಿಕಾರಿಯೊಬ್ಬರು ತಿಳಿದ್ದಾರೆ.

Britain's MI6 intelligence chief says AI won't replace human spies
Britain's MI6 intelligence chief says AI won't replace human spies

ಪ್ರಾಗ್​( ಜೆಕ್​​ ರಿಪಬ್ಲಿಕ್​) ​: ಕೃತಕ ಬುದ್ದಿಮತ್ತೆ ಜಗತ್ತಿನ ಬೇಹುಗಾರಿಕೆಯನ್ನು ಬದಲಾಯಿಸುತ್ತದೆ. ಹೊರತು, ಮಾನವ ಗೂಢಚಾರಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಬ್ರಿಟನ್​ನ ಎಂಐ6 ಇಂಟೆಲಿಜೆನ್ಸ್​ ಏಜೆನ್ಸಿಯ ಮುಖ್ಯಸ್ಥರು ತಿಳಿಸಿದ್ದಾರೆ. ಇಂಗ್ಲೆಂಡ್​ನ ಫಾರಿನ್​ ಇಂಟೆಲಿಜೆನ್ಸಿ ಏಜೆನ್ಸಿ ನಿರ್ದೇಶಕ ರಿಚರ್ಡ್​​ ಮೂರ್ರೆ​​ ಈ ಕುರಿತು ಮಾತನಾಡಿದ್ದು, ರಷ್ಯಾ ಮತ್ತು ಇರಾನ್‌ನಿಂದ ಪಶ್ಚಿಮದಲ್ಲಿ ಬೆದರಿಕೆ ಹೆಚ್ಚುತ್ತಿದೆ. ವೇಗವಾಗಿ ವಿಕಸನಗೊಳ್ಳುತ್ತಿರುವ ಮಷಿನ್​ ಲರ್ನಿಂಗ್​ ಯುಗದಲ್ಲಿ ಮಾನವ ಅಂಶಗಳು ನಿರ್ಣಾಯಕವಾಗಿ ಉಳಿಯುತ್ತದೆ ಎಂದು ವಾದಿಸುತ್ತಾರೆ

ಮಾನವ ಗೂಢಾಚಾರಿಗೆ ಸರಿಸಮರಿಲ್ಲ: ಎಐ ಅಗಾಧವಾಗಿ, ಸುಲಭವಾಗಿ ಕೇಳಿದವರಿಗೆ ಮಾಹಿತಿ ನೀಡಲಿದೆ. ಅನೇಕರ ಉದ್ಯೋಗ ಕಸಿಯಲಾರಂಬಿಸಿದ ಇದು ನನ್ನಂತಹ ಗುಪ್ತಚರ ಸೇವೆ ನೀಡುವವರನ್ನು ಈ ಉದ್ಯಮದಿಂದ ಹೊರ ಹಾಕಲಿದೆಯೇ ಎಂದು ಪ್ರಶ್ನಿಸಿದರು. ನಿಜ ಹೇಳಬೇಕು ಎಂದರೆ, ಇದು ವಾಸ್ತವಕ್ಕೆ ವಿರುದ್ಧವಾಗಿದೆ. ಎಐ ಸಾಗರದಷ್ಟು ಮಾಹಿತಿಗಳನ್ನು ತೆರೆದಿಟ್ಟಿದೆ. ರಹಸ್ಯಗಳು ಇವುಗಳನ್ನು ಮೀರಿದ ವಿಷಯವಾಗಿದೆ ಎಂದು ಗುಪ್ತಚರ ಅಧಿಕಾರಿ ತಿಳಿಸಿದ್ದಾರೆ.

