ETV Bharat / international

ಖ್ಯಾತ ಅಫ್ಘನ್ ಗಾಯಕಿ ಹಸಿಬಾ ನೂರಿ ಪಾಕಿಸ್ತಾನದಲ್ಲಿ ಕೊಲೆ

author img

By

Published : Jul 17, 2023, 2:11 PM IST

ಅಫ್ಘಾನಿಸ್ತಾನದ ಖ್ಯಾತ ಗಾಯಕಿ ಹಸಿಬಾ ನೂರಿ ಅವರನ್ನು ಪಾಕಿಸ್ತಾನದಲ್ಲಿ ಉಗ್ರವಾದಿಗಳು ಗುಂಡಿಟ್ಟು ಕೊಲೆ ಮಾಡಿದ್ದಾರೆ.

Afghan singer who sought refuge in Pakistan, killed
Afghan singer who sought refuge in Pakistan, killed

ಕಾಬೂಲ್ (ಅಫ್ಘಾನಿಸ್ತಾನ) : ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ ಅಫ್ಘಾನಿಸ್ತಾನದ ಖ್ಯಾತ ಗಾಯಕಿ ಹಸಿಬಾ ನೂರಿ ಅವರು ಖೈಬರ್ ಪಖ್ತುನಖ್ವಾ ಪ್ರಾಂತ್ಯದಲ್ಲಿ ಅಪರಿಚಿತ ದುಷ್ಕರ್ಮಿಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹತ್ಯೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎಂದು ಅಫ್ಘಾನಿಸ್ತಾನ ಮೂಲದ ಟಿವಿ ವರದಿ ಮಾಡಿದೆ. ಘಟನೆಯ ಕುರಿತು ಪಾಕಿಸ್ತಾನ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ಭಾನುವಾರ ತಿಳಿಸಿವೆ.

ಸ್ನೇಹಿತ ಮತ್ತು ಸಹ ಗಾಯಕ ಖೋಸ್ಬೋ ಅಹ್ಮದಿ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ನೂರಿ ಅವರ ಸಾವನ್ನು ಖಚಿತಪಡಿಸಿದ್ದಾರೆ. ಆದಾಗ್ಯೂ, ಆಕೆಯ ಸಾವಿನ ಸಂದರ್ಭಗಳ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ. ಸುಮಾರು ಒಂದು ವರ್ಷದ ಹಿಂದೆ ಅಫ್ಘಾನಿಸ್ತಾನ ತೊರೆದ ನಂತರ ನೂರಿ ಇಸ್ಲಾಮಾಬಾದ್‌ನಲ್ಲಿ ಆಶ್ರಯ ಪಡೆದಿದ್ದಳು. ಅಲ್ಲಿ ಅವಳು ಕ್ರಮೇಣ ತನ್ನ ಕಲಾ ಚಟುವಟಿಕೆಗಳನ್ನು ಪುನರಾರಂಭಿಸಿದ್ದಳು. ಆಧುನಿಕ ಶೈಲಿಯಲ್ಲಿ ಸಾಂಪ್ರದಾಯಿಕ ಜಾನಪದ ಗೀತೆಗಳನ್ನು ಹಾಡುವುದಕ್ಕಾಗಿ ನೂರಿ ಪ್ರಸಿದ್ಧಳಾಗಿದ್ದಳು.

ಕೆಲ ವರದಿಗಳ ಪ್ರಕಾರ ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ಹಸಿಬಾ ನೂರಿ ವರ್ಷದ ಹಿಂದೆ ಅಫ್ಘಾನಿಸ್ತಾನದಿಂದ ಓಡಿಹೋಗಿ ನಿರಾಶ್ರಿತರಾಗಿ ಪಾಕಿಸ್ತಾನದಲ್ಲಿ ನೆಲೆಸಿದ್ದರು. ಮಹಿಳೆಯರ ಹಕ್ಕುಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ತೀವ್ರ ನಿರ್ಬಂಧಗಳನ್ನು ಹೇರಿರುವ ತಾಲಿಬಾನ್ ಆಡಳಿತದ ಅಡಿಯಲ್ಲಿ ತಮ್ಮ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಭಯಭೀತರಾಗಿ ದೇಶವನ್ನು ತೊರೆದ ಅನೇಕ ಅಫ್ಘಾನ್ ಕಲಾವಿದರು ಮತ್ತು ಸೆಲೆಬ್ರಿಟಿಗಳಲ್ಲಿ ಅವರೂ ಒಬ್ಬರು.

2021ರಲ್ಲಿ ನಡೆದಿತ್ತು ಜಾನಪದ ಗಾಯಕ ಫವಾದ್ ಅಂದ್ರಾಬಿ ಕೊಲೆ: 2021 ರಲ್ಲಿ ಅಫ್ಘಾನಿಸ್ತಾನದ ಜಾನಪದ ಗಾಯಕ ಫವಾದ್ ಅಂದ್ರಾಬಿಯನ್ನು ಕೊಲೆ ಮಾಡಲಾಗಿತ್ತು. ಕಾಬೂಲ್‌ನ ಉತ್ತರದ ಪರ್ವತ ಪ್ರಾಂತ್ಯದಲ್ಲಿ ತಾಲಿಬಾನ್‌ಗಳು ಅವರನ್ನು ಮನೆಯಿಂದ ಎಳೆದೊಯ್ದು ಕೊಂದು ಹಾಕಿದ್ದರು. ಉತ್ತರ ಬಾಗ್ಲಾನ್ ಪ್ರಾಂತ್ಯದ ಅಂದಾರಬ್ ಕಣಿವೆಯಲ್ಲಿರುವ ಜಮೀನಿನಲ್ಲಿ ಗಾಯಕ ಅಂದ್ರಾಬಿ ತಲೆಗೆ ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ಅವರ ಮಗ ಜವಾದ್ ತಿಳಿಸಿದ್ದರು.

ಇವರು ಅಂದ್ರಾಬಿ ಕಣಿವೆಯ ನಿವಾಸಿಯಾಗಿದ್ದರಿಂದ ಆ ಹೆಸರು ಅವರ ಹೆಸರಿನೊಂದಿಗೆ ಸೇರಿಕೊಂಡಿತ್ತು. ಅಂದ್ರಾಬಿ ಕಣಿವೆ ಕಾಬೂಲ್‌ನಿಂದ ಉತ್ತರಕ್ಕೆ 100 ಕಿಲೋಮೀಟರ್ (60 ಮೈಲುಗಳು) ಬಾಗ್ಲಾನ್ ಪ್ರಾಂತ್ಯದ ಪ್ರದೇಶದಲ್ಲಿದೆ. ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಸಾಮಾನ್ಯ ಜನರು, ಕಲಾವಿದರು, ಗಾಯಕರು, ಪತ್ರಕರ್ತರು ಸೇರಿದಂತೆ ಎಲ್ಲರ ಮೇಲೂ ದೌರ್ಜನ್ಯ ನಡೆಯುತ್ತಿವೆ.

ಪಾಕಿಸ್ತಾನಲ್ಲಿ 1.4 ಮಿಲಿಯನ್ ನಿರಾಶ್ರಿತರು: UNHCR ಪ್ರಕಾರ ಪಾಕಿಸ್ತಾನದಲ್ಲಿ ಸುಮಾರು 1.4 ಮಿಲಿಯನ್ ನೋಂದಾಯಿತ ಆಫ್ಘನ್ ನಿರಾಶ್ರಿತರಿದ್ದಾರೆ. ಅಲ್ಲದೆ ನೋಂದಾಯಿಸಿಕೊಳ್ಳದ ಅನೇಕ ನಿರಾಶ್ರಿತರು ಪಾಕಿಸ್ತಾನದಲ್ಲಿದ್ದಾರೆ. ಅಫ್ಘಾನ್ ನಿರಾಶ್ರಿತರು ಆದಷ್ಟೂ ಬೇಗನೆ ತಮ್ಮ ದೇಶಕ್ಕೆ ಮರಳಿ ಹೋಗುವಂತೆ ಪಾಕಿಸ್ತಾನ ಪದೇ ಪದೆ ಮನವಿ ಮಾಡಿದೆ.

ಇದನ್ನೂ ಓದಿ : US-Russia Cold War: ಸರ್ಕಾರಿ ಅಧಿಕಾರಿಗಳು ಐಫೋನ್ ಬಳಸುವಂತಿಲ್ಲ- ರಷ್ಯಾ ಸರ್ಕಾರದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.