ಪಶ್ಚಿಮಗಳು ಇದೀಗ ಎಐ ಹಿಂದೆ ಹೆಚ್ಚು ಓಡುತ್ತಿದೆ ಎಂದು ಇದೇ ವೇಳೆ ಮೊರ್ರೆ​ ಎಚ್ಚರಿಸಿದರು. ಮಾನವ ಏಜೆಂಟ್​ಗಳ ವಿಶಿಷ್ಟ ಗುಣಲಕ್ಷಣಗಳ ಹೊಂದಿದ್ದು ಇದು ಹೆಚ್ಚು ಮಹತ್ವದ್ದಾಗಿರುತ್ತವೆ. ಸರ್ಕಾರ ಅಥವಾ ಭಯೋತ್ಪಾದಕ ಗುಂಪುಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಮಾನವ ಗೂಢಾಚಾರಿ ಸಾಮರ್ಥ್ಯವನ್ನು ಅವರು ಒತ್ತಿ ಹೇಳಿದರು. ಎಐ ದೊಡ್ಡ ಅಪಾಯದ ಬೆದರಿಕೆ ಕುರಿತು ಎಚ್ಚರಿಸಿದ ಅವರು, ಬ್ರಿಟನ್​ನ ವಿದೇಶಿ ಗುಪ್ತಚರ ಸಂಸ್ಥೆಯಲ್ಲಿನ ತಮ್ಮ ಸಿಬ್ಬಂದಿ ತಮ್ಮ ಕೌಶಲ್ಯವನ್ನು ಈ ಎಐನ ಬೃಹತ್​ ದತ್ತಾಂಶದೊಂದಿಗೆ ಸಂಯೋಜಿಸುತ್ತಿದ್ದಾರೆ.

ಸ್ಪೈಕ್ರಾಫ್ಟ್​​ ಬ್ರಿಟಬ್​ ಇಂಟಲಿಜೆನ್ಸ್​ ಸೇವೆಗಳಿಗೆ ಇದು ಹೊಸದಾಗಿದೆ. 1962ರಲ್ಲಿ ಇದರ ಅಸ್ತಿತ್ವ ಇತ್ತಾ ಎಂಬ ಬಗ್ಗೆ ಕೂಡ ಸ್ಪಷ್ಟನೆ ನೀಡಲು ಸರ್ಕಾರ ನಿರಾಕರಿಸಿದೆ. ಇದರ ನಾಯಕರ ಸಾರ್ವಜನಿಕ ನಾಯಕರ ಭಾಷಣಗಳು ವಿರಳವಾಗಿದೆ. ಈ ಕುರಿತು ಯಾವುದೇ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ರಷ್ಯಾ ಅಧ್ಯಕ್ಷ ವಾಡ್ಲಿಮಿರ್​ ಪುಟಿನ್​ ತನ್ನ ಗುರಿ ಸಾಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬ್ರಿಟಿಷ್​ ರಾಯಭಾರಿ ನಿವಾಸದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ತಿಳಿಸಿದರು.

ರಹಸ್ಯ ಗುಪ್ತಚರ ಸೇವೆ ಅಥವಾ ಎಂಐ6ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಬಳಿಕ ಮೊರ್ರೆ​​ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದಾರೆ. ಅದು ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಅವರು ಎಐ ಬೆದರಿಕೆ ಕುರಿತು ಮಾತನಾಡಿದ್ದಾರೆ. ಬ್ರಿಟನ್​ ಮತ್ತು ಅದರ ಮಿತ್ರಪಕ್ಷಗಳು ಅಂತಾ ರಾಷ್ಟ್ರೀಯ ನಿಯಮಗಳ ಆಧಾರಿತ ವ್ಯವಸ್ಥೆಯನ್ನು ಉಲ್ಲಂಘಿಸುವ ರಷ್ಯಾದ ಚಟುವಟಿಕೆ ವಿರೋಧಿಸಬೇಕು ಮತ್ತು ತಡೆಯಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟಿಟಿಪಿ ಉಗ್ರರಿಗೆ ಬೆದರಿದ ಇಸ್ಲಾಮಾಬಾದ್: ಹದಗೆಟ್ಟ ಅಫ್ಘಾನಿಸ್ತಾನ - ಪಾಕಿಸ್ತಾನ ಸಂಬಂಧ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.